ಜ.೧೪ರಂದು ನಮ್ಮ ಸುಂಟಿಕೊಪ್ಪ ಬಳಗದ ವಾರ್ಷಿಕೋತ್ಸವ

Posted on: December 6, 2017

Namma suntikoppa Logoಸುಂಟಿಕೊಪ್ಪ :- ನಮ್ಮ ಸುಂಟಿಕೊಪ್ಪ ಬಳಗದ ವಾರ್ಷಿಕೋತ್ಸವ ಕಾರ್ಯಕ್ರಮ ೨೦೧೮ರ ಜ.೧೪ರಂದು ನಡೆಯಲಿದ್ದು, ವಿಭಿನ್ನ ಕಾರ್ಯಕ್ರಮ ಆಯೋಜಿಸುವ ನಿಟ್ಟಿನಲ್ಲಿ ಪೂರ್ವ ಸಿದ್ಧತಾ ಸಭೆಯು ಬಳಗದ ಝಾಯ್ದ್ ಅಹ್ಮದ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸುಂಟಿಕೊಪ್ಪದಲ್ಲಿ ನಡೆಯಿತು.

ಸುಂಟಿಕೊಪ್ಪದಲ್ಲಿ ನಡೆಯಲಿರುವ ವಾರ್ಷಿಕೋತ್ಸವ ಕಾರ್ಯಕ್ರಮದ ಯಶಸ್ವಿಗೆ ಸ್ವಾಗತ ಸಮಿತಿ, ಹಣಕಾಸು ಸಮಿತಿ, ಸಾಂಸ್ಕೃತಿಕ ಸಮಿತಿ, ಕ್ರೀಡಾ ಸಮಿತಿ, ವೇದಿಕೆ ಸಮಿತಿ, ತಾಂತ್ರಿಕ ಸಮಿತಿ, ಆಹಾರ ಸಮಿತಿ ಹಾಗೂ ಪ್ರಚಾರ ಸಮಿತಿಯನ್ನು ರಚಿಸಲಾಯಿತು.
ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕ್ರೀಡಾ ಸಮಿತಿಯಿಂದ ಡಿ.೩೧ರಂದು ಮಹಿಳೆಯರಿಗೆ ಹಾಗೂ ಜ.೭ರಂದು ಪುರುಷರಿಗೆ ನಾನಾ ಮನರಂಜನಾ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಅನಿಲ್ ಕುಮಾರ್ ೯೮೪೫೦೨೮೯೧೮, ಕ್ರೀಡಾಕೂಟದ ಬಗ್ಗೆ ಸಮೀರ್ ೯೧೧೩೮೯೪೭೨೫ ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *