ಹಣಕ್ಕಾಗಿ ಬಾಣಂತಿ ಪತ್ನಿಗೆ ಬೆಂಕಿ ಹಚ್ಚಿದ ಪಾಪಿ ಪತಿ

Posted on: January 5, 2018

mandya fire

ಪತಿಯೊಬ್ಬ ಹಣಕ್ಕಾಗಿ ಬಾಣಂತಿ ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿ ಪರಾರಿಯಾದ ಘಟನೆ ಮಂಡ್ಯ ವ್ಯಾಪ್ತಿಗೆ ಒಳಪಟ್ಟ ಆಲಕೆರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಪ್ರತೀಶ್ ಎಂಬಾತ ತನ್ನ ಪತ್ನಿ ರಂಜಿನಿ (23)ಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದವ. ಈತ ಕಳೆದ ಮೂರು ವರ್ಷಗಳ ಹಿಂದೆ ತನ್ನದೇ ಗ್ರಾಮದ ಯುವತಿ ರಂಜಿನಿಯನ್ನು ವಿವಾಹವಾಗಿದ್ದ.

ಈ ದಂಪತಿಗೆ ನಾಲ್ಕು ತಿಂಗಳ ಮಗು ಸೇರಿದಂತೆ ಎರಡು ಮಕ್ಕಳಿವೆ. ಬಾಣಂತಿಯಾಗಿದ್ದ ರಂಜನಿ ಮಗುವನ್ನು ನೋಡಿಕೊಂಡು ಮನೆಯಲ್ಲಿದ್ದರು. ಪ್ರತೀಶ್ ಹೆಂಡತಿಯೊಂದಿಗೆ ತವರಿಂದ ಹಣ ತರುವಂತೆ ಪೀಡಿಸುತ್ತಿದ್ದನು. ಈ ವಿಚಾರದಲ್ಲಿ ಆಗಾಗ್ಗೆ ಜಗಳ ತೆಗೆದು ಹಿಂಸೆ ನೀಡುತ್ತಿದ್ದನು ಎನ್ನಲಾಗಿದೆ.

ದಂಪತಿ ನಡುವೆ ಅನೋನ್ಯತೆ ಕಡಿಮೆಯಾಗಿ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಈ ನಡುವೆ ಇದೇ ವಿಚಾರಕ್ಕೆ ದಂಪತಿ ನಡುವೆ ಕಲಹವಾಗಿದ್ದು, ಕೋಪಗೊಂಡ ಪ್ರತೀಶ್ ಹೆಂಡತಿ ರಂಜನಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ. ಆಕೆ ಜೋರಾಗಿ ಚೀರಿಕೊಂಡ ಸಂದರ್ಭ ಆಕೆಯನ್ನು ಬಿಟ್ಟು ಮನೆಯಿಂದ ಪರಾರಿಯಾಗಿದ್ದಾನೆ.

ಸುತ್ತಮುತ್ತಲಿನವರು ಓಡಿ ಬಂದು ರಂಜನಿಯನ್ನು ರಕ್ಷಿಸಿದ್ದು, ತೀವ್ರ ಸುಟ್ಟಗಾಯದಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಆಕೆಯನ್ನು ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಕೆರಗೋಡು ಠಾಣೆ ಪೊಲೀಸರು ನಾಪತ್ತೆಯಾಗಿರುವ ಆರೋಪಿಗಾಗಿ ಬಲೆ ಬೀಸಿದ್ದಾರೆ.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *