ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಕವಿ ಸರ್ವಜ್ಞ ಮತ್ತು ಛತ್ರಪತಿ ಶಿವಾಜಿ ಜಯಂತ್ಯುತ್ಸವ

Posted on: February 21, 2018

DSC03386
ಮಡಿಕೇರಿ  : ಸರ್ವಜ್ಞ ಸರ್ವರಲ್ಲೂ ಒಂದೊಂದು ಕಲಿತು ಸರ್ವಜ್ಞನಾದ, ತನ್ನ ಜ್ಞಾನಭಂಡಾರದ ಮೂಲಕ ಗುರಿತಿಸಿಕೊಂಡು ಸರ್ವಜ್ಞ ಹೆಸರು ಪಡೆದ ಎಂದು ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ತಿಳಿಸಿದ್ದಾರೆ.

DSC03394

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕೋಟೆ ಹಳೇ ವಿಧಾನಸಭಾ ಸಭಾಂಗಣದಲ್ಲಿ ನಡೆದ ಕವಿ ಸರ್ವಜ್ಞ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕನ್ನಡನಾಡಿ ಕವಿ ವಾಣಿ ಜನರನ್ನು ತನ್ನ ಜ್ಞಾನದಿಂದ ಸಂಪಾದಿಸಿದವರು ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಯುಗ ಪುರುಷ ಇಡೀ ವಿಶ್ವಕ್ಕೆ ಮಾದರಿಯಾದವರು ಸಮಾಜ ಕಂದಚಾರ ವಿರುದ್ಧ ಜನರಿಗೆ ತನ್ನ ವಚನಗಳ ಮೂಲಕ ತಿಳಿಸಿವರು ಸರ್ವಜ್ಞ ಎಂದು ಟಿ.ಪಿ.ರಮೇಶ್ ತಿಳಿಸಿದರು.

ತಲೆಬೊಳಿಸಿ ಸನ್ಯಾಸಿಯಾದರೇನು ‘ಗುರುವಿನ ಗುಲಾಮನಾಗುವತನಕ ಒಲಿಯದನ್ನ ಮುಕುತಿ’ ಯಶಸ್ಸು ಸಾಧಿಸಬೇಕಾದರೆ ಮಾರ್ಗದರ್ಶನ ಮುಖ್ಯ ಸರಿಯಾದ ದಾರಿ ಮಾರ್ಗಕ್ಕೆ ಒಬ್ಬ ಗುರು ಬೇಕು. ಗುರುವಿಗೆ ನಮಸ್ಕ್ಕರಿಸಿದರೆ ಪಾಪವೆಲ್ಲ ನಾಶವಾಗುವುದು ನನಗೆ ಜಾತಿ ಧರ್ಮ ಬೇಡವೆಂದು ಸರ್ವಜ್ಞ ಸಾರಿದ್ದರು. ನಮ್ಮ ಬಳಿ ಜ್ಞಾನವಿದ್ದರೆ ಜನರೇ ನಮ್ಮ ಬಳಿ ಬರುತ್ತಾರೆ. ಇದೇ ಸರ್ವಜ್ಞನ ಸಂದೇಶವಾಗಿತ್ತು. ಎಂದು ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರು ತಿಳಿಸಿದರು.
ರಾಜನಾಗಿ ಸಾಮ್ರಾಜ್ಯ ಆಳಿದ ಮಹಾನ್ ಚಕ್ರವರ್ತಿ ತನ್ನ ಆಡಳಿತದಲ್ಲಿ ಸಮಾನತೆ ಸಮಾಜ ಕಟ್ಟಬೇಕು ಜನರಿಗೆ ಸಾಮಾಜಿಕ ನ್ಯಾಯ ನೀಡಬೇಕು ಎನ್ನುವುದು ಶಿವಾಜಿಯಾದಗಿತ್ತು ಎಂದರು.

ತನ್ನ ಸೈನಿಕರಿಗೆ ಯುದ್ಧಕ್ಕೆ ಹೋಗುವ ಮುನ್ನ ದಾರಿಯಲ್ಲಿ ಮಸೀದಿ, ಚರ್ಚ್, ಕಂಡರೆ ನಮಸ್ಕರಿಸಿ ಹೋಗಿ ಎಂದು ಹೇಳುತ್ತಿದ್ದರು. ತನ್ನ ಸೈನಿಕರಿಗೆ ಗೆರಿಲ್ಲಾ ಯುದ್ಧ ತಂತ್ರವನ್ನು ಹೇಳಿಕೊಟ್ಟಿದ್ದನು. ದೇಶದ ಆಗುಹೋಗುಗಳ ಬಗ್ಗೆ ಚಿಂತನೆ ಮಾಡುತ್ತಿದ್ದವರು ಶಿವಾಜಿ ಎಂದು ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರಾದ ಟಿ.ಪಿ.ರಮೇಶ್ ತಿಳಿಸಿದರು.

DSC03381
ನಗರಸಭೆ ಅಧ್ಯಕ್ಷರಾದ ಕಾವೇರಿ ಸೋಮಣ್ಣ ಮಾತನಾಡಿ 16 ನೇ ಶತಮಾನದ ತ್ರಿಪದಿ ಕವಿ ಮೂಢನಂಬಿಕೆ ಕಂದಚಾರ ಇದರ ಬಗ್ಗೆ ಜನರಿಗೆ ತಿಳಿಸಿದನು. ಸರ್ವಜ್ಞ ಎಂಬುವವನು ಗರ್ವದಿಂದ ಅದವನಲ್ಲ, ಸರ್ವರಲ್ಲೂ ಒಂದೊಂದು ಕಲಿತು ಸರ್ವಜ್ಞನಾದ ಎಂದು ಅವರು ತಿಳಿಸಿದರು.

ಶಿವಾಜಿ ಉತ್ತಮ ಆಡಳಿತಗಾರ ರಾಜತಾಂತ್ರಿಕ ನೀಪುಣ. ತನ್ನ ಬುದ್ದಿ ಶಕ್ತಿಯಿಂದಲೇ ಒಂದು ಸೈನ್ಯವನ್ನು ನಿರ್ಮಾಣ ಮಾಡಿ. ವಿರೋಧಿಗಳಿಗೆ ಸಿಂಹಸ್ವಪ್ನವಾಗಿದ್ದವನು. ಹಾಗೆಯೇ ತನ್ನ ಆಸ್ಥಾನದಲ್ಲಿ ಅಷ್ಟ ಮಾರ್ಗಗಳನ್ನು ಅನುಸರಿಸಿ ಸಮಾಜದ ಹೇಳಿಗೆಗೆ ಸಹಕರಿಸಿದನು ಎಂದು ನಗರಸಭೆ ಅಧ್ಯಕ್ಷರಾದ ಕಾವೇರಿ ಸೋಮಣ್ಣ ತಿಳಿಸಿದರು.

ಸರಸ್ವತಿ ಡಿ.ಎಡ್.ಕಾಲೇಜಿನ ಪ್ರಾಂಶುಪಾಲರಾದ ಕುಮಾರ್ ಅವರು ಮಾತನಾಡಿ 16 ನೇ ಶತಮಾನದ ಗೆರಿಲ್ಲಾ ತಂತ್ರದ ರೂವರಿ ಅಖಂಡ ಭಾರತವನ್ನು ಒಗ್ಗೂಡಿಸುವ ಕನಸು ಶಿವಾಜಿಯಾದಾಗಿತ್ತು. ಸರ್ಕಾರದ ಬೆಳವಣಿಗೆಗೆ ನೀತಿ ನಿಯಮಗಳನ್ನು ನೀಡುತ್ತಿದ್ದ ಅಂದು ಶಿವಾಜಿ ದೇಶದ ಅಭಿವೃದ್ಧಿಗೆ 36 ಕಾನೂನುಗಳನ್ನು ಮಾಡಿದ್ದ ಎಂದು ಅವರು ತಿಳಿಸಿದರು.

ಸಿಂಹಾಸನದಿಂದ ರೈತನ ಕಡೆ ಮುಖಮಾಡಿದ ಸರ್ವಧರ್ಮದ ಆರಾಧಕನಾಗಿದ್ದ ಮತ್ತು ಸ್ತ್ರೀಯರನ್ನು ಗೌರವಿಸುತ್ತಿದ್ದನು ಶಿವಾಜಿ ಸಾಕು ತಾಯಿ ಬಳಿ ಬೆಳದವನು ಹುಟ್ಟು ದೈರ್ಯಶಾಲಿ, ಮಕ್ಕಳ ಸೇನೆ ಸ್ಥಾಪನೆ ಮಾಡಿದ ಮತ್ತು ಯುದ್ಧ ತಂತ್ರವನ್ನು ಹೇಳಿಕೊಡುತ್ತಿದ್ದನು ಎಂದು ಸರಸ್ವತಿ ಡಿ.ಎಡ್.ಕಾಲೇಜಿನ ಪ್ರಾಂಶುಪಾಲರಾದ ಕುಮಾರರವರು ತಿಳಿಸಿದರು.

DSC03397ಸರ್ವಜ್ಞ ಎಂದರೆ ಜ್ಞಾನಿ ಎಲ್ಲವನ್ನು ತಿಳಿದವನು, ಸರ್ವಜ್ಞ ಸಂಶೋಧನೆ ಮಾಡಿಲ್ಲ, ಯುದ್ಧ ಮಾಡಿಲ್ಲ, ಸಾಮಾನ್ಯ ಮನುಷ್ಯನಾಗಿ ಬದುಕಿನ ಸಾರವನ್ನು ತಿಳಿದು ದೇಶಕ್ಕೆ ನೀಡಿದ ತ್ರಿಪದಿಯಲ್ಲಿ ವಚನ ಸಾಹಿತ್ಯವನ್ನು ನೀಡಿದನು ಎಂದು ಸರಸ್ವತಿ ಡಿ.ಎಡ್.ಕಾಲೇಜಿನ ಪ್ರಾಂಶುಪಾಲರಾದ ಕುಮಾರ್ ಅವರು ತಿಳಿಸಿದರು.

‘ಸಾಲವನ್ನು ಮಾಡುವಾಗ ಹಾಲುಂಡಂತೆ ಸಾಲ ಕೇಳುವಾಗ ಗಿಬ್ಬಗಿ ಕೀಲು ಮುರಿದಂತೆ’ ಬೆಚ್ಚನೆಯ ಮನೆಹೊಂದಿರಲು ವೆಚ್ಚಕ್ಕೆ ಹೊಂದಿಷ್ಟು ಹೊನ್ನಿರಲು ಇಚ್ಚೇಯ ಸತಿ ಇರಲು ಸ್ವರ್ಗಕ್ಕೆ ಕಿಚ್ಚಾಚ್ಚೆಂದ ಸರ್ವಜ್ಞ, ಇವು ಸರ್ವಜ್ಞನ ಉತ್ತಮವಾದ ಸಂದೇಶ ಹಾಗೆಯೇ ಭೂಮಿ, ಸೂರ್ಯ, ನೀರು, ಅಗ್ನಿ ಎಲ್ಲಾ ಒಂದೇ ಇಗಿರುವಾಗ ಜಾತಿ ಎಂಬುದು ಲೇಸು ಎಂದು ಎಂದು ಸರಸ್ವತಿ ಡಿ.ಎಡ್.ಕಾಲೇಜಿನ ಪ್ರಾಂಶುಪಾಲರಾದ ಕುಮಾರರವರು ತಿಳಿಸಿದರು.

ಕುಲಾಲ ಸಂಘದ ಜಿಲ್ಲಾಧ್ಯಕ್ಷರಾದ ನಾಣಯ್ಯ ಮಾತನಾಡಿ ನಮಗೆ ತಿಳಿಯದಿರುವ ಎಷ್ಟೋ ವಿಚಾರಗಳನ್ನು ವಿಚಾರವಂತರು ತಿಳಿಸಿದ್ದಾರೆ.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಜಿ.ಪಂ.ಯೋಜನಾ ನಿರ್ದೇಶಕರಾದ ಸಿದ್ದಲಿಂಗಸ್ವಾಮಿ, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ, ಮಂಜುನಾಥ್ ಇತರರು ಇದ್ದರು. DSC03400

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *