ಮೈದಾ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳೇನು ಗೊತ್ತಾ ?

Posted on: December 12, 2017

maida.

ಮೈದಾವು ಒಂದು ಸಂಸ್ಕರಿಸಿದ ಗೋಧಿ ಹಿಟ್ಟು ಆಗಿದ್ದು ಇದರಲ್ಲಿ ಇರುವ ನಾರಿನ ಅಂಶವನ್ನು ಸಂಪೂರ್ಣವಾಗಿ ತೆಗೆದಿರುತ್ತಾರೆ. ಬರೀ ಇಷ್ಟೇ ಅಲ್ಲ, ಇದನ್ನು Benzoic Peroxide ಎಂಬ ರಾಸಾಯನಿಕದಿಂದ ಬ್ಲೀಚ್ ಮಾಡುವುದರಿಂದ ಶುಭ್ರ ಬಿಳಿ ಬಣ್ಣ ಹಾಗೂ ನಯವಾದ ವಿನ್ಯಾಸವನ್ನು ಪಡೆಯುತ್ತದೆ. Benzoic Peroxideನ್ನು ಚೀನಾ ಮತ್ತು ಯೂರೋಪ್ಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

parotta1

ಅದರಿಂದ ನಮ್ಮ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮದ ಬಗ್ಗೆ ಒಂದೊಂದಾಗಿ ತಿಳಿದುಕೊಳ್ಳೋಣ.

  1. ಸಕ್ಕರೆ ಖಾಯಿಲೆ

ಇದರಲ್ಲಿ 100% ಕಾರ್ಬೊಹೈಡ್ರೇಟ್ ಅಂಶವಿದ್ದು ಇದು ರಕ್ತದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ. ಇದರಿಂದ ಮಧುಮೇಹ ರೋಗ ಬರುವ ಸಾಧ್ಯತೆ ತುಂಬಾ ಹೆಚ್ಚು.

2.ದೇಹದ ತೂಕದಲ್ಲಿ ಹೆಚ್ಚಳ

ಮೈದಾದಲ್ಲಿ ನಾರಿನ ಅಂಶ ಸಂಪೂರ್ಣವಾಗಿ ತೆಗೆದಿರುವುದರಿಂದ ದೇಹದಲ್ಲಿ ಅನಗತ್ಯವಾದ ಕೊಬ್ಬು ಸಂಗ್ರಹವಾಗುತ್ತದೆ. ಇದರಿಂದ ದೇಹದ ತೂಕ ಹೆಚ್ಚಿ ಬೊಜ್ಜು ಮುಂತಾದ ಸಮಸ್ಯೆಗಳಿಗೆ ಎಡೆ ಮಾಡಿ ಕೊಡುತ್ತದೆ.

  1. ಸೋಮಾರಿತನ ಹೆಚ್ಚುತ್ತದೆ

ಮೈದಾದಲ್ಲಿ ಕಾರ್ಬೋಹೈಡ್ರೇಟ್ ಅಧಿಕವಾಗಿರುವುದರಿಂದ ಇದನ್ನು ಸೇವಿಸಿದ ಕೂಡಲೇ ರಕ್ತದಲ್ಲಿ ಸಕ್ಕರೆ ಅಂಶ ಏರುತ್ತದೆ ಮತ್ತು ಅಷ್ಟೇ ನಿಧಾನವಾಗಿ ಇಳಿಯುತ್ತದೆ. ಇದರಿಂದ ಸೋಮಾರಿತನ ಆವರಿಸಿ ನಿದ್ರೆ ಬರುತ್ತದೆ.

  1. ಕೊಲೆಸ್ಟ್ರಾಲ್ ಹೆಚ್ಚುತ್ತದೆ

ನಮ್ಮ ಆಹಾರದಲ್ಲಿ ಇರುವ ನಾರಿನಂಶವು ನಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸುತ್ತದೆ. ಮೈದಾದಲ್ಲಿ ನಾರಿನಂಶ ಸಂಪೂರ್ಣವಾಗಿ ತೆಗೆದಿರುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್ತದೆ.

  1. ಹಸಿವು ಜಾಸ್ತಿಯಾಗುತ್ತದೆ

ಮೈದಾದ ಅತಿ ಕೆಟ್ಟ ಗುಣ ಏನೆಂದರೆ ಇದನ್ನು ಸೇವಿಸಿದ ಕೂಡಲೇ ರಕ್ತದಲ್ಲಿ ಸಕ್ಕರೆ ಪ್ರಮಾಣ ಥಟ್ಟನೆ ಲಭ್ಯವಾಗಿ ಮತ್ತೆ ಅಷ್ಟೇ ಬೇಗ ಖಾಲಿಯಾಗುವುದು. ಇದರಿಂದ ದೇಹವು ಪುನಃ ಪುನಃ ಸಕ್ಕರೆಯ ಬೇಡಿಕೆ ಇಡುತ್ತದೆ.

  1. ಮಲಬದ್ಧತೆ ಜಾಸ್ತಿಯಾಗುತ್ತದೆ

ನಾರು ಪದಾರ್ಥಗಳು ಮಲವಿಸರ್ಜನೆಯು ಸರಾಗವಾಗಿ ಆಗುವಂತೆ ನೋಡಿಕೊಳ್ಳುತ್ತವೆ. ಆದರೆ ಮೈದಾದಲ್ಲಿ ನಾರು ಇಲ್ಲದೆ ಇರುವ ಕಾರಣ ಮಲವಿಸರ್ಜನೆಗೆ ತೊಡಕು ಉಂಟಾಗಿ ಮಲಬದ್ಧತೆ ಸಮಸ್ಯೆ ತಲೆದೋರಬಹುದು

  1. ಸಿಟ್ಟು, ಅಸಹನೆ ಜಾಸ್ತಿಯಾಗುತ್ತದೆ

ಮೈದಾ ಸೇವಿಸಿದ ಕೂಡಲೇ ಸಕ್ಕರೆ ಅಂಶದಲ್ಲಿ ಏರುಪೇರು ಆಗುತ್ತದೆ ಇದು ಮೆದುಳಿನಲ್ಲಿ ಸೆರೋಟೋನಿನ್ ಎಂಬ ರಸದೂತದ ಸ್ರವಿಸುವಿಕೆಗೆ ಅಡ್ಡಿ ಉಂಟು ಮಾಡುತ್ತದೆ. ಇದರಿಂದ ಸಿಟ್ಟು ಅಸಹನೆ ಜಾಸ್ತಿಯಾಗುತ್ತದೆ.

ಸಂಗ್ರಹ ಮಾಹಿತಿ

Maida Roti

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *