ಕೊಡವರ ಕುಲಶಾಸ್ತ್ರ ಅಧ್ಯಯನ ಪುನರಾರಂಭಕ್ಕೆ ಆಗ್ರಹಿಸಿ ಜ. 16 ರಂದು ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಸತ್ಯಾಗ್ರಹ ಸಿ.ಎನ್.ಸಿ

Posted on: January 12, 2018

IMG-20180112-WA0002

ಮಡಿಕೇರಿ : ಕೊಡವರ ಸ್ಥಗಿತಗೊಂಡ ಕುಲಶಾಸ್ತ್ರ ಅಧ್ಯಯನ ಪುನರಾರಂಭಕ್ಕೆ ಆಗ್ರಹಿಸಿ ಸಿ.ಎನ್.ಸಿ ಆಶ್ರಯದಲ್ಲಿ 16-01-2018 ರಂದು ಕೊಡಗು ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಮಡಿಕೇರಿಯಲ್ಲಿ 10.30 ಗಂಟೆಗೆ ಸಿ.ಎನ್.ಸಿ ಯಿಂದ ಸತ್ಯಾಗ್ರಹ

ಕೊಡವ ಬುಡಕಟ್ಟಿಗೆ ರಾಜ್ಯಾಂಗ ಖಾತರಿ ಕೇವಲ ನಮ್ಮ ಭವಿಷ್ಯತ್ತು, ಅಸ್ಥಿತ್ವ ಹಾಗು ಚಾರಿತ್ರಿಕ ನಿರಂತರತೆಯನ್ನು ಸ್ಥಿರೀಕರಿಸುವುದು ಮಾತ್ರವಲ್ಲ ಇದರಲ್ಲಿ ನಮ್ಮ ಭಾವನೆ, ಆಶೋತ್ತರ, ವಿಚಾರಧಾರೆ, ಆಲೋಚನೆ, ವೇದನೆ ಸಂವೇದನೆಗಳ ಸಮಷ್ಠಿ ಸಾಕ್ಷಿ ಪ್ರಜ್ಞೆ ಅಡಗಿದ್ದು ನಮ್ಮ ಹಕ್ಕೊತ್ತಾಯವನ್ನು ಖಂಡಿತ ಆಟಿಕೆಯ ವಸ್ತುವೆಂದು ಅಣಕಿಸಿ ಜಾರಿಕೊಳ್ಳುವ ಅತೀ ಜಾಣ್ಮೆ ತೋರದೆ ನೈಜ ರಾಜ ನೀತಿ – ರಾಜಕೀಯ ಇಚ್ಛಾಶಕ್ತಿ ತೋರಿರಿ –  ಇದೊಂದು ಕಳಪೆ ಮಟ್ಟದ ಚುನಾವಣಾ ಗಿಮಿಕ್ ಆಗದಂತೆ ಎಚ್ಚರ ವಹಿಸಿರಿ. ಇಲ್ಲದಿದ್ದಲ್ಲಿ ಖಂಡಿತಾ ಇದು ಮುಂದಿನ ಚುನಾವಣೆಗೆ ಸಿ.ಎನ್.ಸಿ ಯ ಪ್ರಮುಖ ಕಾರ್ಯಸೂಚಿಯಾಗಲಿದೆ. ಇದರಲ್ಲಿ ಚಳಿ ಕಾಯುವ ಕೊಡವರ ಭವಿಷ್ಯತ್ತಿಗೆ ಕೊಳ್ಳಿ ಇಟ್ಟ ದ್ರೋಹಿ ಕೊಡವರನ್ನು ಬಯಲು ಮಾಡಬೇಕಾಗುತ್ತದೆ

ಸಹೋದರಿ ಎಂ.ಎಲ್.ಸಿ ಶ್ರೀಮತಿ ವೀಣಾ ಅಚ್ಚಯ್ಯನವರು ಮುಖ್ಯಮಂತ್ರಿಗಳ ಚುನಾವಣಾ ಪೂರ್ವ ಸಾಧನಾ ಸಮಾವೇಶದ ಭೇಟಿಯ ಸಂದರ್ಭ ಸಿ.ಎನ್.ಸಿ ಪ್ರತಿಪಾದಿಸಿಕೊಂಡು ಬಂದ ಪ್ರಧಾನ ಹಕ್ಕೊತ್ತಾಯವಾದ ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಗೆ ಸೇರಿಸಲು ಪೂರಕವಾದ ಮುಖ್ಯಮಂತ್ರಿಗಳ ಮೌಖಿಕ ಆದೇಶದಿಂದ ಸ್ಥಗಿತಗೊಂಡ (ಚಾರಿತ್ರಿಕ ಪ್ರಮಾದಕ್ಕೆ ಕಾರಣವಾದ) ಕೊಡವರ ಕುಲಶಾಸ್ತ್ರ ಅಧ್ಯಯನವನ್ನು ಮರುಚಾಲನೆ ಮಾಡಬೇಕೆಂದು ಒತ್ತಾಯಿಸುವ ಮನವಿ ಪತ್ರ ಸಲ್ಲಿಸಿದಕ್ಕಾಗಿ ಶ್ರೀಮತಿ ವೀಣಾ ಅಚ್ಚಯ್ಯನವರಿಗೂ ಮತ್ತು ಸ್ವೀಕರಿಸಿದ ಮುಖ್ಯಮಂತ್ರಿಗಳಿಗೂ ಅಭಿನಂದನೆಗಳು; ಕನಿಷ್ಠ ಪಕ್ಷ ಕೊಡವ ಜಗತ್ತಿಗೊಂದು ಕೀರಲು ಧ್ವನಿ, ವೇದನೆ, ಸಂವೇಧನೆ ಇದೆ ಎಂದು ಅರಿತುಕೊಂಡು ಅದನ್ನು ಋಜುಹಾತು ಪಡಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಅವರಿಗೆ ಅನಂತ ಧನ್ಯವಾದಗಳು.

ಆದರೆ ಇದು ಕಾರ್ಯಗತವಾಗಬೇಕಾದಲ್ಲಿ ಮುಖ್ಯಂತ್ರಿಗಳು ಇಂದೇ ಈ ಸಂಬಂಧ ಅಧಿಕೃತ ಘೋಷಣೆ ಹೊರಡಿಸಿ ಸರ್ವೆ ಪುನರಾರಂಭ ನಡೆಸಿ ಅಂತಿಮಗೊಳಿಸಿ ಈ ತಿಂಗಳು ಅಂತ್ಯದೊಳಗೆ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಿದಲ್ಲಿ ಮಾತ್ರ ಅವರ ಕೊಡವ ಪ್ರೇಮದ ನಿಷ್ಕಪಟತೆಯನ್ನು ಓರೆಗಲ್ಲಿಗೆ ಹಚ್ಚಬಹುದು. ಏಕೆಂದರೆ ಈಗಾಗಲೇ ರಾಜ್ಯದ ಚುನಾವಣಾ ಅಧಿಕಾರಿಗಳು ಕೇಂದ್ರ ಮುಖ್ಯ ಚುನಾವಣಾ ಆಯುಕ್ತರ ನಿರ್ದೇಶನದ ಮೇರೆಗೆ ಜನವರಿ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ರಾಜ್ಯದ ಹಿರಿಯ ಐ.ಎ.ಎಸ್ ಮತ್ತು ಐ.ಪಿ.ಎಸ್ ಅಧಿಕಾರಿಗಳ ಸಭೆನಡೆಸಿ 2018 ರ ಮೇ ತಿಂಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಪೂರ್ವ ಸಿದ್ದತೆಯ ತಾಲೀಮು ನಡೆಸಿದ್ದು ಇದು ಫೆಬ್ರವರಿ ಮೊದಲ ವಾರದಲ್ಲಿ ಮುಂದೆ ಮೇ ತಿಂಗಳಲ್ಲಿ ನಡೆಯುವ ಚುನಾವಣೆಯ ದಿನಾಂಕದ ಅಧಿಕೃತ ಗಝೆಟ್ ನೋಟಿಫಿಕೇಷನ್ ಹೊರಡಲಿರುವ ಸಂಭವನೀಯ ಸುಳಿವು ನೀಡಿದ್ದಾರೆ.

ಪರಿಸ್ಥಿತಿ ಹೀಗಿರುವಾಗ ಒಮ್ಮೆ ಚುನಾವಣಾ ನೀತಿ ಸಂಹಿತೆ ಘೋಷಣೆಯಾದ ಕೂಡಲೇ ಯಾವುದೇ ಸರ್ಕಾರಿ ಆದೇಶ ಯಾ ತೀರ್ಮಾನ ಅಸಿಂಧುವಾಗಲಿದ್ದು ಮುಂದೆ ಚುನಾವಣೆ ನಡೆದ ನಂತರ ಉಂಟಾಗುವ ರಾಜಕೀಯ ಸ್ಥಿತ್ಯಂತರದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆಂದು ನಿಚ್ಛಳವಾಗಿ ಭವಿಷ್ಯ ನುಡಿಯಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಫೆಬ್ರವರಿಯ ನಂತರ ಕೊಡವರ ಕುಲಶಾಸ್ತ್ರ ಅಧ್ಯಯನ (ಎಥ್ನೊಗ್ರಾಫಿಕ್ ಸರ್ವೆ) ನಡೆಸಲು ಖಂಡಿತ ಸಾಧ್ಯವಿಲ್ಲ.

ಆದ್ದರಿಂದ ಇಂದಿನಿಂದಲೇ ಸರ್ವೆ ಕಾರ್ಯಕ್ಕೆ ಚಾಲನೆ ನೀಡಿ ಮೂರು ತಾಲೂಕುಗಳನ್ನು ವಿಗಂಡಿಸಿ ಒಟ್ಟಿಗೆ ಮೂರು ತಂಡಗಳಿಂದ 20 ದಿನಗಳ ಟಾಸ್ಕ್ ನೀಡಿ ಜನವರಿ 31 ರೊಳಗೆ ಅಧ್ಯಯನ ಪರಿಪೂರ್ಣಗೊಳಿಸಿ ಕ್ಯಾಬಿನೆಟ್ ತೀರ್ಮಾನ ಕೈಗೊಂಡು ಕೇಂದ್ರಕ್ಕೆ ಕೊಡವರ ಪರ ಶಿಫಾರಸ್ಸು ನೀಡಿದಲ್ಲಿ ಇಲ್ಲ ತಮ್ಮ ಪರಮಾಧಿಕಾರ ಬಳಸಿ ಕುಲಶಾಸ್ತ್ರ ಅಧ್ಯಯನ ನಡೆಸದೆಯೇ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಮೂಲಕ ಶ್ರೀ ಸಿದ್ದರಾಮಯ್ಯನವರು ಮತ್ತವರ ಸರ್ಕಾರದ ಕೊಡವರನ್ನೊಳಗೊಂಡ (ಕೊಡವ ಇನ್ಕ್ಲೂಸಿವ್) ಕರ್ನಾಟಕವೆಂದು ಪರಿಗಣಿಸಬಹುದಲ್ಲದೇ ಅವರ ಸಮಾನತೆಯ (ಇಗಾಲಿಟೇರಿಯನ್) ಮತ್ತು ಕಲ್ಯಾಣ ರಾಜ್ಯ ಸಿದ್ದಾಂತ (ವೆಲ್ಫೇರ್ ಸ್ಟೇಟ್ ಥಿಯರಿ) ನಿರ್ಮಾಣಕ್ಕಾಗಿ ನಡೆಯುವ ಸೋಶಿಯಲ್ ಇಂಜಿನಿಯರಿಂಗ್ ಎಂದು ನಾವು ಒಪ್ಪಿಕೊಳ್ಳಬಹುದು ಮತ್ತು ಈ ಸಂಬಂಧ ಕೊಡವರನ್ನೊಳಗೊಂಡ ಕರ್ನಾಟಕದ ಭವಿಷ್ಯತ್ತನ್ನು ಸುವರ್ಣ ಅಕ್ಷರಗಳಲ್ಲಿ ಬರೆದಂತಾಗುತ್ತದೆ. ಇಲ್ಲದಿದ್ದಲ್ಲಿ ಕೊಡವರ ಪರ ಹೇಳಿಕೆಗಳು ಕೇವಲ ಬೂಟಾಟಿಕೆ ಎಂದು ನಾವು ಭ್ರಮಿಸಬೇಕಾಗುತ್ತದೆ. (ಕೊಡವರಿಗೆ ಎಷ್ಟೇ ಆರ್ಥಿಕ ಪ್ಯಾಕೇಜ್ ಹರಿದು ಬಂದರೂ ಅಥವಾ ಬರುವುದಿದ್ದರೂ ಅದು ಬಿಕ್ಷೆ ಆದ ಕಾರಣ ಆ ಭಿಕ್ಷಾ ಪಾತ್ರೆ ಹಿಡಿದು ನಾವು ಅದೆಷ್ಟು ದಿನ ಯಾರ್ಯಾರ ಬಳಿಗೆ ಭಿಕ್ಷೆಗಾಗಿ ಅಂಡಲೆಯಬೇಕಾಗುತ್ತದೆ. ಅದೇ ನಾವು ಶೆಡ್ಯೂಲ್ ಪಟ್ಟಿಗೆ ಸೇರ್ಪಡೆ ಗೊಂಡರೆ ನಮ್ಮ ಸಂವಿಧಾನಿಕ ಹಕ್ಕಿನ ಪಾಲಾದ ವಿಶೇಷ ಹಣ ಬಿಡುಗಡೆ ಅಡೆತಡೆ ಇಲ್ಲದೇ ನೇರವಾಗಿ ಸ್ವಾಭಿಮಾನದಿಂದ ಯಥೇಚ್ಛವಾಗಿ ಹರಿದು ಬರುತ್ತದೆ.)

ಕೊಡವ ಬುಡಕಟ್ಟಿಗೆ ರಾಜ್ಯಾಂಗ ಖಾತರಿ ಕೇವಲ ನಮ್ಮ ಭವಿಷ್ಯತ್ತು, ಅಸ್ಥಿತ್ವ ಹಾಗು ಚಾರಿತ್ರಿಕ ನಿರಂತರತೆಯನ್ನು ಸ್ಥಿರೀಕರಿಸುವುದು ಮಾತ್ರವಲ್ಲ ಇದರಲ್ಲಿ ನಮ್ಮ ಭಾವನೆ, ಆಶೋತ್ತರ, ವಿಚಾರಧಾರೆ, ಆಲೋಚನೆ, ವೇದನೆ ಸಂವೇದನೆಗಳ ಸಮಷ್ಠಿ ಸಾಕ್ಷಿ ಪ್ರಜ್ಞೆ ಅಡಗಿದ್ದು ನಮ್ಮ ಹಕ್ಕೊತ್ತಾಯವನ್ನು ಖಂಡಿತ ಆಟಿಕೆಯ ವಸ್ತುವೆಂದು ಅಣಕಿಸಿ ಜಾರಿಕೊಳ್ಳುವ ಅತೀ ಜಾಣ್ಮೆ ತೋರದೆ ನೈಜ ರಾಜ ನೀತಿ – ರಾಜಕೀಯ ಇಚ್ಛಾಶಕ್ತಿ ತೋರಿರಿ –  ಇದೊಂದು ಕಳಪೆ ಮಟ್ಟದ ಚುನಾವಣಾ ಗಿಮಿಕ್ ಆಗದಂತೆ ಎಚ್ಚರ ವಹಿಸಿರಿ. ಇಲ್ಲದಿದ್ದಲ್ಲಿ ಖಂಡಿತಾ ಇದು ಮುಂದಿನ ಚುನಾವಣೆಗೆ ಸಿ.ಎನ್.ಸಿ ಯ ಪ್ರಮುಖ ಕಾರ್ಯಸೂಚಿಯಾಗಲಿದೆ. ಇದರಲ್ಲಿ ಚಳಿ ಕಾಯುವ; ಕೊಡವರ ಭವಿಷ್ಯತ್ತಿಗೆ ಕೊಳ್ಳಿ ಇಟ್ಟ ದ್ರೋಹಿ ಕೊಡವರನ್ನು ಬಯಲು ಮಾಡಬೇಕಾಗುತ್ತದೆ.

ಕೆಲವು ಕೊಡವ ವಿರೋಧಿ ಪಟ್ಟಭದ್ರರು, ಕರ್ನಾಟಕದ ಬಹುಸಂಖ್ಯಾತರು, ಎಡವಕ್ರ ಬುದ್ದಿಜೀವಿ ಭಯೋತ್ಪಾದಕರು ಮತ್ತು ಜಿಹಾದಿ ದೇಶದ್ರೋಹಿ ಕೂಟ ತೆರೆಮರೆಯ ಪಿತೂರಿ ನಡೆಸಿ ಸ್ಥಳೀಯ ಕೆಲವು ದ್ರೋಹಿ ಕೊಡವರನ್ನು ಮುಂದಿಟ್ಟುಕೊಂಡು ನಡೆಸಿದ ಒಳಸಂಚಿನ ಪರಿಣಾಮ ಕುಲಶಾಸ್ತ್ರ ಅಧ್ಯಯನ ತಡೆಹಿಡಿಯಲ್ಪಟ್ಟಿತ್ತೆಂಬುದು ಅತ್ಯಂತ ಖೇದಕರ ವಿಚಾರ.

ವೀಣಾ ಅಚ್ಚಯ್ಯನವರು ಏಕಾಗ್ರತೆಯಿಂದ ಎಥ್ನೋಗ್ರಾಫಿಕ್ ಸರ್ವೆ ನಡೆಸುವ ಮೂಲಕ ಕೊಡವರನ್ನು ಬುಡಕಟ್ಟು ಶೆಡ್ಯೂಲ್ ಪಟ್ಟಿಗೆ ಸೇರಿಸುವುದೇ ಅತೀ ಪ್ರಧಾನ ಬಯಕೆ ಮತ್ತು ವಿಚಾರವೆಂದು ಆತ್ಮಸಾಕ್ಷಿಯ ಬದ್ದತೆ ಮೆರೆದಲ್ಲಿ ಆಡಳಿತ ಪಕ್ಷದಲ್ಲಿರುವ ಅವರ ಕೋರಿಕೆ ಮನ್ನಣೆ ಪಡೆಯದಿರಲಾರದು. ಏನೇ ಇರಲಿ ಸಮೋರೋಪಾದಿಯಲ್ಲಿ ಮತ್ತೇ ಸರ್ವೆ ಕಾರ್ಯಕ್ಕೆ ಚಾಲನೆ ನೀಡಿರಿ.

ಹೊಡೆದವನು ಮರೆತರೂ ಹೊಡೆಸಿಕೊಂಡವನು ಮರೆಯಲಾರ ಎಂಬ ನಾಣ್ನುಡಿಯಂತೆ ಮುಖ್ಯಮಂತ್ರಿಗಳ ಕೊಡವ ತಾತ್ಸರ- ಉಪೇಕ್ಷೆ ನೀತಿಯನ್ನು ಚರಿತ್ರೆ ಎಂದೆಂದಿಗೂ ಮರೆಯುವುದಿಲ್ಲ.

ನಾವು ಕೊಡವರಾಗಿ ಜನ್ಮವೆತ್ತಿದ್ದೇ ಅಪರಾಧವಾ? ಬದಲಿಗೆ ರೊಹಿಂಗ್ಯಗಳಾಗಿದಿದ್ದರೆ ಎಥ್ನೊಗ್ರಾಫಿಕ್ ಸರ್ವೆ (ಕುಲಶಾಸ್ತ್ರ ಅಧಯನ) ಸಲೀಸಾಗಿ ನಡೆದು ನಮ್ಮ ಅಸ್ಥಿತ್ವಕ್ಕೆ ಸ್ಥೀರೀಕರಣದ ಶಿಫಾರಸ್ಸು ನಡೆದು ಹೋಗುತ್ತಿತ್ತೇನೋ? ಏನೇ ಇರಲಿ ಕುಲಶಾಸ್ತ್ರ ಅಧ್ಯಯನ ಸ್ಥಗಿತಗೊಳಿಸಿ ಕೊಡವರ ಕುಲನಾಶಕ್ಕೆ ಇತಿಶ್ರೀ ಹಾಡಿದ ದ್ರೋಹಿ ಕೊಡವರ ಹೆಸರು ಇತಿಹಾಸದ ಕರಾಳ ಅಧ್ಯಾಯದಲ್ಲಿ ಸೇರಿ ಹೋಗಲಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ತಿಳಿಸಿದೆ

 

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *