ಎಸ್‍ಎಸ್‍ಎಫ್ ಪ್ರತಿಭೋತ್ಸವಕ್ಕೆ ಅಯ್ಯಂಗೇರಿಯಲ್ಲಿ ಇಂದು ಚಾಲನೆ

Posted on: January 13, 2018

ssf
ಮಡಿಕೇರಿ : ಎಸ್‍ಎಸ್‍ಎಫ್ ವತಿಯಿಂದ ಜಿಲ್ಲಾ ಮಟ್ಟದ ಪ್ರತಿಭೋತ್ಸವ ಜ.13 ಹಾಗೂ 14 ರಂದು ಅಯ್ಯಂಗೇರಿಯ ತಾಜುಲ್ ಉಲಮಾ ನಗರದಲ್ಲಿ ನಡೆಯಲಿದೆ. ಪತ್ರಿಕಾ ಹೇಳಿಕೆ ನೀಡಿರುವ ಪ್ರತಿಭೋತ್ಸವದ ಜಿಲ್ಲಾ ಸಂಚಾಲಕರಾದ ಮೊಹಮ್ಮದ್ ನಿಝಾರ್ ಸಖಾಫಿ ಕಡಂಗ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ್ದಾರೆ.

ಜೂನಿಯರ್, ಸೀನಿಯಾರ್, ಜನರಲ್, ಕ್ಯಾಂಪಸ್ಸ್, ದಹ್‍ವ ಒಳಗೊಂಡ ವಿಭಿನ್ನ ಏಳು ವಿಭಾಗಗಳ 94 ವೈವಿಧ್ಯಮಯ ಸ್ಪರ್ಧೆಗಳಲ್ಲಿ ಮೂನ್ನೂರಕ್ಕು ಹೆಚ್ಚಿನ ಸ್ಪರ್ಧಿಳುಗಳು ಪಾಲ್ಗೊಂಡು ತಮ್ಮ ಪ್ರತಿಭೆ ಅನಾವರಣಗೊಳಿಸಲಿದ್ದಾರೆ. ಕಲುಷಿತ ಗೊಂಡಿರುವ ಈ ಆಧುನಿಕ ಯುಗದಲ್ಲಿ ಫ್ಯಾಶಿಸಂನ ಲೇಬಲಿನಲ್ಲಿ ಯುವ ಜನತೆ ಹಾದಿತಪ್ಪುತ್ತಿರುವ ಈ ಸಂದಿಗ್ದ ಪರಿಸ್ಥಿತಿಯಲ್ಲಿ ನೈಜ ಪಥದಲ್ಲಿ ಯುವ ಜನತೆಯನ್ನು ಭದ್ರವಾಗಿ ನೆಲೆವೂರಿಸಲು ಹಾಗೂ ವಿದ್ಯಾರ್ಥಿ ಯುವ ಸಮೂಹದ ಅಂತರಂಗದಲ್ಲಿ ಬೇರೂರಿರುವ ಪ್ರತಿಭೆಗಳನ್ನು ಸಮರ್ಥವಾಗಿ ಪೋಷಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರುವ ಮೂಲ ಧ್ಯೇಯದೊಂದಿಗೆ ಎಸ್.ಎಸ್.ಎಫ್, ಸಾಹಿತ್ಯೋತ್ಸವ, ಪ್ರತಿಭೋತ್ಸವ ಎಂಬಿ ಶೀರ್ಷಿಕೆಗಳಲ್ಲಿ ಕಾರ್ಯಕ್ರಮವನ್ನು ನಡೆಸುತ್ತಿದೆ.

ಪ್ರಸ್ತುತ ಜಿಲ್ಲಾ ಮಟ್ಟದ ಪ್ರತಿಭೋತ್ಸವದಲ್ಲಿ ವಿಜೇತರಾದವರು ಇದೇ ತಿಂಗಳ 19, 20, 21 ರಂದು ಕೊಟ್ಟಮುಡಿಯ ಪ್ರತಿಷ್ಠಿತ ಮರ್ಕಝ್ ಕ್ಯಾಂಪಸ್ಸ್‍ನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಇತರ 26 ಜಿಲ್ಲೆಗಳಿಂದ ಆಯ್ಕೆಯಾದ ಪ್ರತಿಭೆಗಳೊಂದಿಗೆ ಸೆಣಸಲಿದ್ದಾರೆ.

ಕಾರ್ಯಕ್ರಮಕ್ಕಿರುವ ಪೂರ್ವ ಸಿದ್ಧತೆಗಳು ಪೂರ್ಣಗೊಂಡಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಸಹಾಯಕ ಖಾಝಿ ಮಹ್ಮೂದ್ ಉಸ್ತಾದ್, ಎಸ್.ಎಸ್.ಎಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ, ರಾಜ್ಯ ಕ್ಯಾಂಪಸ್ಸ್ ಕಾರ್ಯದರ್ಶಿ ಯಾಖುಬ್ ಕೊಳಕ್ಕೇರಿ, ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಲೋಕೇಶ್ ಸಾಗರ್ ಸೇರಿದಂತೆ ಸಮಾಜದ ವೈವಿಧ್ಯಮಯ ಮಜಲುಗಳಲ್ಲಿ ಕ್ರಿಯಾಶೀಲರಾದ ನಾಯಕರುಗಳು ವಿಭಿನ್ನ ಸೆಷನ್‍ಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಮೊಹಮ್ಮದ್ ನಿಝಾರ್ ಸಖಾಫಿ ಕಡಂಗ ತಿಳಿಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *