ಜಮ್ಮುಕಾಶ್ಮೀರದಲ್ಲಿ ಸಾಮಾಜಿಕ ಜಾಲತಾಣ ಮದರಸಗಳ ಮೇಲೆ ಕೇಂದ್ರದ ನಿಯಂತ್ರಣ ಅಗತ್ಯ ಬಿಪಿನ್ ರಾವತ್

Posted on: January 13, 2018

bipin-rawat

ನವದೆಹಲಿ: ಜಮ್ಮುಕಾಶ್ಮೀರದಲ್ಲಿ ಸರ್ಕಾರಿ ಶಾಲೆ, ಸಾಮಾಜಿಕ ಜಾಲತಾಣ ಮತ್ತು ಮದರಸಾಗಳ ಮೂಲಕ ಪ್ರತ್ಯೇಕವಾದಿಗಳು ಮೂಲಭೂತವಾದ ಹರಡುತ್ತಿದ್ದಾರೆ. ಇದರ ಮೇಲೆ ಕೇಂದ್ರ ಸರ್ಕಾರ ನಿಯಂತ್ರಣ ಸಾಧಿಸಬೇಕು ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಆಗ್ರಹಿಸಿದ್ದಾರೆ.

ಜಮ್ಮುಕಾಶ್ಮೀರದಲ್ಲಿನ ಸರ್ಕಾರಿ ಪಠ್ಯ ಪುಸ್ತಕಗಳಲ್ಲಿ ಪ್ರತ್ಯೇಕ ಕಾಶ್ಮೀರದ ಭೂಪಟವಿದೆ. ಅಲ್ಲಿನ ಪಠ್ಯ ಪುಸ್ತಕಗಳಲ್ಲಿ ಮಹತ್ತರವಾದ ಬದಲಾವಣೆಗಳು ಆಗಬೇಕು. ಶೈಕ್ಷಣಿಕ ವ್ಯವಸ್ಥೆ ಬದಲಾದರೆ ಮಾತ್ರ ಕಾಶ್ಮೀರದ ಸಮಸ್ಯೆಗೆ ಪರಿಹಾರವಾಗಬಹುದು. ಉಗ್ರವಾದವನ್ನು ಕಿತ್ತೊಗೆಯಬೇಕಾದರೆ ಮೊದಲು ಶಿಕ್ಷಣ ವ್ಯವಸ್ಥೆ ಬದಲಾಗಬೇಕು ಎಂದು ಸೇನಾ ದಿನಾಚರಣೆ ಅಂಗವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್ ಅಭಿಪ್ರಾಯಪಟ್ಟರು.

ಜಮ್ಮುಕಾಶ್ಮೀರದ ಯಾವುದೇ ಶಾಲೆಗೆ ತೆರಳಿ ನೋಡಿದರೂ ಅಲ್ಲಿ ಎರಡೆರಡು ಭೂಪಟಗಳು ಸಿಗುತ್ತದೆ. ಒಂದು ಪ್ರತ್ಯೇಕ ಜಮ್ಮುಕಾಶ್ಮೀರ. ಮತ್ತೊಂದು ಭಾರತದ್ದು. ಸಣ್ಣ ಮಕ್ಕಳಿಗೆ ಪ್ರತ್ಯೇಕವಾದದ ಪಾಠ ಮಾಡಲಾಗುತ್ತಿದೆ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಮತ್ತು ಅಪಪ್ರಚಾರಗಳು ಯುವಕರನ್ನು ತಲುಪುತ್ತಿದೆ. ಪಾಠಗಳು ಕೂಡ ಮೂಲಭೂತವಾದದ್ದಾಗಿರುವ ಕಾರಣದಿಂದ ಯುವಕರು ಅದರತ್ತ ಸೆಳೆಯಲ್ಪಡುತ್ತಿದ್ದಾರೆ. ಮದರಸ ಮತ್ತು ಮಸೀದಿಗಳ ಮೇಲೆ ಕೇಂದ್ರ ಸರ್ಕಾರ ನಿಯಂತ್ರಣ ಹೇರಲೇಬೇಕು ಎಂದು ಅವರು ತಿಳಿಸಿದರು

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *