ಕಾವೇರಿ ನಿಸರ್ಗಧಾಮದಲ್ಲಿ ಕೊಡವ ಸಂಸ್ಕೃತಿಯ ಅನಾವರಣ

Posted on: February 14, 2018

12-c-1024x768

ಕುಶಾಲನಗರ : ವಿಶಿಷ್ಟ ಸಂಸ್ಕೃತಿ , ಸಂಪ್ರದಾಯಗಳ ಮೂಲಕ ಹೆಸರುವಾಸಿಯಾದವರು ಕೊಡವ ಜನರು. ರಾಜ್ಯ ಮಾತ್ರ ದೇಶ ವಿದೇಶದಲ್ಲಿ ಹೆಸರಾಗಿರುವ ಕೊಡವ ಸಂಸ್ಕೃತಿಯನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹೊಸ ಪ್ರಯೋಗ ಮಾಡಿದೆ.

12-22

ಮೈಸೂರು ಮಡಿಕೇರಿ ಹೆದ್ದಾರಿಯಲ್ಲಿ ಇರುವ ಕಾವೇರಿ ನಿಸರ್ಗಧಾಮದಲ್ಲಿ ಅರಣ್ಯ ಇಲಾಖೆ ಕೊಡವ ಸಂಪ್ರದಾಯ ಸಂಪ್ರದಾಯ ಬಿಂಬಿಸುವ ಕಲಾಕೃತಿಗಳು ಮೂಡಿವೆ. ಹುಬ್ಬಳ್ಳಿ ಮೂಲದ 30 ಮಂದಿ ಕಲಾವಿದರು ಈ ಅದ್ಭುತ ಕಲಾಸೃಷ್ಟಿಮಾಡಿದ್ದು.  ಈ ಕಲಾಕೃತಿಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಕೊಡವ ಸಾಂಪ್ರದಾಯಿಕ ನೃತ್ಯ ಮತ್ತು ಗೌಡ ಜನಾಂಗದ ಕೋಲಾಟ, ಆದಿವಾಸಿಗಳ ದಿನಚರಿ ಕುರಿತ ನೈಜವಾಗಿ ಕಾಣುವ ರೀತಿಯಲ್ಲಿ ಆಕೃತಿಗಳನ್ನು ಮಾಡಲಾಗಿದೆ. ಹರೀಶ್ ತಂಡ, ಟೆಕ್ನಿಕಲ್ ಮತ್ತು ಕ್ಲೇ ಮೂಲಕ ಈ ಅದ್ಭುತ ಕಲಾಕೃತಿಗಳ ಸೃಷ್ಠಿಕರ್ತರು.

12-d-1024x768

ಸರ್ಕಾರದಿಂದ ಸಿಕ್ಕ ಸೂಕ್ತ ಅನುದಾನ ಅರಣ್ಯ ಇಲಾಖೆಯ ಯೋಜನೆಯಿಂದಾಗಿ ನಿಸರ್ಗಧಾಮ ಈಗ ಅಪಟ್ಟ ಕೊಡವ ಸಂಸ್ಕತಿಕ ನಾಡಾಗಿ ರೂಪುಗೊಂಡಿದೆ. ಮೊದಲೇ ಪ್ರವಾಸಿ ಕೇಂದ್ರ ಬಿಂದುವಾಗಿರುವ ಜಿಲ್ಲೆಯಲ್ಲಿ ಈ ತಾಣ ಸದ್ಯ ಜನರನ್ನು ಮತ್ತಷ್ಟು ಆಕರ್ಷಿಸುತ್ತಿದೆ.

12-a-5-1024x768

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *