ಮಡಿಕೇರಿಗೆ ಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆ ಆರಂಭ

Posted on: January 12, 2018

madikeri bus
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಫ್ಲೈ ಬಸ್ ಸೇವೆಯನ್ನು ವಿಸ್ತರಣೆ ಮಾಡಿದೆ. ಮಡಿಕೇರಿ ಮತ್ತು ಸೇಲಂಗಳಿಗೆ ತೆರಳುವ ಬಸ್ ಸೇವೆಗೆ ಚಾಲನೆ ಸಿಕ್ಕಿದೆ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧ ನಗರಗಳಿಗೆ ಕೆಎಸ್ಆರ್‌ಟಿಸಿಯ ಫ್ಲೈ ಬಸ್ ಸಂಚಾರ ನಡೆಸುತ್ತದೆ. ಇದೇ ಮೊದಲ ಬಾರಿಗೆ ಅಂತರರಾಜ್ಯ ಬಸ್ ಸೇವೆಯನ್ನು ಆರಂಭಿಸಲಾಗಿದೆ.

madikeri bus2

ವೇಳಾಪಟ್ಟಿ :

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 10 ಮತ್ತು ರಾತ್ರಿ 10.30ಕ್ಕೆ ಸೇಲಂಗೆ ಬಸ್ ಸಂಚಾರ ನಡೆಸಲಿದೆ. ಸೇಲಂನಿಂದ ಬೆಳಗ್ಗೆ 4.30 ಮತ್ತು ಸಂಜೆ 4 ಗಂಟೆಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸುವ ಬಸ್ ಹೊರಡಲಿದೆ. ಪ್ರಯಾಣ ದರ 800 ರೂ.ಗಳು.
ಮಡಿಕೇರಿಗೆ ಸಂಚಾರ ನಡೆಸುವ ಫ್ಲೈ ಬಸ್ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 12.30ಕ್ಕೆ ಹೊರಡಲಿದೆ. ಮಡಿಕೇರಿಯಿಂದ ರಾತ್ರಿ 11.30ಕ್ಕೆ ಹೊರಡಲಿದೆ. ಮಣಿಪಾಲ್-ಬೆಂಗಳೂರು ನಡುವೆ ಫ್ಲೈ ಬಸ್ ಸೇವೆ 2+1 ಸೀಟುಗಳನ್ನು ಬಸ್ ಹೊಂದಿದೆ. ರಾಸಾಯನಿಕ ಶೌಚಾಲಯ, ವಿಮಾನದ ಬಗ್ಗೆ ಮಾಹಿತಿ ನೀಡುವ ಡಿಜಿಟಲ್ ಡಿಸ್‌ಪ್ಲೈ ಬೋರ್ಡ್ ಮುಂತಾದ ಸೌಲಭ್ಯಗಳನ್ನು ಒಳಗೊಂಡಿದೆ.

flybus

2014ರಲ್ಲಿ ಕೆಎಸ್ಆರ್‌ಟಿಸಿ ಮೊದಲು ಮೈಸೂರಿಗೆ ಫ್ಲೈ ಬಸ್ ಸೇವೆ ಆರಂಭಿಸಿತ್ತು. ಈಗ ಮಣಿಪಾಲ್‌ಗೂ ಫ್ಲೈ ಬಸ್ ಸಂಚರಿಸುತ್ತಿದೆ. ಮುಂದಿನ ದಿನಗಳಲ್ಲಿ ಆಂಧ್ರಪ್ರದೇಶದ ತಿರುಪತಿ ಮತ್ತು ಕೇರಳದ ಕೊಯಿಕೋಡ್‌ಗೂ ಬಸ್ ಸಂಚಾರ ಆರಂಭಿಸಲು ಕೆಎಸ್ಆರ್‌ಟಿಸಿ ನಿರ್ಧರಿಸಿದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *