ಚೂರಿಕಟ್ಟೆ

Posted on: December 11, 2017

Choori-Katteಒಂದು ಚಿತ್ರ ಅಂದಮೇಲೆ ಒಬ್ಬ ಲೈಟ್‌ಬಾಯ್‌ನಿಂದ ಹಿಡಿದು ಪ್ರತಿಯೊಬ್ಬರೂ ಕಷ್ಟಪಟ್ಟು ಕೆಲಸ ಮಾಡಲೇಬೇಕು. ಎಲ್ಲರ ಪರಿಶ್ರಮದಿಂದಲೇ ಒಂದೊಳ್ಳೆ ಚಿತ್ರ ಹೊರ ಬರೋದು. ಎಷ್ಟೋ ಮಂದಿ ಒಂದು ಚಿತ್ರ ಶುರುವಾಗಿ, ಮುಗಿಯೋ ಹೊತ್ತಿಗೆ ಎಷ್ಟೆಲ್ಲಾ ಕಷ್ಟಪಟ್ಟಿರುತ್ತಾರೆ. ಯೂನಿಟ್‌ನವರಂತೂ ಬೆವರು ಸುರಿಸಿ ಕೆಲಸ ಮಾಡಿರುತ್ತಾರೆ. ಅಷ್ಟೇ ಅಲ್ಲ, ಕ್ಯಾಮೆರಾ ಮುಂದೆ ನಿಲ್ಲುವ ನಟ, ನಟಿಯರ ಶ್ರಮವೂ ಇದಕ್ಕೆ ಹೊರತಲ್ಲ.

ಸಿನಿಮಾಗಾಗಿ, ಕಷ್ಟಪಡೋದು, ಬೆವರು ಸುರಿಸೋದು ಹೊಸ ಸುದ್ದಿಯೇನಲ್ಲ. ಆದರೆ, ಸಿನಿಮಾಗೋಸ್ಕರ ರಕ್ತ ಸುರಿಸೋದು ನಿಜಕ್ಕೂ ಹೊಸ ಸುದ್ದಿಯೇ. ಇಲ್ಲೀಗ ಹೇಳ ಹೊರಟಿರೋದು ನಟಿಯೊಬ್ಬರು ಸಿನಿಮಾಗಾಗಿ ರಕ್ತ ಸುರಿಸಿದ್ದಾರೆ! ಹೌದು, ರಘು ಶಿವಮೊಗ್ಗ ನಿರ್ದೇಶನದ “ಚೂರಿಕಟ್ಟೆ’ ಚಿತ್ರದಲ್ಲಿ ಅಂಥದ್ದೊಂದು ಘಟನೆ ನಡೆದಿದೆ. ಈ ಚಿತ್ರಕ್ಕೆ ಪ್ರವೀಣ್‌ ನಾಯಕ, ಪ್ರೇರಣಾ ನಾಯಕಿ.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *