ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಭಾವನಾ

Posted on: January 22, 2018

Bhavana wed

ಕಳೆದ ವರ್ಷ ಮನೆಯವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟಿ ಭಾವನಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕರ್ನಾಟಕ ಮೂಲದ ನಿರ್ಮಾಪಕ ನವೀನ್ ಕುಮಾರ್ ಅವರ ಜೊತೆ ಭಾವನಾ ಸಪ್ತಪದಿ ತುಳಿದಿದ್ದಾರೆ. ಹಿಂದೂ ಸಂಪ್ರದಾಯದಂತೆ ಇಂದು(ಜ:22) ಮದುವೆ ಶಾಸ್ತ್ರಗಳು ಜರುಗಿವೆ. ಕೇರಳದ ತ್ರಿಶೂರ್ ನಲ್ಲಿರುವ ತಿರುವಂಬಾಡಿ ಶ್ರೀಕೃಷ್ಣ ದೇವಸ್ಥಾನದಲ್ಲಿ ಮದುವೆಯ ಮಹೂರ್ತ ಸಮಾರಂಭ ನಡೆದಿದೆ.

ಭಾವನಾ ಅವರ ಸಂಬಂಧಿಕರು ಹಾಗೂ ನವೀನ್ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದಾರೆ.

 

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *