ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಮೇಲುಸೇತುವೆ ಯೋಜನೆಯಿಂದ ಸಮಸ್ಯೆಗೆ ಮುಕ್ತಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್

Posted on: January 12, 2018

Z RAMANATH
ಮಡಿಕೇರಿ : ಭಾಗಮಂಡಲ ಭಗಂಡೇಶ್ವರ ದೇವಸ್ಥಾನದ ಮುಂಭಾಗದ ತ್ರಿವೇಣಿ ಸಂಗಮದ ಬಳಿ ಮುಖ್ಯ ರಸ್ತೆಗೆ ಮೇಲ್ಸೇತುವೆ ನಿರ್ಮಾಣವನ್ನು ಕರ್ನಾಟಕ ರಾಜ್ಯ ಘನ ಸರ್ಕಾರ ಮಂಜೂರು ಮಾಡಿರುವುದಕ್ಕೆ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಸಮಿತಿಯು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ನೀರಾವರಿ ಮಂತ್ರಿಗಳಾಗಿರುವ ಎಂ.ಬಿ. ಪಾಟೀಲ್ ಹಾಗೂ ಕೊಡಗು ಉಸ್ತುವಾರಿ ಮಂತ್ರಿಗಳಾದ ಎಂ.ಆರ್. ಸೀತಾರಾಂ ಅವರನ್ನು ಅಭಿನಂದಿಸುವುದಾಗಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಬಿ.ಎಸ್.ರಮಾನಾಥ್ ತಿಳಿಸಿದ್ದಾರೆ.

ಪ್ರತಿಕಾ ಹೇಳಿಕೆ ನೀಡಿರುವ ಅವರು ಭಾಗಮಂಡಲ ಮೇಲ್ಸೇತುವೆಯ ನಿರ್ಮಾಣದ ಯೋಜನೆಯು 2014ರಲ್ಲಿ ಕೊಡಗಿನ ಉಸ್ತವಾರಿ ಮಂತ್ರಿಗಳಾಗಿದ್ದ ಕೆ.ಜೆ.ಜಾರ್ಜ್ ಅವರು ಅತಿವೃಷ್ಠಿ ಸಂದರ್ಭದಲ್ಲಿ ಭಾಗಮಂಡಲಕ್ಕೆ ಭೇಟಿ ನೀಡಿದಾಗ ಸಂಪೂರ್ಣ ಜಲಾವೃತವಾಗಿದ್ದು ಸಂಚಾರ ಸಂಪರ್ಕ ಕಡಿದುಹೋಗಿತ್ತು. ಆ ಸಂದರ್ಭ ಜನರ ಬೇಡಿಕೆಯನ್ನು ಮತ್ತು ಮಾಜಿ ಸಚಿವರಾದ ದಿ. ಎಂ.ಎಂ. ನಾಣಯ್ಯ ಮತ್ತು ಕಾಂಗ್ರೆಸ್ ನಾಯಕ ದಿ. ಬಿ.ಟಿ. ಪ್ರದೀಪ್ ಮತ್ತು ಹಾಲಿ ಕೆ.ಪಿ.ಸಿ.ಸಿ. ಉಪಾಧ್ಯಕ್ಷರಾದ ಹಿರಿಯ ಕಾಂಗ್ರೆಸ್ ಮುಖಂಡರಾದ ಮಿಟ್ಟುಚಂಗಪ್ಪ ಹಾಗೂ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾಗಿದ್ದ ಎಂ.ಎ. ಪೊನ್ನಪ್ಪ ಅವರ ಸಲಹೆಯನ್ನು ಪರಿಗಣಿಸಿ ಸದ್ರಿ ಮೇಲ್ಸೇತುವೆ ಯೋಜನೆಯನ್ನು ರಚಿಸಲು ಮುಂದಾದರು. ಅವರ ಮನವಿಯನ್ನು ಪುರಸ್ಕರಿಸಿದ ನೀರಾವರಿ ಮಂತ್ರಿಗಳಾದ ಎಂ.ಬಿ ಪಾಟೀಲ್ ಅವರು ನೀರಾವರಿ ನಿಗಮದದಿಂದ ಈ ಯೋಜನೆಯನ್ನು ಕೈಗೆತ್ತಿಕೊಂಡಿರುವುದು ಶ್ಲಾಘನೀಯ ಎಂದರು
ಕೊಡಗಿನ ಜನರ ಶ್ರದ್ದಾಕೇಂದ್ರ ಮತ್ತು ದಕ್ಷಿಣಕಾಶಿ ಎಂದೇ ಪ್ರಖ್ಯಾತವಾಗಿರುವ ಭಾಗಮಂಡಲದಲ್ಲಿ ಈ ಯೋಜನೆಯು ಒಂದು ದೊಡ್ಡ ಹೆಮ್ಮೆಯಾಗಿದ್ದು, ಕೊಡಗು ಜಿಲ್ಲೆಯ ಪ್ರವಾಸೋದ್ಯಮ ದೇಶದಲ್ಲೇ ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವುದು ದಾಖಲಾಗಿದೆ. ಎಲ್ಲಾ ವಾರಗಳ ಮತ್ತು ತಿಂಗಳುಗಳ ಕೊನೆಯಲ್ಲಿ ಮತ್ತು ರಜಾ ದಿನಗಳು ಬರುವ ಸಂದರ್ಭದಲ್ಲಿ ಸಾವಿರಾರು ಜನ ಭಾಗಮಂಡಲ ಮತ್ತು ತಲಕಾವೇರಿಗೆ ಭೇಟಿ ನೀಡುತ್ತಾರೆ.

ಅಲ್ಲದೇ ಪ್ರಸಿದ್ಧವಾಗಿರುವ ಎಮ್ಮೆಮಾಡು ದರ್ಗಾಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನರು ಸಂದರ್ಶಿಸುತ್ತಾರೆ. ಈ ಎಲ್ಲಾ ಜನರಿಗೂ ಸರ್ವಋತು ಸಂಪರ್ಕವನ್ನು ಕಲ್ಪಿಸಲು ಈ ಮೇಲ್ಸೇತುವೆ ದೊಡ್ಡ ಕೊಡಗುಗೆಯನ್ನು ನೀಡಲಿದೆ. ಭಾಗಮಂಡಲ ಹೋಬಳಿ ವ್ಯಾಪ್ತಿಯ ಜನರ ಪಾಡಂತೂ ಮಳೆಗಾಲದಲ್ಲಿ ತೀರ ಶೋಚನೀಯ. ಮಕ್ಕಳು, ಮಹಿಳೆಯರು, ಅನಾರೋಗ್ಯ ಪೀಡಿರತು ಗರ್ಭಿಣಿಯರು ತೀರ ಬವಣೆ ಪಡುತ್ತಾರೆ. ಯೋಜನೆಯು ಒಂದು ದೀರ್ಘಕಾಲಿಕ ದೃಷ್ಠಿಯಿಂದ ಈ ಭಾಗಕ್ಕೆ ಒಂದು ದೊಡ್ಡ ಕೊಡುಗೆಯಾಗಿದ್ದು, ಇದನ್ನು ಕಲ್ಪಿಸಲು ಸಹಕರಿಸಿದ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಆಗಿನ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರು ಬಿ.ಎನ್. ತಮ್ಮಯ್ಯ, ನಿಲೇಶ್ವರ ತಂತ್ರಿ ಅವರು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಕೊಲ್ಯದ ಗಿರೀಶ್ ಅವರನ್ನು ಅಭಿನಂದಿಸುದಾಗಿ ರಮಾನಾಥ್ ತಿಳಿಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *