ಬ್ರೇಕಿಂಗ್ ನ್ಯೂಸ್
ಹಿಂಸಾ ರಾಜಕೀಯದ ವಿರುದ್ಧ ಎಸ್‍ಡಿಪಿಐ ಪ್ರತಿಭಟನೆ , ಶಶಿಕಲಾ ಕೋಣೆಯಲ್ಲಿ ಸಿಕ್ಕಿದೆ ಒಂದು ರಹಸ್ಯ ಪತ್ರ ಆ ಪತ್ರದಲ್ಲಿರುವುದು ಏನು ಗೊತ್ತಾ , ರಾಜ್ಯದಲ್ಲಿರುವುದು ಕೊಲೆಗಡುಕರ ಸರಕಾರ ಡಿವಿಎಸ್ , ಕಾಡಾನೆ ದಾಳಿಯಿಂದ ಸ್ಥಳೀಯರನ್ನು ರಕ್ಷಿಸಲು ಸಿದ್ದಗೊಂಡಿದೆ ಟೀಂ ರಾಪಿಡ್ ರೆಸ್ಫಾನ್ಸ್ , ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನ ಬಿಜೆಪಿಯದೆಂದು ಆರೋಪಿಸಿ ಎಸ್‍ಡಿಪಿಐ ಪ್ರತಿಭಟನೆ , ಕಾರ್ತಿಕ್ ಚಿದಂಬರಂಗೆ ಮತ್ತೆ ಶಾಕ್ ನೀಡಿದ ಇಡಿ ಆಪ್ತರ ಮನೆ ಮೇಲೂ ದಾಳಿ , ಗ್ಯಾಂಗ್ ವಾರ್ ನಲ್ಲಿ ಟಾರ್ಗೆಟ್ ಗ್ರೂಪಿನ ಕುಖ್ಯಾತ ರೌಡಿ ಇಲ್ಯಾಸ್ ಹತ್ಯೆ , ಜಮ್ಮುಕಾಶ್ಮೀರದಲ್ಲಿ ಸಾಮಾಜಿಕ ಜಾಲತಾಣ ಮದರಸಗಳ ಮೇಲೆ ಕೇಂದ್ರದ ನಿಯಂತ್ರಣ ಅಗತ್ಯ ಬಿಪಿನ್ ರಾವತ್ , ಜೆಡಿಎಸ್ ಪರಿಶಿಷ್ಟ ಘಟಕಕ್ಕೆ ರಾಜಿನಾಮೆ , ಎಸ್‍ಎಸ್‍ಎಫ್ ಪ್ರತಿಭೋತ್ಸವಕ್ಕೆ ಅಯ್ಯಂಗೇರಿಯಲ್ಲಿ ಇಂದು ಚಾಲನೆ ,

ಹಳೆ ವೈಷಮ್ಯ ಹಿನ್ನಲೆ ಇಬ್ಬರಿಗೆ ಗುಂಡೇಟು

Posted on: January 3, 2018

somavarpete1

ಸೋಮವಾರಪೇಟೆ : ಹಳೆ ವೈಷಮ್ಯದಿಂದ ನಡೆದ ಜಗಳದಲ್ಲಿ ಇಬ್ಬರು ಗುಂಡೇಟಿನಿಂದ ಗಾಯಗೊಂಡರೆ, ಮತ್ತೋರ್ವ ಕತ್ತಿಯೇಟಿನಿಂದ ಗಾಯಗೊಂಡಿರುವ ಘಟನೆ ಸಮೀಪ ತಲ್ತಾರೆ ಶೆಟ್ಟಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ತಲ್ತಾರೆ ಶೆಟ್ಟಳ್ಳಿ ಗ್ರಾಮದ ಸಿ.ಟಿ.ದರ್ಶನ್ ಹಾಗು ಪ್ರಜ್ವಲ್ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಅದೇ ಗ್ರಾಮದ ಸಂದೀಪ್ ಹಾಗೂ ಸಂತೋಷ್ ಆರೋಪಿಗಳು.

ತಲ್ತಾರೆ ಶೆಟ್ಟಳ್ಳಿ ಗ್ರಾಮದ ಸರಕಾರಿ ಶಾಲಾ ಮೈದಾನದ ಹತ್ತಿರ ಕಾಫಿ ಕಣದಲ್ಲಿದ್ದ ಸಂದೀಪ್, ನಾವು ತೆರಳುತ್ತಿದ್ದ ಅಲ್ಟೋ ಕಾರಿನ ಮೇಲೆ ಹಳೆ ವೈಷಮ್ಯದಿಂದ ಕೊಲೆ ಮಾಡುವ ಉದ್ದೇಶದಿಂದ ಗುಂಡು ಹಾರಿಸಿದ್ದಾರೆ ಎಂದು ಗಾಯಗೊಂಡಿರುವ ಸಿ.ಟಿ.ದರ್ಶನ್ ಪಟ್ಟಣದ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಸಂದೀಪ್ ಮತ್ತು ಸಂತೋಷ್ ವಿರುದ್ಧ ಕೊಲೆಯತ್ನ ಮೊಕದ್ದಮೆ ದಾಖಲಾಗಿದೆ.

ಕಾಫಿ ಕಣದಲ್ಲಿ ಸಂದೀಪ್ ಹಾಗೂ ಕಾರ್ಮಿಕ ನಾರಾಯಣ ಎಂಬವರು ಕೆಲಸ ಮಾಡುತ್ತಿದ್ದ ಸಂದರ್ಭ ಪ್ರಜ್ವಲ್ ಹಳೆ ವೈಷಮ್ಯದಿಂದ ಹಲ್ಲೆಗೆ ಮುಂದಾಗಿ ತಡೆಯಲು ಹೋದ ಸಂದರ್ಭ ನನ್ನ ಕೈಗೆ ಕಡಿದರು ಎಂದು ನಾರಾಯಣ ನೀಡಿದ ದೂರಿನನ್ವಯ ಪ್ರಜ್ವಲ್ ವಿರುದ್ಧ ಮೊಕದ್ದಮೆ ದಾಖಲಾಗಿದೆ.

ದರ್ಶನ್ ಅವರ ಎಡಭುಜ ಹಾಗೂ ಎದೆ ಭಾಗಕ್ಕೆ ಗಾಯವಾಗಿದ್ದು, ಪ್ರಜ್ವಲ್ ಶರೀರಕ್ಕೂ ಚಿಲ್ಲುಗಳು ಹೊಕ್ಕಿವೆ. ಗಾಯಾಳುಗಳು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಮಿಕ ನಾರಾಯಣ ಅವರ ಬಲಗೈಗೆ ಕತ್ತಿಯೇಟು ಬಿದ್ದಿದ್ದು, ಮಂಗಳೂರಿಗೆ ಕರೆದೊಯ್ಯಲಾಗಿದೆ.

ಗುಂಡು ಹಾರಿಸಿದ ಸಂದೀಪನನ್ನು ಪೊಲೀಸರು ಬಂಧಿಸಿದ್ದಾರೆ. ವೃತ್ತನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಣ್ಣ, ದೂರುಗಳನ್ನು ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *