ಪುರುಷರ ಸೌಂದರ್ಯಕ್ಕೆ ಕೆಲವೊಂದು ಸಲಹೆಗಳು

Posted on: December 13, 2017

Hairstyles For Man Hairstyles For Men Types Of Haircut For Men Guy mens haircuts Top guy hair styles xa Warm -

ನೀವೇನೆ ಹೇಳುವುದಿದ್ದರೂ ಹೆಂಗಸರಿಗೆ, ಮಕ್ಕಳಿಗೆ ಮಾತ್ರ. ನಮಗೂ ಏನಾದರೂ ಸೌಂದರ್ಯದ ಟಿಪ್ಸ್ ಕೊಡಿ ಪ್ಲೀಸ್ ಎಂದು ಹೇಳುವ ಸೌಂದರ್ಯಪ್ರಿಯ ಗಂಡಸರು ಹೆಂಗಸರಿಗಿಂತ ಹೆಚ್ಚಾಗಿ ಅಲಂಕಾರ ಮಾಡಿಕೊಳ್ಳುತ್ತಾರೆ ಎಂದರೆ ನೀವು ನಂಬಲೇಬೇಕು. ಪ್ಯಾರಿಸ್‌ನ ಸ್ಟ್ರಾಬೆರಿಕ್ ಅಧ್ಯಯನ ಸಂಸ್ಥೆ ನಡೆಸಿರುವ ಅಧ್ಯಯನದ ಪ್ರಕಾರ ಸ್ತ್ರೀಯರಷ್ಟೇ ಪುರುಷರೂ ಸೌಂದರ್ಯದ ಕಾಳಜಿ ಹೊಂದಿದ್ದಾರಂತೆ.

ಸುಂದರ ಹೇರ್‌ಸ್ಟೈಲ್ಸ್, ಬಾಡಿಲೋಷನ್, ಮುಖಕ್ಕೆ ಫೇರ್‌ನೆಸ್ ಕ್ರೀಂ ಹಾಕಿಕೊಳ್ಳುವ ಪ್ರತಿ ಪುರುಷನೂ ತಾನು ಸಣ್ಣಗೆ, ಬೆಳ್ಳಗೆ ಕಾಣಿಸಿಕೊಳ್ಳಲು ಹರಸಾಹಸ ಮಾಡುತ್ತಾನೆ. ಆದರೆ ಈ ವಿಚಾರದಲ್ಲಿ ನಾಚಿಕೆ ಮಾತ್ರ ಹೆಚ್ಚು. ದ್ಡುಡು ಇದ್ದರೂ ಸೌಂದರ್ಯವರ್ಧಕ

ಖರೀದಿಸುವುದಿಲ್ಲವಂತೆ. ಬೇರೆಯವರು ತನ್ನ ಬಗ್ಗೆ ಏನಾದರೂ ಅಂದುಕೊಂಡಾರು ಎಂಬ ಅಂಜಿಕೆ. ಆದರೆ ನಗರಗಳಲ್ಲಿ ಇತ್ತೀಚಿಗೆ ಬ್ಯೂಟಿಪಾರ್ಲರ್‌ಗಳಲ್ಲಿ ಪುರುಷರ ಸಂಖ್ಯೆಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಸಂಶೋಧನೆ ಹೇಳಿದೆ.
men model 1
ಚರ್ಮದ ರಕ್ಷಣೆ
ಮೂವತ್ತು ವರ್ಷಗಳನ್ನು ದಾಟಿದ ಪ್ರತಿಯೊಬ್ಬ ಗಂಡಸೂ ತಿಂಗಳಿಗೊಮ್ಮೆ ಫೇಶಿಯಲ್ ಮಾಡಿಸಿಕೊಳ್ಳಬೇಕು. ಕಾಲಮಾನಕ್ಕೆ ತಕ್ಕ ಫೇಶಿಯಲ್ ಸೂಕ್ತ. ತ್ವಚೆ ಮದುವಾಗಲು ಸೌತೆಕಾಯಿ ತುರಿದು ಅದಕ್ಕೆ ನಿಂಬೆರಸ ಸೇರಿಸಿ ಮುಖಕ್ಕೆ ಉಜ್ಜಿಕೊಳ್ಳಬಹುದು. ಕಳಿತ ಬಾಳೆಹಣ್ಣಿನ ಪ್ಯಾಕ್ ಹಾಕಿ ಅರ್ಧ ಗಂಟೆ ಬಿಟ್ಟು ತೊಳೆಯಬಹುದು. ಪ್ರತಿನಿತ್ಯ ಕ್ಲೆನ್ಸರ್ ಉಪಯೋಗಿಸುತ್ತಿದ್ದರೆ ಮುಖವನ್ನು ಬಿಸಿಲಿನಿಂದ ರಕ್ಷಿಸಿಕೊಳ್ಳಬಹುದು. ಒಣ ತ್ವಚೆ ನಿಮ್ಮದಾಗಿದ್ದರೆ, ಟೋನರ್ ಬಳಸಬಹುದು. ರಾತ್ರಿ ಮಲಗುವ ಮುನ್ನ ಮಾಯಿಶ್ಚರೈಸರ್ ಹಚ್ಚಿಕೊಳ್ಳಬಹುದು ಅಥವಾ ಬಾದಾಮಿ ಎಣ್ಣೆ ಕೂಡ ಉತ್ತಮವಾಗಿರುತ್ತದೆ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *