ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣ ರವಿ ಬೆಳಗೆರೆ ಜೈಲು ಪಾಲು

Posted on: December 11, 2017

RAVI b

ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪವನ್ನು ಎದುರಿಸುತ್ತಿರುವ ಪತ್ರಕರ್ತ ರವಿ ಬೆಳಗೆರೆ ಈಗ ಜೈಲು ಪಾಲಾಗಿದ್ದಾರೆ.

ಸಿಸಿಬಿ ಕಚೇರಿಯಲ್ಲೇ ಮೂರು ದಿನ ಕಳೆದಿದ್ದ ರವಿ ಬೆಳೆಗೆರೆಯನ್ನು ಸೋಮವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ಎಸಿಎಂಎಂ ಕೋರ್ಟ್‍ಗೆ ಪೊಲೀಸರು ಹಾಜರುಪಡಿಸಿದರು. ವಿಚಾರಣೆ ಬಳಿಕ ನ್ಯಾಯಾಧೀಶ ಜಗದೀಶ್ ಬೆಳಗೆರೆಗೆ ಡಿಸೆಂಬರ್ 23ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಪ್ರಕಟ ಮಾಡಿದರು.

ಬಿಪಿ, ಶುಗರ್ ಇದ್ದು ಪ್ರತಿ ದಿನ  ಇಂಜೆಕ್ಷನ್, ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂದು ರವಿ ಪರ ವಕೀಲರು ಹೇಳಿದರೂ ಕೋರ್ಟ್ ಆರೋಗ್ಯ ಸಮಸ್ಯೆಗೆ ಜೈಲಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುವಂತೆ ಸೂಚಿಸಿತು.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *