ಬ್ರೇಕಿಂಗ್ ನ್ಯೂಸ್
ಕ್ಷಯರೋಗದ ಬಗ್ಗೆ ಪ್ರತಿಯೊಬ್ಬರಿಗೂ ಮಾಹಿತಿ ಇರಲಿ ಕಾವೇರಮ್ಮ ಸೋಮಣ್ಣ , ಜನರಲ್ ತಿಮ್ಮಯ್ಯ ಹುಟ್ಟುಹಬ್ಬ ಅಚ್ಚುಕಟ್ಟಾಗಿ ಆಯೋಜಿಸಲು ಜಿಲ್ಲಾಧಿಕಾರಿ ಸೂಚನೆ , ಬೇಲೂರು ಶಾಸಕ ರುದ್ರೇಶಗೌಡ ನಿಧನ , ಮರೀಚಿಕೆಯಾದ ಕೊಟ್ಟಿಗೆ ಹಣ ಗ್ರಾ.ಪಂ ವಿರುದ್ಧ ಜಿ.ಪಂ ಸಿಇಒ ಗೆ ದಸಂಸ ದೂರು , 1 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ , ಕೊಡಗಿನ ಶಾಸಕರು ಜಿಲ್ಲೆಯನ್ನು ಅಭಿವೃದ್ಧಿಪಡಿಸಿದ್ದಲ್ಲಿ ಶಾಸಕರಿಗೆ ಟಿಕೆಟ್ ನೀಡಲು ಬಿಜೆಪಿಯ ವಿಳಂಭ ಯಾಕೆ ಸಂಕೇತ್ ಪೂವಯ್ಯ , ಮುದ್ರಕರು ಹಾಗೂ ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ಸಭೆ , ತಮಿಳು ಅತಿ ಹಿರಿಯ ಭಾಷೆ ದ್ರಾವಿಡ ಭಾಷಾ ಕುಟುಂಬಕ್ಕಿದೆ 4500 ವರ್ಷಗಳ ಇತಿಹಾಸ , ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಧಿಕಾರಿ ಸೂಚನೆ , ಅಪರಿಚಿತ ಯುವತಿಯ ಮೃತದೇಹ ಪತ್ತೆ ಕೊಲೆ ಶಂಕೆ ,

ಜಿಲ್ಲಾಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ

Posted on: February 23, 2018

2ಮಡಿಕೇರಿ : ಕಡಗದಾಳು ಗ್ರಾಮದ ಶ್ರೀ ಬೊಟ್ಲಪ್ಪ ಯುವಕ ಸಂಘದ ಬೆಳ್ಳಿ ಹಬ್ಬದ ಸಂಬ್ರಮಕ್ಕೆ ಚಾಲನೆ ಸಿಕ್ಕಿದೆ. ಬೆಳ್ಳಿ ಬೆಳಕು ಹೆಸರಿನಡಿ ಎರಡು ದಿನ ಕಾಲ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಬೆಳ್ಳಿ ಹಬ್ಬದ ಅಂಗವಾಗಿ ಶುಕ್ರವಾರ ಜಿಲ್ಲಾಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಕಡಗದಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಡೆದ ಪಂದ್ಯಾವಳಿಗೆ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಚಾಲನೆ ನೀಡಿ, ಕಾರ್ಯಕ್ರಮಕ್ಕೆ ಶುಭಕೋರಿದರು. 1

 

ಮುಖ್ಯ ಅತಿಥಿಯಾಗಿದ್ದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ರತಿಕುಮಾರಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡು ಬೆಳ್ಳಿಹಬ್ಬ ಆಚರಿಸುತ್ತಿರುವುದು ಸಂತಸದ ವಿಚಾರ. ಸಂಘದ ಜನೋಪಯೋಗಿ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರೆಯಲಿ ಎಂದು ಆಶಿಸಿದರು.

ಬೆಳ್ಳಿಮಹೋತ್ಸವ ಆರ್ಥಿಕ ಸಮಿತಿ ಸಂಚಾಲಕ ಬಿ.ಡಿ. ನಾರಾಯಣ ರೈ, ಸಲಹಾ ಸಮಿತಿ ಸದಸ್ಯರಾದ ಕಿಶೋರ್ ರೈ ಕತ್ತಲೆಕಾಡು, ಎನ್.ಸಿ. ಸುನೀಲ್, ಕಾರ್ನರ್ ಫ್ರೆಂಡ್ಸ್‍ನ ಸದಸ್ಯ ಜಲೀಲ್ ಇದ್ದರು. ಅವಿನಾಶ್ ಸ್ವಾಗತಿಸಿದರು. ದೇವಾನಂದ ವಂದಿಸಿದರು. ಬಿ.ಎಸ್. ಜಯಪ್ಪ ನಿರೂಪಿಸಿದರು.

ಇದಕ್ಕೂ ಮುನ್ನ ಬೆಳಗ್ಗೆ ಮುಕ್ತ ರಸ್ತೆ ಓಟ ಸ್ಪರ್ಧೆ ಆಯೋಜಿಸಲಾಗಿತ್ತು. ನೀರುಕೊಲ್ಲಿಯಿಂದ ಆರಂಭವಾದ ಓಟಕ್ಕೆ ಕಡಗದಾಳು ಗ್ರಾಪಂ ಸದಸ್ಯ ರಮೇಶ್ ಆಚಾರಿ ಚಾಲನೆ ನೀಡಿದರು. ತುರ್ಕರಹಟ್ಟಿವರೆಗೆ ಸಾಗಿ ಕಡಗದಾಳು ಶಾಲೆ ಬಳಿ ಕೊನೆಗೊಂಡ 5 ಕಿ.ಮೀ. ಓಟದಲ್ಲಿ ಹಾಕತ್ತೂರು ಗ್ರಾಮದ ಟಿ.ಎಲ್. ದಿಲೀಪ್(ಪ್ರ), ಬೆಟ್ಟಗೇರಿಯ ಪಿ.ಎ. ವಿಕಾಸ್(ದ್ವಿ), ಕುಶಾಲನಗರದ ಚಾಮೆರ ನಿಖಿಲ್(ತೃ) ಸ್ಥಾನ ಗಳಿಸಿದರು. ಬಳಿಕ ಗ್ರಾಮಸ್ಥರಿಗೆ ವಿವಿಧ ಕ್ರೀಡಾಕೂಟ ಜರುಗಿತು. ಶನಿವಾರ ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅತಿಥಿಗಳು ಬಹುಮಾನ ವಿತರಿಸಲಿದ್ದಾರೆ.

ಶನಿವಾರದ ಕಾರ್ಯಕ್ರಮ
ಕಲಾತಂಡಗಳ ಮೆರವಣಿಗೆ
ಸ್ಥಳ : ಕಡಗದಾಳು-ಬೋಯಿಕೇರಿ ರಸ್ತೆಯಿಂದ.
ಸಮಯ : ಸಂಜೆ 4 ಗಂಟೆಗೆ.
ಉದ್ಘಾಟನೆ : ಬಿ.ಡಿ. ನಾರಾಯಣ ರೈ, ಸಂಚಾಲಕರು, ಬೆಳ್ಳಿ ಮಹೋತ್ಸವ ಆರ್ಥಿಕ ಸಮಿತಿ.
ಅತಿಥಿಗಳು : ಟಿ.ಆರ್. ವಾಸು, ಎಂ.ಸಿ. ಸೋಮಯ್ಯ.

ಸಮಾರೋಪ ಸಮಾರಂಭ 

ಉದ್ಘಾಟನೆ : ಎಂ.ಪಿ. ಅಪ್ಪಚ್ಚು ರಂಜನ್, ಶಾಸಕ.

ಅಧ್ಯಕ್ಷತೆ : ಎಂ.ಪಿ. ತಿಮ್ಮಯ್ಯ, ಉಪಾಧ್ಯಕ್ಷ, ಕಡಗದಾಳು ಗ್ರಾಪಂ.
ಅತಿಥಿಗಳು : ಜಿಪಂ ಅಧ್ಯಕ್ಷ ಬಿ.ಎ. ಹರೀಶ್, ಶಾಸಕ ಕೆ.ಜಿ. ಬೋಪಯ್ಯ. ಎಂಎಲ್ಸಿ ಎಂ.ಪಿ. ಸುನೀಲ್ ಸುಬ್ರಹ್ಮಣಿ ಹಾಗೂ ಇತರರು.
ಸ್ಮರಣ ಸಂಚಿಕೆ ಮುಖಪುಟ ಅನಾವರಣ : ಎಂಎಲ್ಸಿ ವೀಣಾ ಅಚ್ಚಯ್ಯ.
ಸಮಾರೋಪ ಭಾಷಣ : ಟಿ.ಪಿ. ರಮೇಶ್.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *