ವೃದ್ಧರಿಗೆ ಅನ್ನದಾನ ಹಾಗೂ ವಸ್ತ್ರ ವಿತರಣೆ.

Posted on: December 11, 2017
IMG-20171210-WA0034ಕುಶಾಲನಗರ:- ಇಂದು ಸಂಬಂಧಗಳಿಗೆ ಬೆಲೆಯಿಲ್ಲದಂತಾಗಿದೆ. ಹಿರಿಯರನ್ನು ಕಡೆಗಣಿಸುವಂತಹ ದುಸ್ಥತಿ ಎದುರಾಗಿದೆ. ಹೆತ್ತು, ಸಾಕಿ ಸಲುಗಿದಂತಹ, ಹೆತ್ತ ಕರುಳನ್ನು ಹಾದಿ ಬೀದೀಲಿ ಬಿಟ್ಟು ಸಂಬಂಧದ ಬೆಲೆಯನ್ನು ಹತ್ಯೆಗೈಯ್ಯುವ ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗ ಪ್ರವಾದಿ ಮುಹಮ್ಮದ್ ಪೈಗಂಬರ್ (ಸ) ರವರ ಸಂದೇಶವನ್ನು ಸಾರುವಂತಹ ಸತ್ಕಾರ್ಯಕ್ಕೆ ಕುಶಾಲನಗರದ ಮುಸಲ್ಮಾನ ಬಾಂಧವರು ಮುಂದಾಗಿದ್ದಾರೆ.
ರಬೀಉಲ್ ಅವ್ವಲ್ ತಿಂಗಳು ಮುಸಲ್ಮಾನರ ಪವಿತ್ರವಾದ ಹಾಗೂ ಶ್ರೇಷ್ಠವಾದ ತಿಂಗಳು. ಪ್ರವಾದಿ ಮುಹಮ್ಮದ್ ಪೈಗಂಬರ್ರವರು ಜನಿಸಿದ ತಿಂಗಳು. ಈ ಶ್ರೇಷ್ಠವಾದ ತಿಂಗಳಿನಲ್ಲಿ ಇಲ್ಲಿನ ಹಿಲಾಲ್ ಮಸೀದಿ, ದಾರುಲ್ ಉಲೂಮ್ ಮದ್ರಸ ಹಾಗೂ ಯೂಸ್ ಅಸೋಸಿಯೇಷನ್ ವತಿಯಿಂದ ಕೂಡಿಗೆಯ ಶಕ್ತಿ ವೃದ್ಧಾಶ್ರಮದಲ್ಲಿ ಹಿರಿಯರಿಗೆ ಅನ್ನ ಹಾಗೂ ವಸ್ತ್ರ ದಾನ ಮಾಡಿ  ಗಮನ ಸೆಳೆದಿದ್ದಾರೆ.
ವೃದ್ಧಾಶ್ರಮದಲ್ಲಿರುವ ನಲವತ್ತು ಜನರಿಗೆ ಮಧ್ಯಾಹ್ನದ ವೇಳೆಯ ಊಟ ಹಾಗೂ ಗಂಡಸರಿಗೆ ಪಂಚೆ, ಅಂಗಿ ಮತ್ತು ಹೆಂಗಸರಿಗೆ ಸೀರೆಯನ್ನು ನೀಡಿದರು.
ಕುಶಾಲನಗರದ ನುಸ್ರತುಲ್ ಉಲಮಾ ಯೂತ್ ಅಸೋಷಿಯೇಷನ್ ನ ಕಾರ್ಯದರ್ಶಿ ಹನೀಫ್ ಮಾತನಾಡಿ, ಇಂದು ಕಿರಿಯರು ಹಿರಿಯರನ್ನು ಅಗೌರವದಿಂದ ಕಾಣುತ್ತಿದ್ದಾರೆ. ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸಿ ಹೆತ್ತವರನ್ನು ಕಡೆಗಣಿಸುತ್ತಿದ್ದಾರೆ. ಪ್ರವಾದಿ ಮುಹಮ್ಮದ್ ಪೈಗಂಬರ್ರವರು ಜನಿಸಿದ ಈ ಪವಿತ್ರವಾದ ತಿಂಗಳಲ್ಲಿ ನಮ್ಮ ಕಮಿಟಿ ವತಿಯಿಂದ ಹಿರಿಯರಿಗೆ ಅನ್ನ ಮತ್ತು ವಸ್ತ್ರದಾನ ಮಾಡಿದ್ದೇವೆ. ಇಂದಿನ ಪೀಳಿಗೆ ಹಿರಿಯರನ್ನು ಗೌರವದಿಂದ ಕಾಣಬೇಕಾಗಿದೆ ಎಂದರು.
ಪ್ರವಾದಿ ಮುಹಮ್ಮದ್ ಪೈಂಗಬರ್ರವರು ಜನಿಸಿದ ಈ ಪವಿತ್ರವಾದ ತಿಂಗಳಲ್ಲಿ‌ ಹಿರಿಯರನ್ನು ಗೌರವದಿಂದ ಕಾಣಬೇಕು ಎಂಬ ಅವರ ಜೀವನ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಹಿಲಾಲ್‌ ಮಸೀದಿ, ದಾರುಲ್ ಉಲೂಮ್ ಮದ್ರಸ ಹಾಗೂ ಯೂತ್ ಅಸೋಸಿಯೇಷನ್ನ ವತಿಯಿಂದ ಕೂಡಿಗೆಯ ಶ್ರೀ ಶಕ್ತಿ ವೃದ್ಧಾಶ್ರಮದ ವೃದ್ದರಿಗೆ ಅನ್ನದಾನ ಹಾಗೂ ವಸ್ತ್ರ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಯೂತ್ ಅಸೋಸಿಯೇಷನ್ನ ಪದಾಧಿಕಾರಿ ಆಬಿದ್ ತಿಳಿಸಿದರು.
ಶ್ರೀ ಶಕ್ತಿ ವೃದ್ಧಾಶ್ರಮದ ವ್ಯವಸ್ಥಾಪಕರಾದ ಚಂದ್ರು ಮಾತನಾಡಿ, ಇಂದು ಯುವ ಪೀಳಿಗೆಯು ಹಿರಿಯರನ್ನು ಕಡೆಗಣಿಸುತ್ತಿರುವ ಕಾಲಘಟ್ಟದಲ್ಲಿ ಯೂತ್ ಅಸೋಸಿಯೇಷನ್ನ ವತಿಯಿಂದ ಶಕ್ರಿ‌ ವೃದ್ಧಾಶ್ರಮದಲ್ಲಿರುವ ವೃದ್ಧಿರಿಗೆ ಅನ್ನದಾನ ಹಾಗೂ ವಸ್ತ್ರ ವಿತರಿಸಿದ್ದಾರೆ. ಇವರ ಈ ಸಮಾಜ ಕಳಕಳಿ ಹೀಗೆಯೇ ಮುಂದುವರಿಯಲಿ ಎಂದು ಅಭಿನಂದಿಸಿದರು.
ಒಟ್ಟಿನಲ್ಲಿ ಈ ಯುವಕರ ಸಮಾಜ ಕಳಕಳಿ ಹೀಗೆಯೇ ಮುಂದುವರಿಯಲಿ ಹಾಗೂ ಇನ್ನೂ ಹೆಚ್ಚು ಸಮಾಜಕ್ಕೆ ಹೆಚ್ಚು ಹೆಚ್ಚು ಒಳ್ಳೆಯ ಕೆಲಸ ಕಾರ್ಯವನ್ನು ಮಾಡಲು ಆ ದೇವರು ಆಶಿರ್ವದಿಸಲಿ ಎಂಬುದು ಸಾರ್ವಜನಿಕರ ಆಗ್ರಹ.
ಈ ಸಂದರ್ಭ‌ ನುಸ್ರತುಲ್ ಉಲಮಾ ಯೂತ್ ಅಸೋಸಿಯೇಷನ್ನ ಅಧ್ಯಕ್ಷ ಮುಹಮ್ಮದ್ ರಫೀಕ್, ಉಪಾಧ್ಯಕ್ಷ ಅಜೀಜ್, ಸದಸ್ಯರಾದ ಆರಿಫ್, ಸಮೀರ್, ಕಮಾಲ್, ಇಬ್ರಾಹೀಮ್, ಮುಸ್ತು, ಸಾದಿಕ್, ಸಾವುಲ್, ಹಿಲಾಲ್ ಮಸೀದಿಯ ಪ್ರಮುಖರಾದ ಮುಸ್ತಫಾ, ರಫೀಕ್ ಹಾಗೂ ವೃದ್ಧಾಶ್ರಮದ ಸಿಬ್ಬಂಧಿ ವರ್ಗದವರು ಇದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *