ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನ ಬಿಜೆಪಿಯದೆಂದು ಆರೋಪಿಸಿ ಎಸ್‍ಡಿಪಿಐ ಪ್ರತಿಭಟನೆ

Posted on: January 13, 2018

12-MDK123

ಮಡಿಕೇರಿ : ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಒಡಕನ್ನು ಮೂಡಿಸಿ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಗರದ ಇಂದಿರಾಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿತ್ತು.
ಪಿಎಫ್ಐ ಅಧ್ಯಕ್ಷ ಹ್ಯಾರಿಸ್ ನ ನೇತೃತ್ವದಲ್ಲಿ ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿ ವಿರೋಧಿ ಘೋಷಣೆಗಳ ಸಹಿತ ಪ್ರತಿಭಟನೆ ನಡೆಸಿ, ರಾಜ್ಯದಲ್ಲಿ ಹತ್ಯೆಗಳಾದಾಗ ಮುಸ್ಲಿಂ ಸಂಘಟನೆಗಳನ್ನು ಆರೋಪ ಮಾಡಿ ತನಿಖೆಯ ಹಾದಿಯನ್ನು ತಪ್ಪಿಸಿ ಆ ಮೂಲಕ ಗಲಭೆಯನ್ನು ಸೃಷ್ಟಿಸಿ ಕೋಮು ದೃವೀಕರಣಕ್ಕೆ ಬಿಜೆಪಿ ಮುಂದಾಗಿರುದಾಗಿ ಪ್ರತಿಭಟನಾಕಾರರು ಆರೋಪಿಸಿದರು.
ರಾಜ್ಯ ವ್ಯಾಪಿ ನಡೆಯುತ್ತಿರುವ ಹತ್ಯಾಪ್ರಕರಣದ ಹಿಂದೆ ಬಿಜೆಪಿ ನಾಯಕರ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ ಸಂಘಟನೆಯ ಪ್ರಮುಖರು, ರಾಜ್ಯಾದ್ಯಂತ ನಡೆದ ಹತ್ಯೆಗಳ ಮರು ತನಿಖೆ ನಡೆಸಿ, ಹತ್ಯೆಯ ಸಂಧರ್ಭದಲ್ಲಿ ಸುಳ್ಳು ಪ್ರಚಾರ ಮಾಡಿದ ಬಿಜೆಪಿ ನಾಯಕರುಗಳಾದ ಶೋಭಾ ಕರಂದ್ಲಾಜೆ, ಅನಂತ ಕುಮಾರ್ ಹೆಗ್ಗಡೆ ಸೇರಿದಂತೆ ಇತರರನ್ನು ತನಿಖೆಗೆ ಒಳಪಡಿಸಿ ಬಿಜೆಪಿಯ ನೈಜ ಮುಖವಾಡವನ್ನು ಬೇಲಿಗೆಳೆಯಯಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಿಎಫ್ಐ ನ ಕಾರ್ಯದರ್ಶಿ ಇಬ್ರಾಹಿಂ, ಎಸ್‍ಡಿಪಿಐನ ಜಿಲ್ಲಾಧ್ಯಕ್ಷ ಅಮೀನ್ ಮೋಹಿಸಿನ್, ನಗರಾಧ್ಯಕ್ಷ ಪೀಟರ್, ಮುಸ್ತಫಾ ಮತ್ತಿತರರು ಪಾಲ್ಗೊಂಡಿದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *