ಕಾವೇರಿ ಸನ್ನಿದಿಯಲ್ಲಿ  ಕೈಲಾಸ ನಾಥನನ್ನು ಕೊಂಡಾಡಿದ ಭಗಂಡೇಶ್ವರ ಭಕ್ತರು

Posted on: February 14, 2018

IMG_0049

ಮಡಿಕೇರಿ :  ಶಿವನ ಆರಾಧ್ಯ ಸ್ಥಾನವಾದ ಭಾಗಮಂಡಲದ ಭಗಂಡೇಶ್ವರ  ದೇವರ ಸನ್ನಿದಿಯಲ್ಲಿ ಶಿವರಾತ್ರಿಯ ದಿನ ಬೆಳಿಗ್ಗೆಯಿಂದಲೇ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ನೆರೆದು ದೇವರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾದರು

ಶಿವರಾತ್ರಿಯ ದಿನ ಬೆಳಿಗ್ಗೆ ೬.೩೦ ಗಂಟೆಯಿಂದ ಬಂಟವಾಳದ ಸುದರ್ಶನ ಮಯ್ಯ ತಂಡದವರಿಂದ  ಶತರುದ್ರ ಅಭಿಷೇಕ  ಪಾರಾಯಣ ಪ್ರಾರಂಭವಾಗಿ ೯.೦೦ ಗಂಟೆಗೆ ಮುಕ್ತಾಯವಾಯಿತು .ನಂತರ ನೆರೆದಿದ್ದ ಭಕ್ತರಿಗೆ ದೇವಸ್ಥಾನದಲ್ಲಿ ಬೆಳಿಗ್ಗಿನ  ಉಪಹಾರ ನೀಡಲಾಯಿತು .ಉಪಹಾರದ ನಂತರ ಬೆಳ್ಳಿಗ್ಗೆ ೯.೩೦ ಗಂಟೆಯಿಂದ  ಮೈಸೂರಿನ ಪ್ರಕಾಶ್ ಭಟ್ ತಂಡದವರಿಂದ  ರುದ್ರ ಹೋಮ ಪ್ರಾರಂಭವಾಗಿ ಅದರಲ್ಲಿ ಇತೀಚೆಗೆ ನೂತನವಾಗಿ ರಚಿತಗೊಂಡ ದೇವಸ್ಥಾನ ವ್ಯವಸ್ತಾನ ಸಮಿತಿಯ ಅಧ್ಯಕ್ಷರು ಹಾಗು ಸದಸ್ಯರು ಭಕ್ತರೊಂದಿಗೆ ಪಾಲ್ಗೊಂಡಿದ್ದು ವಿಶೇಷವೆನಿಸಿತ್ತು .

ರುದ್ರ ಹೋಮದ ನಂತರ ಮಧ್ಯಾಹ್ನ ೧೨.೦೦ ಗಂಟೆಗೆ ಸರಿಯಾಗಿ ಮಹಾಪೂಜೆ ಹಾಗು( ದೇವರ ಬಲಿ) ದೇವಸ್ಥಾನದ ಸುತ್ತ ದೇವರನ್ನು ಹೊತ್ತು ನೃತ್ಯ ಮಾಡುವ ಕಾರ್ಯಕ್ರಮ ನಡೆಯಿತು .

ಎಲ್ಲ ವರುಷದಂತೆ ಈ  ವರ್ಷವೂ ನಾಪೋಕ್ಲು ಹಾಗು ಪಾರಣೆಯಿಂದ ಕಾವೇರಿ ಬೈವಾಡು ಹೊತ್ತ  ತಂಡವು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು . ಅದರಲ್ಲಿಯೂ ಹೆಂಗಸರು ಹಸುಕುಸುಗಳನ್ನು ಹೊತ್ತು ಭಾಗವಹಿಸಿದ್ದು ವಿಶೇಷವಾಗಿತ್ತು. ಅವರಿಗೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಸದಸ್ಯರು ಶಲ್ಯ ಹೊದಿಸಿ ದೇವಸ್ಥಾನಕ್ಕೆ ಬರಮಾಡಿಕೊಂಡರು . ನಂತರ ೬.೦೦ ಗೆ ದೇವರು ಕೇರಳದ ಚಂಡೆ ಹಾಗು ಕುಶಾಲನಗರದ ಸ್ಯಾಕ್ಸೋಫೋನ್

ಕಲಾವಿದರ ಸಂಗೀತದೊಂದಿಗೆ ದೇವಸ್ಥಾನದ ೧೨ ಸುತ್ತು ಬಂದು ಸಂಗಮಕ್ಕೆ ತೆರಳಿ ಅಲ್ಲಿಯೂ ದೇವರ ಜಳಕ ,ಪೂಜೆ ವಿಡಿ ವಿಧಾನಗಳನ್ನು ನೆರೆವೇರಿಸಿ ಪದ್ಮಯ್ಯ ಗೌಡರ ಬಾಣಬಿರಿಸು ಕಾರ್ಯಕ್ರಮ ನೆರೆದಿದ್ದ ಪ್ರೇಕ್ಷಕರ ಮನಸೆಳೆಯಿತು .ನಂತರ ದೇವಸ್ಥಾನಕ್ಕೆ ಮರಳಲಾಯಿತು .

ನಂತರ ಸಂಜೆ ನಡೆದ ವೇದಿಕೆ ಕಾರ್ಯಕ್ರಮವನ್ನು ಕೊಡಗಿನ ಎಂ. ಎಲ್ .ಸಿ . ಯಾದ ಶಾಂತೆಯಂಡ  ವೀಣಾ ಅಚ್ಚಯ್ಯ ನವರು ದೀಪ ಬೆಳಗುವ ಮುಖಂತರ ಉದ್ಘಾಟಿಸಿ, ಮಾತನಾಡುತ್ತ ಕಳೆದ ಹಲವು ವರ್ಷಗಳು ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿಯು ರಚನೆಯಾಗಿತ್ತಿಲ್ಲ ,ಈಗ ವ್ಯವಸ್ಥಾಪನಾ ಸಮಿತಿಯು ರಚನೆಯಾಗಿದ್ದು ,ಅಧ್ಯಕ್ಷರು ಹಾಗು ಸದಸ್ಯರು ಯಾವುದೇ ಕಾರ್ಯಕ್ಕೆ ದಕ್ಕೆ ಬಾರದ ಹಾಗೆ ಎಲ್ಲರನ್ನು ಗಣನೆಗೆ ತೆಗೆದು ಕೊಂಡು ದೇವಸ್ಥಾನದ ಸರ್ವತೋಮುಖ ಅಭಿವೃದಿಗೆ ಶ್ರಮಿಸಬೇಕೆಂದರು . ದೇವಸ್ಥಾನದ ಶುಚಿತ್ವದ ಕಡೆ ಬಹಳ ಮುತುವರ್ಜಿ ವಹಿಸಬೇಕೆಂದರು .

ನಂತರ ಸಭೆಯನ್ನುದ್ದೇಶಿಸಿ  ಮಾತನಾಡಿದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಿದ್ದಾಟಂಡ ತಮ್ಮಯ ನವರು ಮಹಾ ಶಿವರಾತ್ರಿಯು ಭಾರತದೇಶದಲ್ಲಿಯೇ ಒಂದು ಶ್ರೇಷ್ಠವಾದ ಹಬ್ಬವಾಗಿದ್ದು ,ನಾವು ಆಡಳಿತ ಮಂಡಳಿಯವರು ಆಡಳಿತಕ್ಕೆ ಬಂದಾಗಲೇ ಇದನ್ನು ಭಗಂಡೇಶ್ವರನ ಸನ್ನಿದಿಯಲ್ಲಿ ಅದ್ದೂರಿಯಾಗಿ ನಡೆಸಬೇಕೆಂದು ತೀರ್ಮಾನಿಸಿದ್ದೆವು .ನಾವು ಈ ದೇವಸ್ಥಾನಕ್ಕೆ ಮೊದಲು ಏನು ಆಗಬೇಕಿದೆ ಎನ್ನುವುದನ್ನು ನಾವು ಸಾರ್ವಜನಿಕರು ಹಾಗು ಅರ್ಚಕರೊಡಗೂಡಿ ದೇವಸ್ಥಾನದ ಶುಚಿತ್ತ್ವ ,ಪೂಜೆ ಪುನಸ್ಕಾರ ,ಕ್ಷೇತ್ರದ ಶುಚಿತ್ವದ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು .ಸರವಜನಿಕರು ಹಾಗು ಗ್ರಾಮಸ್ಥರು ನಮಗೆ ಒಳ್ಳೆಯ ಸಲಹೆಯನ್ನು ನೀಡಿರುತ್ತಾರೆ .ಇನ್ನು ಮುಂದೆಯೂ ಗ್ರಾಮಸ್ಥರನ್ನು ಗಣನೆಗೆ ತೆಗೆದುಕೊಂಡು ದೇವಸ್ಥಾನದ ಅಭಿವೃದ್ಧಿ ಕಾರ್ಯವನ್ನು ನಡೆಸಲಾಗುವುದೆಂದರು . ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ಪೂಜೆ ಪುನಸ್ಕಾರ ಮಾಡಿದರೆ  ದೇವಸ್ಥಾನದ ಶಕ್ತಿಯು ಹೆಚ್ಚಾಗಲಿದೆ .

ಅದರಿಂದ ನಮ್ಮ ಜೀವನದಿಯಾದ ಕಾವೇರಿಯು ಯಾವಾಗಲು ಮೈದುಂಬಿ ಹರಿಯಲು ಸಹಕಾರವಾಗಿ ರೈತರಿಗೆ ಹಾಗು ಕುಡಿಯುವ ನೀರಿಗೆ ಎಂದು ಬರಗಾಲ ಬರುವುದಿಲ್ಲ ಎಂದರು .ಕಾವೇರಿ ತಾಯಿಯು ಎಂದು ತಮ್ಮ ಕೈಬಿಡುವುದಿಲ್ಲ ,ಅದಕ್ಕೆ ನಾನೆ ಒಂದು ಸಣ್ಣ ಉದಾಹರಣೆ ಎಂದರು .ತಾನು ಕಳೆದ ಇಪ್ಪತೆಂಟು ವರ್ಷದಿಂದ ತುಲಾ ಸಂಕ್ರಮಣ ಜಾತ್ರೆಯ ಸಮಯದಲ್ಲಿ ಒಂದು ತಿಂಗಳು ಕಿರು ಸಂಕ್ರಮಣದ ತನಕವೂ ಅನ್ನದಾನದಲ್ಲಿ ತೊಡಗಿದ್ದು,ಅದನ್ನು ಅರಿತ ಕಾವೇರಿ ತಾಯಿಯು ತನ್ನನು ಅದರ ಸೇವೆಗೆ ಸರಕಾರದ ಮುಕಾಂತರ ನಿಯೋಜಿಸಿದೆ ಎಂದು ಭಾವಿಸುತ್ತೇನೆ ಎಂದರು .

IMG_0062

ನಂತರ ಮುಂಡಾಚದಿರ ರೆನ್ನಿ ಮತ್ತು ತಂಡದವರಿಂದ ಸ್ವಾಗತ ನೃತ್ಯ , ಭಾಗಮಂಡಲದ ಮಿಲನ ಭರತ್ ತಂಡದವರಿಂದ ,ಹಲವು ನೃತ್ಯ ಪ್ರದರ್ಶನ , ಚೆಂದಿರ ನಿರ್ಮಲ ಬೊಪ್ಪಣ್ಣ ನವರಿಂದ ಭಾವಗೀತೆ ,ಅಂಗೀರ ಕುಸುಮ ತಂಡದಿಂದ ಭಕ್ತಿಗೀತೆ ಹಾಗು ಶಿವ ತಂಡವಾ ನೃತ್ಯ , ಅಮ್ಮಣಿಚಂದ ಪ್ರವೀಣ್ ಮತ್ತು  ಮಣವಟ್ಟೀರಾ ದಯಾ ಕುಟ್ಟಪ ನವರಿಂದ ಹಾಡುಗಾರಿಕೆ ಕಾರ್ಯಕ್ರಮ ನಡೆಯಿತು .ಸಂಗೀತ ಶ್ರೀನಿವಾಸರವರಿಂದ ಸಂಗೀತ ನೀಯೋಜಿಸಲಾಯಿತು . ಮುಕ್ಕೋಡುವಿನ ಬಾಳೋಪಾಟ್ ತಂಡವು ದೇವಸ್ಥಾನದ ಹೆಬ್ಬಾಗಿಲಿನಲ್ಲಿ ಬಾಳೋಪಾಟ್ಟ್ ಹಾಡಿದ್ದು ವಿಶೇಷವಾಗಿತ್ತು .

ನಂತರ ಕಡಬದ ಗೋಪಾಲಕೃಷ್ಣ ಯಕ್ಷಗಾನ ಸಂಘದಿಂದ ಶಿವಶಕ್ತಿ ಮಹಾತ್ಮೆ ಯಕ್ಷಗಾನ ಬಯಲಾಟ ಬೆಳಿಗ್ಗಿನವರೆಗೂ ನಡೆಯಿತು .

ಸಾಯಂಕಾಲದ ಉಪಹಾರವನ್ನು ಪಟ್ಟಮಾದ ಕುಟುಂಬಸ್ಥರು ನೆರೆವೇರಿಸಿದರೆ ,ಹೂ ಅಲಂಕಾರವನ್ನು ಪೆಬ್ಬಟ್ಟಿರ ಮಣಿ ಮೇದಪ್ಪ ನೆರವೇರಿಸಿಕೊಟ್ಟರು .

ವ್ಯವಸ್ಥಾಪನಾ ಸಮಿತಿಯ ಪರವಾಗಿ ಅಧ್ಯಕ್ಷರಾದ ಬಿದ್ದಾಟಂಡ ತಮ್ಮಯ್ಯನವರ ಜೊತೆಯಲ್ಲಿ ,ಸಮಿತಿಯ ಸದಸ್ಯರಾದ ಡಾಕ್ಟರ್ ಸಣ್ಣುವಂಡ ಕಾವೇರಪ್ಪ ,ಉದಿಯಾಂದ ಸುಭಾಷ್ ,ನಿಡ್ಯಮಲೆ ಮೀನಾಕ್ಷಿ ,ಕೆದಂಬಾಡಿ ರಮೇಶ್ , ಕೊಡಿ ಮೋಟಯ್ಯ ,ಅಣ್ಣಯ್ಯ ,ರವಿಕುಮಾರ್ ಹಾಗು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್ ಪಾರುಪತ್ತೆಗಾರರಾದ ಕೊಂಡಿರ ಪೊನ್ನಣ್ಣ ಹಾಜರಿದ್ದರು .

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *