ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಅನಾರೋಗ್ಯ ಪೀಡಿತಳೆಂಬ ಕಾರಣಕ್ಕೆ ಹೆತ್ತ ತಾಯಿಯನ್ನೇ ಕೊಂದ ಮಗ

Posted on: January 5, 2018

rajkot

ಅನಾರೋಗ್ಯ ಪೀಡಿತ ತಾಯಿ ಜಯಶ್ರೀ(64) ಎಂಬುವವರನ್ನು ಸ್ವಂತ ಮಗನೇ ಟೆರೆಸ್ ನಿಂದ ನೂಕಿ ಕೊಲೆ ಮಾಡಿದ ಅಮಾನವೀಯ ಘಟನೆ ಗುಜರಾತಿನ ರಾಜಕೋಟ್ ನಲ್ಲಿ ನಡೆದಿದೆ.

ತಾಯಿಯನ್ನು ಟೆರೆಸ್ ನಿಂದ ನೂಕಿ ಕೊಲೆ ಮಾಡಿದ ನಂತರ, ಮನೆಯಲ್ಲಿ ಏನೂ ಆಗಿಯೇ ಇಲ್ಲ ಎಂಬಂತೆ ಕುಳಿತಿದ್ದ ಮಗ ಸಂದೀಪ್(36) ಗೆ ಅಪಾರ್ಟ್ ಮೆಂಟಿನ ಭದ್ರತಾ ಸಿಬ್ಬಂದಿ ಬಂದು, ‘ನಿಮ್ಮ ತಾಯಿ ಟೆರೆಸ್ ನಿಂದ ಬಿದ್ದಿದ್ದಾರೆ’ ಎಂಬ ಮಾಹಿತಿ ನೀಡಿದ್ದಾರೆ. ನಂತರ ಆತಂಕಗೊಂಡವನಂತೆ ಓಡಿದ ಕಾಲೇಜೊಂದರಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಆಗಿರುವ ಸಂದೀಪ್, ‘ಈ ಘಟನೆ ನಡೆದಾಗ ನಾನು ಟೆರೆಸ್ ನಲ್ಲಿ ಇರಲೇ ಇಲ್ಲ. ಟೆರೆಸ್ ಗೆ ತೆರಳಿದ್ದ ನನ್ನ ತಾಯಿ ನೀರು ತರುವಂತೆ ನನ್ನನ್ನು ಮನೆಗೆ ಕಳಿಸಿದ್ದರು. ಆಗ ಅವರು ಆಯತಪ್ಪಿ ಬಿದ್ದಿರಬೇಕು’ ಎಂದು ಪೊಲೀಸರ ಮುಂದೆ ನಾಟಕವಾಡಿದ್ದಾನೆ.

ಕೆಲವು ದಿನಗಳಿಂದ ಬ್ರೈನ್ ಹೆಮರೆಜ್ ಕಾಯಿಲೆಯಿಂದ ಬಳಲುತ್ತಿದ್ದ ತಾಯಿ ಜಯಶ್ರೀ ಅವರು ಬಾತ್ ರೂಮ್ ಕೆಲಸಗಳಿಗೂ ಮತ್ತೊಬ್ಬರ ಮೇಲೆ ಅವಲಂಬಿತರಾಗಿದ್ದರು. ಈ ವಿಷಯವನ್ನು ತಿಳಿದ ಪೊಲೀಸರು ತಕ್ಷಣವೇ ಸಂದೀಪ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಬಾತ್ ರೂಮ್ ಗೆ ಹೋಗುವುದಕ್ಕೂ ಮತ್ತೊಬ್ಬರ ಮೇಲೆ ಅವಲಂಬಿತರಾಗುವ ವ್ಯಕ್ತಿ, ಟೆರೆಸ್ ವರೆಗೂ ಒಬ್ಬರೇ ನಡೆದುಕೊಂಡು ಹೋಗಲು ಸಾಧ್ಯವಿಲ್ಲ ಎಂಬುದನ್ನು ಅರಿತ ಪೊಲೀಸರು ತಕ್ಷಣವೇ ಅಪಾರ್ಟ್ ಮೆಂಟಿನ ಸಿಸಿಟಿವಿ ಕ್ಯಾಮೆರಾ ಫೂಟೇಜ್ ಪರೀಕ್ಷಿಸಿದ್ದಾರೆ.

ಆದರೆ ಸಿಸಿಟಿವಿಯಲ್ಲಿ ಆತ ತನ್ನ ತಾಯಿಯನ್ನು ಟೆರೇಸ್‌ಗೆ ಎಳೆದೊಯ್ದು ಅಲ್ಲಿಂದ ಕೆಳಗೆ ದೂಡುವ ದೃಶ್ಯ ದಾಖಲಾಗಿದ್ದು ಇದುವೇ ಆತ ಎಸಗಿದ ಅಮಾನುಷ ಕೊಲೆ ಕೃತ್ಯವನ್ನು ಸಾಬೀತುಗೊಳಿಸಿದೆ. ಪೊಲೀಸರು ಅನುಮಾನ ವ್ಯಕ್ತಪಡಿಸುತ್ತಿದ್ದಂತೆಯೇ ಎದೆ ನೋವು ಎಂದು ಹೇಳಿ ಸಂದೀಪ್ ಆಸ್ಪತ್ರೆ ಸೇರಿದ್ದಾನೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *