ಬ್ರೇಕಿಂಗ್ ನ್ಯೂಸ್
ಮಳೆ ಹಾನಿ ನಿಖರ ಮಾಹಿತಿ ಒದಗಿಸಲು ಪಿ.ಐ.ಶ್ರೀವಿದ್ಯಾ ಸೂಚನೆ , ಜುಲೈ 19 ರಂದು ಮಡಿಕೇರಿಗೆ ಮುಖ್ಯಮಂತ್ರಿ ಭೇಟಿ ಸಾ.ರಾ.ಮಹೇಶ್ , ಜು.19 ರಂದು ಕೊಡಗು ಜಿಲ್ಲೆಗೆ ಕುಮಾರ ಸ್ವಾಮಿ – ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಂಕೇತ್ , ದಿನೇಶ್ ಗುಂಡುರಾವ್‍ಗೆ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಅಭಿನಂದನೆ , ಕೊಡಗಿನ ಧ್ವನಿಯಾದ ಫತ್ತಾಹ್ ಸಾಮಾಜಿಕ ಕಳಕಳಿ ಶ್ಲಾಘನಾರ್ಹ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಮೆಚ್ಚುಗೆ , ಸುಂದರನಗರ ಬಳಿ ಪಂಚಾಯಿತಿ ವತಿಯಿಂದ ಚರಂಡಿ ಸ್ವಚ್ಚತಾ ಕಾರ್ಯಕ್ರಮ , ಸಧ್ಯದಲ್ಲಿಯೇ ಕೊಡಗಿಗೆ ಭೇಟಿ ಕೊಡವ ಸಾಹಿತ್ಯ ಅಕಾಡೆಮಿ ನಿಯೋಗಕ್ಕೆ ಸಿಎಂ ಭರವಸೆ , ಶಿಕ್ಷಕಿ ಲಾಸ್ಯ ತೇಜಸ್ವಿ ಮರಣ ಪ್ರಕರಣ – ಸಂಘ ಸಂಸ್ಥೆಗಳಿಂದ ಪ್ರತಿಭಟನೆ , ಪ್ರವಾಸಿ ಸ್ಥಳಗಳಿಗೆ ಬಸ್ ಸೌಲಭ್ಯ ಕಲ್ಪಿಸಿ ಸುನಿಲ್ ಸುಬ್ರಮಣಿ , ಮೈಸೂರು-ತಲಚೇರಿ ರೈಲ್ವೆ ಮಾರ್ಗ ಸ್ಥಗಿತಕ್ಕೆ ಸುನಿಲ್ ಸುಬ್ರಮಣಿ ಒತ್ತಾಯ ,

ಹ್ಯಾಂಗೋವರ್‌

Posted on: December 11, 2017

Hangover-Neethuಕನ್ನಡದಲ್ಲಿ ನಾಯಕಿಯರು ಸ್ಪೆಷಲ್‌ ಸಾಂಗು, ಐಟಂ ಸಾಂಗ್‌ಗಳಿಗೆ ಹೆಜ್ಜೆ ಹಾಕುವುದು ಹೊಸದೇನಲ್ಲ. ಈಗಾಗಲೇ ಅನೇಕ ನಟಿಯರು ಅಂತಹ ಅದೆಷ್ಟೋ ಹಾಡುಗಳಿಗೆ ತಮ್ಮ ಸೊಂಟ ಬಳುಕಿಸಿರುವುದುಂಟು. ಈಗ ನೀತು ಕೂಡ ಚಿತ್ರವೊಂದರ ಸ್ಪೆಷಲ್‌ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ಹಾಗಂತ ನೀತು ಅವರಿಗೆ ಅದು ಹೊಸದೇನೂ ಅಲ್ಲ ಬಿಡಿ. ಈಗಾಗಲೇ ಒಂದಷ್ಟು ಚಿತ್ರಗಳಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

ಇತ್ತೀಚೆಗೆ “ಹ್ಯಾಂಗೋವರ್‌’ ಚಿತ್ರದ ಪಬ್‌ ಸಾಂಗ್‌ಗೆ ನೀತು ಕುಣಿದಿದ್ದಾರೆ. ವಿಠಲ್‌ ಭಟ್‌ ನಿರ್ದೇಶನದ “ಹ್ಯಾಂಗೋವರ್‌’ ಚಿತ್ರವನ್ನು ರಾಕೇಶ್‌ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಒಂದು ಪಬ್‌ ಸಾಂಗ್‌ ಇದ್ದುದರಿಂದ ಅದನ್ನು ನೀತು ಅವರಿಂದ ಮಾಡಿಸಬೇಕು ಅಂತ ನಿರ್ಧರಿಸಿದ ಚಿತ್ರತಂಡ, ಮೈಸೂರಿನ ಫ‌ನ್‌ ಫೋರ್ಟ್‌ನಲ್ಲಿ ಹಾಕಿದ್ದ ವಿಶೇಷ ಪಬ್‌ಸೆಟ್‌ನಲ್ಲಿ ನೀತು ಅವರಿಂದ ಹೆಜ್ಜೆ ಹಾಕಿಸಿದೆ.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *