ಎಡಪಾಲದಲ್ಲಿ ವ್ಯಕ್ತಿಯೋರ್ವನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ

Posted on: February 13, 2018

gun

ನಾಪೋಕ್ಲು : ಸಮೀಪದ ಎಡಪಾಲ ಗ್ರಾಮದಲ್ಲಿ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿದ್ದು ಹತ್ಯೆಗೆ ಯತ್ನಿಸಿದ ಆರೋಪಿಯನ್ನು ಬಂಧಿಸಲಾಗಿದೆ.

ಎಡಪಾಲ ಗ್ರಾಮದ ನಿವಾಸ ಮಹಮದ್ ರಫೀಕ್ ಎಂಬವರಿಗೆ ಅದೇ ಗ್ರಾಮದ ಹನೀಫ್ ಎಂಬವರು ಗುಂಡು ಹಾರಿಸಿ ಹತ್ಯೆ ನಡೆಸಲು ವಿಫಲ ಯತ್ನ ನಡೆಸಿರುವುದಾಗಿ ನಾಪೋಕ್ಲು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನೂತನ ಮನೆ ಕಟ್ಟಿಸುವ ಸಲುವಾಗಿ ಜೀಪ್‍ನಲ್ಲಿ ಸಾಮಗ್ರಿಗಳನ್ನುಕೊಂಡೊಯ್ಯುತ್ತಿದ್ದ ತನ್ನ ಹಾಗೂ ತನ್ನ ತಂದೆ ಹುಸೈನಾರ್ ಮೇಲೆ ಹನೀಫ್ ವಿನಾಕಾರಣ ಆಕ್ಷೇಪಣೆ ನಡೆಸಿದ್ದು ವ್ಯಾನ್ ಒಳಗಿನಿಂದ ಗುಂಡು ಹಾರಿಸಿದ್ದಾರೆಂದು ಗ್ರಾಮದ ರಫೀಕ್ ಕೆ.ಯು ಠಾಣೆಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಎಸ್.ಐ ನಂಜುಂಡಸ್ವಾಮಿ ಆರೋಪಿ ಹನೀಫ್‍ನನ್ನು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *