ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಕುಮಟೂರು ಹುಲಿ ದಾಳಿ ಪ್ರಕರಣ ರೈತನೊಂದಿಗೆ ಸಂಭಾಷಣೆ ನಡೆಸಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕೆ, ಸಂಕೇತ್ ಪೂವಯ್ಯನವರಿಂದ ಸಹಾಯ ಹಸ್ತ

Posted on: February 22, 2018

001 (7)
ಗೋಣಿಕೊಪ್ಪಲು :  ದ.ಕೊಡಗಿನ ಕುಮಟೂರು ಗ್ರಾಮದ ಬೊಜ್ಜಂಗಡ ಗಣಪತಿ(ಗಪ್ಪು) ಎಂಬವರ ಮನೆಗೆ ಮುಂಜಾನೆ ತೆರಳಿದ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಹಸು ಕಳೆದುಕೊಂಡ ರೈತ ಕುಟುಂಬಕ್ಕೆ 10 ಸಾವಿರ ಸಹಾಯ ಹಸ್ತ ನೀಡುವ ಮೂಲಕ ಕುಟುಂಬದವರ ಕಷ್ಟಗಳಲ್ಲಿ ಭಾಗಿಯಾದರು. ಮನೆಯ ಸಮೀಪವಿರುವ ಕೊಟ್ಟಿಗೆಯಿಂದ ಎರಡು ಹಾಲು ಕೊಡುವ ಹಸುಗಳನ್ನು ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು. ಈ ಹಿನ್ನಲೆಯಲ್ಲಿ ಕುಮಟೂರಿನ ಗಣಪತಿ ಮನೆಗೆ ಸಂಕೇತ್ ಪೂವಯ್ಯ ಭೇಟಿ ನೀಡಿ ಹಸು ಕಳೆದುಕೊಂಡು ದುಖಃದಲ್ಲಿದ್ದ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಕಾನೂನು ಹೋರಾಟಕ್ಕೆ ಸಹಕರಿಸುವುದಾಗಿ ತಿಳಿಸಿದರು.

ಸ್ಥಳದಿಂದ ದೂರವಾಣಿ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್‍ಡಿ.ಕುಮಾರಸ್ವಾಮಿಯೊಂದಿಗೆ ಕೊಡಗಿನಲ್ಲಿ ಹುಲಿ,ಕಾಡಾನೆ ದಾಳಿಯಿಂದ ಆಗುತ್ತಿರುವ ತೊಂದರೆ ಬಗ್ಗೆ ಸಂಕೇತ್ ಗಮನ ಸೆಳೆದರು. ಈ ಸಂದರ್ಭ ಹಸು ಕಳೆದುಕೊಂಡ ರೈತ ಗಣಪತಿಯೊಂದಿಗೆ ಮಾತನಾಡಿದ ಕುಮಾರಸ್ವಾಮಿ ಮುಂದಿನ ದಿನದಲ್ಲಿ ನೊಂದ ಕುಟುಂಬಗಳಿಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ನೀಡುವ ಪ್ರಯತ್ನ ಮಾಡಲಾಗುವುದು ಕೊಡಗಿನ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದು ಗಣಪತಿಗೆ ದೂರವಾಣಿ ಮೂಲಕ ತಿಳಿಸಿದರು.

ಗಣಪತಿ ಕುಟುಂಬವು ತನ್ನ ಜೀವನಕ್ಕೆ ಹೈನುಗಾರಿಕೆ ನಂಬಿದ್ದರು ಮನೆಯ ಸಮೀಪದಲ್ಲೇ ಘಟನೆ ನಡೆದಿರುವುದರಿಂದ ಭಯದಲ್ಲಿ ದಿನ ಕಳೆಯುತ್ತಿದ್ದಾರೆ. ಅರಣ್ಯ ಇಲಾಖೆಯಿಂದ 20 ಸಾವಿರ ಪರಿಹಾರ ನೀಡಿ ತೆರಳಿದ್ದಾರೆ. ಸುತ್ತ ಮುತ್ತಲಿನ ಗ್ರಾಮದ ಜನತೆ ನಮ್ಮಲ್ಲಿಗೂ ಹುಲಿ ದಾಳಿ ನಡೆಸಬಹುದೆಂದು ಭಯದ ವಾತಾವರಣದಲ್ಲಿ ದಿನ ಕಳೆಯುತ್ತಿದ್ದಾರೆ.ಭೇಟಿಯ ಸಂದರ್ಭ ಬೊಜ್ಜಂಗಡ ಕಾವೇರಮ್ಮ, ಬೊಜ್ಜಂಗಡ ಕೃಷ್ಣಕುಮಾರ್, ಬೊಜ್ಜಂಗಡ ಸುಬ್ರಮಣಿ, ಬೊಜ್ಜಂಗಡ ಚಂದನ್,ಮತ್ತಿತ್ತರು ಹಾಜರಿದ್ದರು.

ಅರಣ್ಯ ಇಲಾಖೆ ಹಳೆ ಕಾಲದ ಬೋನನ್ನು ಇಟ್ಟು ಹುಲಿಯನ್ನು ಹಿಡಿಯುವುದಾಗಿ ಹೇಳಿದ್ದಾರೆ. ಹಸು ಕಳೆದುಕೊಂಡು ನಾವು ಕಷ್ಟದಲ್ಲಿದ್ದೇವೆ.ಅರಣ್ಯ ಇಲಾಖೆಯ ಪರಿಹಾರ ಏನೇನು ಸಾಲದು. ಸಂಕೇತ್‍ರವರು ನೀಡಿದ ಹಣ ಸಹಾಯದಿಂದ ಸ್ವಲ್ಪ ಮಟ್ಟಿಗೆ ಅನುಕೂಲವಾಗಿದೆ.
ಬೊಜ್ಜಂಗಡ ಗಣಪತಿ(ಗಪ್ಪು) ಹಸು ಕಳೆದುಕೊಂಡ ರೈತ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *