ಜೆಡಿಎಸ್ ಪರಿಶಿಷ್ಟ ಘಟಕಕ್ಕೆ ರಾಜಿನಾಮೆ

Posted on: January 13, 2018

JDS

ಮಡಿಕೇರಿ : ಕೊಡಗು ಜಿಲ್ಲಾ ಜಾತ್ಯಾತೀತ ಜನತಾದಳದ ಪರಿಶಿಷ್ಟ ಜಾತಿ ಘಟಕದ ಜಿಲ್ಲಾ ಉಪಾಧ್ಯಕ್ಷರಾದ ಹೆಚ್.ಜಿ.ರಾಚಯ್ಯ ಹಾಗೂ ತಾಲ್ಲೂಕು ಅಧ್ಯಕ್ಷರಾದ ಹೆಚ್.ಕೆ.ಸುಬ್ರಮಣಿ ತಮ್ಮ ಸ್ಥಾನಕ್ಕೆ ಮತ್ತು ಜೆಡಿಎಸ್ ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಇವರು ಘಟಕದ ಜಿಲ್ಲಾಧ್ಯಕ್ಷರಾದ ಹೆಚ್.ಎನ್. ಯೋಗೇಶ್‍ಕುಮಾರ್ ಅವರಿಗೆ ಜೆಡಿಎಸ್ ನಲ್ಲಿ ಸೂಕ್ತ ಸ್ಥಾನಮಾನ ಹಾಗೂ ಗೌರವ ದೊರೆಯದ ಕಾರಣ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ತಾವು ಕೂಡ ರಾಜಿನಾಮೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಪಕ್ಷದ ಏಳಿಗೆಗಾಗಿ ಪರಿಶಿಷ್ಟ ಜಾತಿ ಘಟಕದ ಮೂಲಕ ಸಾಕಷ್ಟು ಶ್ರಮಿಸಿದ್ದರೂ ನಾಯಕರುಗಳಿಂದ ಯಾವುದೇ ಸ್ಪಂದನೆ ದೊರೆತ್ತಿಲ್ಲವೆಂದು ಆರೋಪಿಸಿದ್ದಾರೆ.

 

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *