ಮತದಾರರ ಪಟ್ಟಿ ಆಕ್ಷೇಪಣೆಗೆ ಡಿಸೆಂಬರ್ ೨೧ ರ ವರೆಗೂ ಅವಕಾಶ

Posted on: December 6, 2017

DSC01648
ಮಡಿಕೇರಿ:-ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯ ಆಕ್ಷೇಪಣೆಯನ್ನು ಸ್ವೀಕರಿಸಲು ಡಿಸೆಂಬರ್ ೨೧ ರ ವರೆಗೂ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಡಾ.ವಿನ್ಸೆಂಟ್ ರಿಚರ್ಡ್ ಡಿಸೋಜರವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಬಗ್ಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ಬೂತ್ ಮಟ್ಟದ ಅಧಿಕಾರಿಗಳು ಕ್ರಮವಹಿಸಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ವಿನ್ಸೆಂಟ್ ರಿಚರ್ಡ್ ಡಿಸೋಜ ಅವರು ತಿಳಿಸಿದರು.
ಪೂರಕ ದಾಖಲೆಗಳಿದ್ದರೆ ಹಳೆಯ ಪದವೀಧರರಿಗೂ ಅವಕಾಶವಿದೆ. ಶಿಕ್ಷಕರು ಮೂರು ವರ್ಷಗಳ ಕಾಲ ಕೆಲಸ ನಿರ್ವಹಿಸಿರುವ ಬಗ್ಗೆ ದಾಖಲೆ ನೀಡಬೇಕು. ಹೊಸದಾಗಿ ಹೆಸರು ಸೇರಿಸಲು ಕರಡು ಪ್ರತಿಯನ್ನು ಬೂತ್ ಮಟ್ಟದ ಅಧಿಕಾರಿಗಳಿಗೆ ಕೊಟ್ಟಿದ್ದೆವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಅವರು ತಿಳಿಸಿದರು.
ಭಾರತದ ಚುನಾವಣಾ ಆಯೋಗದ ಪ್ರಕಾರ ಜನವರಿ ೦೧/೨೦೧೮ ಕ್ಕೆ ೧೮ ವರ್ಷ ಪೂರ್ಣಗೊಂಡಿದ್ದರೆ ಮಾತ್ರ ಮತದಾರ ಪಟ್ಟಿಯ ನಮೂನೆ ೬ ರಲ್ಲಿ ಸೇರ್ಪಡೆಗೆ ಅವಕಾಶವಿರುತ್ತದೆ. ನಮೂನೆ ೭ ಮತದಾರರ ಪಟ್ಟಿಯಿಂದ ಹೆಸರು ತೆಗೆಯುವುದು, ನಮೂನೆ ೮ ತಿದ್ದುಪಡಿ, ಪ್ರತಿಯೊಂದು ಪಕ್ಷದವರು ಬೂತ್ ಮಟ್ಟದ ಏಜೆಂಟ್ ನೇಮಕ ಮಾಡಬೇಕು. ಅಂತವರ ಹೆಸರನ್ನು ಪಟ್ಟಿ ಮಾಡಿ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಅವರು ಹೇಳಿದರು.
ಡಿಸೆಂಬರ್ ೧೭ ರವರೆಗೆ ವಿಶೇಷ ಪ್ರಚಾರ ಕಾರ್ಯಕ್ರಮ ಮಾಡಬೇಕು. ಮರಣ ಹೊಂದಿರುವ ಎರೆಡೆರಡೂ ಚುನಾವಣಾ ಗುರುತಿನ ಚೀಟಿ ಹೊಂದಿರುವವರನ್ನು ತೆಗೆದು ಹಾಕಲು ಸಹಕರಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ತೆನ್ನಿರಾಮೈನಾ, ಜೆ.ಡಿ.ಎಸ್ ಪಕ್ಷದ ಭರತ್ ಮತ್ತು ಮಹಮ್ಮದ್ ಅಬ್ರಹಾಂ ಸಿ.ಪಿ.ಐ(ಎಂ) ಪಕ್ಷದ ರಮೇಶ್ ಹೆಚ್.ಆರ್ ಮತ್ತು ಶಿವಪ್ಪ ಎಚ್.ಬಿ ಇತರರು ಇದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *