ದಾಂಪತ್ಯ ಜೀವನದಲ್ಲಿ ಮನಸ್ಥಾಪ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣು

Posted on: February 11, 2018

WhatsApp Image 2018-02-11 at 2.47.12 PM
ಕುಶಾಲನಗರ : ದಾಂಪತ್ಯ ಜೀವನದಲ್ಲಿ ಮನಸ್ಥಾಪವುಂಟಾದ ಕಾರಣ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ.

ನಗರದ ಜನತಾ ಕಾಲೋನಿಯ ನಿವಾಸಿ ನಂಜುಂಡಸ್ವಾಮಿ (೪೦) ಎಂಬುವವರೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ವೃತ್ತಿಯಲ್ಲಿ ಟೈಲರಿಂಗ್ ಮಾಡಿ ಜೀವನ ಮಾಡುತ್ತಿದ್ದ ಈತ, ವಿವಾಹಿತನಾಗಿದ್ದು ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾನೆ.

ಕೆಲವು ದಿನಗಳ ಹಿಂದೆಯಷ್ಟೇ ಗಂಡ ಹೆಂಡತಿ ನಡುವೆ ಗೊಂದಲ ಸೃಷ್ಟಿಯಾಗಿ ಕುಶಾಲನಗರ ಪೋಲೀಸ್ ಠಾಣೆ ಮೆಟ್ಟಿಲೇರಿದ್ದು, ಪೋಲೀಸರು ಇಬ್ಬರನ್ನು ಕರೆಸಿ ಸಮಾಧಾನ ಪಡಿಸಿ ಕಳುಹಿಸಿದ್ದರು. ಮತ್ತೇ ಪುನಃ ಇಬ್ಬರ ನಡುವೆ ಮನಸ್ಥಾಪವುಂಟಾಗಿದ್ದು, ನಂಜುಂಜಸ್ವಾಮಿಯವರು ಎರಡು ದಿನಗಳ ಹಿಂದೆ ಮನೆಯಿಂದ ಹೊರಬಂದಿದ್ದರು ಎನ್ನಲಾಗಿದೆ.

ಇಂದು ಬೆಳಿಗ್ಗೆ ಮೃತ ನಂಜುಂಡಸ್ವಾಮಿಯವರ ಅಂಗಡಿ ಮಳಿಗೆಯು ಬೀಗ ಹಾಕದೇ ಇದ್ದ ಕಾರಣ ಅಕ್ಕಪಕ್ಕದಲ್ಲಿದ್ದವರು ಇವರ ಹೆಂಡತಿಗೆ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಈತನ ಹೆಂಡತಿ ಮಳಿಗೆಯ ಬಾಗಿಲನ್ನು ತೆಗೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಈ ಕುರಿತು ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಆಗಮಿಸಿದ ಪೋಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ನಂಜುಂಡಸ್ವಾಮಿಯವರ ಶವವನ್ನು ಶವಾಗಾರಕ್ಕೆ ರವಾನಿಸಿ ಶವಪರೀಕ್ಷೆಗೆ ಅನುವುಮಾಡಿಕೊಟ್ಟಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *