ಶಶಿಕಲಾ ಕೋಣೆಯಲ್ಲಿ ಸಿಕ್ಕಿದೆ ಒಂದು ರಹಸ್ಯ ಪತ್ರ ಆ ಪತ್ರದಲ್ಲಿರುವುದು ಏನು ಗೊತ್ತಾ

Posted on: January 13, 2018

sasikala-pti

ಚೆನ್ನೈ: ದಿವಂಗತ ಜಯಲಲಿತಾ ಅವರ ಪೋಯಸ್‌ ಗಾರ್ಡನ್‌ ಮನೆಯಲ್ಲಿರುವ  ಶಶಿಕಲಾ ಅವರಿಗೆ ಸಂಬಂಧಿಸಿದ ಕೋಣೆಯೊಂದರಲ್ಲಿ  ರಹಸ್ಯ ಪತ್ರವೊಂದು ಆದಾಯ ತೆರಿಗೆ ಇಲಾಖೆಯವರಿಗೆ ಸಿಕ್ಕಿದೆಯಂತೆ. ತಮಿಳು ನಾಡಿನ ಗುಟ್‌ ಕಾ ಹಗರಣದಲ್ಲಿ ಶಾಮೀಲಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮದ್ರಾಸ್‌ ಹೈಕೋರ್ಟ್‌ ಆದೇಶಿಸಿದ ರಹಸ್ಯ ಪತ್ರವೊಂದು ತನಗೆ ಸಿಕ್ಕಿದೆ ಎಂದು ಆದಾಯ ತೆರಿಗೆ ಇಲಾಖೆ ಹೈಕೋರ್ಟಿಗೆ ತಿಳಿಸಿದೆ.

ಗುಟ್‌ ಕಾ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಡಿಎಂಕೆ ಶಾಸಕ ಜೆ  ಅನ್‌ಬಳಗನ್‌ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಪಟ್ಟಂತೆ ಚೆನ್ನೈನ ಆದಾಯ ತೆರಿಗೆ ಇಲಾಖೆಯ ಪ್ರಧಾನ ನಿರ್ದೇಶಕರಾದ ಸೂಸಿ ಬಾಬು ವರ್ಗೀಸ್‌ ಅವರು ರಹಸ್ಯ ಪತ್ರವೊಂದು ತಮಗೆ ಸಿಕ್ಕಿದ ಮಾಹಿತಿಯನ್ನು ಅಫಿದಾವಿತ್ ಮೂಲಕ ಬಹಿರಂಗಪಡಿಸಿದ್ದಾರೆ.

ಗುಟ್‌ ಕಾ ಹಗರಣದಲ್ಲಿ ರಾಜ್ಯದ ಒಬ್ಬ ಸಚಿವರು ಮತ್ತು ಕೇಂದ್ರ ಹಾಗೂ ರಾಜ್ಯದ ಉನ್ನತ ಮಟ್ಟದ ಅಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಭಾಗಿಯಾಗಿದ್ದಾರಂತೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *