ಕಾಡಾನೆ ದಾಳಿಯಿಂದ ಸ್ಥಳೀಯರನ್ನು ರಕ್ಷಿಸಲು ಸಿದ್ದಗೊಂಡಿದೆ ಟೀಂ ರಾಪಿಡ್ ರೆಸ್ಫಾನ್ಸ್

Posted on: January 13, 2018

kdk-1-1

ಮಡಿಕೇರಿ : ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಾಡಾನೆ ದಾಳಿಯಿಂದ ಸ್ಥಳೀಯರನ್ನು ರಕ್ಷಿಸುವ ಸಲುವಾಗಿ ಅರಣ್ಯ ಇಲಾಖೆ ಹೊಸ ಯೋಜನೆಯೊಂದನ್ನು ರೂಪಿಸಿದೆ. ಅದೇ ರಾಪಿಡ್ ರೆಸ್ಫಾನ್ಸ್. ಕಾಡಿನಿಂದ ಬಂದ ಆನೆಗಳನ್ನು ಅರಣ್ಯಕ್ಕೆ ಅಟ್ಟುವಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವ ಈ ರಾಪಿಡ್ ಟೀಮ್ ಬಗ್ಗೆ ಜಿಲ್ಲೆಯಲ್ಲಿ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.

ಏನಿದು ರಾಪಿಡ್ ರೆಸ್ಫಾನ್ಸ್ : ಕಾಫಿನಾಡಿನಲ್ಲಿ ಆಗಿದ್ದಾಗಲೇ ಕಾಡಾನೆ ದಾಳಿಗಳು ನಡೆಯುತ್ತಲೆ ಇರುತ್ತವೆ. ಆಹಾರ ಅರಸಿ ಕಾಡಿನಿಂದ ನಾಡಿಗೆ ಬರುವ ಈ ಆನೆಗಳು ಹಲವರ ಮೇಲೆ ದಾಳಿ ಮಾಡಿದೆ. ಇದರಿಂದಾಗಿ ಅರಣ್ಯದಂಚಿನ ಪ್ರದೇಶಗಳ ಜನರು, ಕಾರ್ಮಿಕರು, ಮಕ್ಕಳು ಓಡಾಡಲು ಭಯ ಬೀಳುತ್ತಾರೆ. ಇಂತಹ ಆನೆಗಳನ್ನು ತಕ್ಷಣಕ್ಕೆ ಅರಣ್ಯಕ್ಕೆ ಅಟ್ಟಲು ಅಲ್ಲಿನ ಸ್ಥಳೀಯ ಯುವಕರನ್ನು ನೇಮಿಸಿಕೊಂಡು ಕಾರ್ಯಾಚಾರಣೆಗೆ ಅರಣ್ಯ ಇಲಾಖೆ ಮುಂದಾಗಿದೆ. ಈ ತಂಡವೇ ರಾಪಿಡ್ ರೆಸ್ಫಾನ್ಸ್.

kdk-2

ಕಾರ್ಯಾಚಾರಣೆ :

ಸ್ಥಳೀಯ ಯುವಕರನ್ನು ನೇಮಕ ಮಾಡಿಕೊಂಡು ಅವರಿಗೆ ಆನೆಗಳನ್ನು ಹೇಗೆ ಮತ್ತೆ ಕಾಡಿಗೆ ಕಳುಹಿಸ ಬೇಕು ಎಂಬು ಅರಣ್ಯ ಇಲಾಖೆ ತರಬೇತಿಯನ್ನು ನೀಡಿದೆ.  ರೆಂಜರ್ ಟೈಗರ್ ದೇವಯ್ ಮುಖ್ಯಸ್ಥಗೆಯಲ್ಲಿ ತಯಾರಾದ ಈ ಹತ್ತು ಜನರ ತಂಡ ರಾಪಿಡ್ ರೆಸ್ಫಾನ್ಸ್. ಈ ತಂಡದ ಕಮಾಂಡೋಗಳು ಕಾಫಿ ತೋಟದ ಮಾಲೀಕರು ಕಾರ್ಮಿಕರು ಆರ್.ಆರ್.ಟಿ ತಂಡಕ್ಕೆ ಮಾಹಿತಿಯನ್ನು ನೀಡುತ್ತಾರೆ. ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ ತಂಡ ಪರಿಶೀಲನೆ ನಡೆಸಿ ಕಾಡಾನೆ ಇರುವ ಬಗ್ಗೆ ಮಾಹಿತಿ ವಾಟ್ಸಪ್  ಮೂಲಕ ಹರಿಬಿಡಲಾಗುತ್ತದೆ .

kdಈ ಸಂದರ್ಭ ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕಗರಿಗೆ ಮಾಹಿತಿ ನೀಡಲಾಗುತ್ತದೆ. ಹಾಗೆಯೇ ಆನೆಗಳ ಹಿಂಡು ಓಡಾಡುವ ಮಾರ್ಗವನ್ನು ತಿಳಿಸಲಾಗುತ್ತದೆ. ತಂಡದ ಸದಸ್ಯರು ಎತ್ತರದ ಮರ ಏರಿ ಪರಿಶೀಲನೆ ನಡೆಸಿ ನಿಮಿಷ ನಿಮಿಷಗಳ ಫಟಾಪಟ್ ಆಗಿ ವಾಟ್ಸಪ್ ಗ್ರೂಪ್ ಮೂಲಕ  ಎಚ್ಚರಿಕೆ ನೀಡಲಾಗುತ್ತದೆ. ಆನಂತರ ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸ ನಡೆಯುತ್ತದೆ.

tata-coffee-plantation

ಸದ್ಯಕ್ಕೆ ಈ ತಂಡ ವಿರಾಜಪೇಟೆ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ವಿವಿದೆಡೆಗಲಿಗೆ ವಿಸ್ತೀರ್ಣ ಮಾಡುವ ಗುರಿಯನ್ನು ಹೊಂದಿದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *