ಕಿಚ್ಚು

Posted on: December 16, 2017

Kichchu-(1)ಸುದೀಪ್‌ ಸದ್ದಿಲ್ಲದೇ ಸಿನಿಮಾವೊಂದರಲ್ಲಿ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದಾರೆ. ಅದು “ಕಿಚ್ಚು’ವಿನಲ್ಲಿ. “ರಾಜು ಕನ್ನಡ ಮೀಡಿಯಂ’ನಲ್ಲಿ ಸುದೀಪ್‌ ಅತಿಥಿ ಪಾತ್ರ ಮಾಡಿರೋದು ನಿಮಗೆ ಗೊತ್ತಿದೆ. “ಕಿಚ್ಚು’ವಿನಲ್ಲಿ ಯಾವಾಗ ಮಾಡಿದ್ರು ಎಂದು ನೀವು ಕೇಳಬಹುದು. ಸುಮಾರು ಆರು ತಿಂಗಳ ಹಿಂದೆಯೇ ಸುದೀಪ್‌ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದ್ದಾರೆ.

“ಕಿಚ್ಚು’ವಿನಲ್ಲಿ ಸುದೀಪ್‌ ಸುಮಾರು 10 ನಿಮಿಷಗಳ ಕಾಲ ಕಾಣಿಸಿಕೊಳ್ಳಲಿದ್ದು, ಅವರಿಲ್ಲಿ ಸಮಾಜ ಸೇವೆ ಮಾಡುವ ಡಾಕ್ಟರ್‌ ಪಾತ್ರ ಮಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಕಾಡು ಉಳಿಸಿ ಎಂಬ ಕಾನ್ಸೆಪ್ಟ್ನಡಿ ಈ ಸಿನಿಮಾ ತಯಾರಾಗಿದ್ದು, ಪ್ರದೀಪ್‌ರಾಜ್‌ ಚಿತ್ರದ ನಿರ್ದೇಶಕರು.

ಇತ್ತೀಚೆಗೆ ನಿಧನರಾದ ಧ್ರುವ ಶರ್ಮಾ ಈ ಚಿತ್ರದ ನಾಯಕ. ಅಭಿನಯ ನಾಯಕಿ. ಚಿತ್ರದಲ್ಲಿ ರಾಗಿಣಿ ಪ್ರಮುಖ ಪಾತ್ರ ಮಾಡಿದ್ದು, ಕಾಫಿಎಸ್ಟೇಟ್‌ನ ಕೆಲಸಗಾರ್ತಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಸಾಯಿಕುಮಾರ್‌, ಸುಚೇಂದ್ರ ಪ್ರಸಾದ್‌ ಕೂಡಾ ನಟಿಸಿದ್ದು, ಡಿ.22ಕ್ಕೆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಲಿದೆ.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *