ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ದುಬಾರೆಯಲ್ಲಿ ಮಳೆಗಾಲದ ಮೂರು ತಿಂಗಳು ಮಾತ್ರ ರಾಫ್ಟಿಂಗ್ ಪ್ರವಾಸಿ ಅತಿರೇಕಕ್ಕೆ ಕಡಿವಾಣ ಹಾಕಲು ತಂತ್ರ

Posted on: February 19, 2018

Dubare-Elephant-Camp-(100)_slider_main (1)

ಮಡಿಕೇರಿ : “ದುಬಾರೆ” ಎನ್ನುವುದು ಯಾವುದೇ ಪರವಾನಗಿಯನ್ನು ಹೊಂದದೆ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಯಾವುದಾದರು ದಂದೆ ಮಾಡಿ ಪ್ರವಾಸಿಗರಲ್ಲಿ ಹಣ ಸುಲಿಯುವ ಒಂದು ಅಂಡರ್ ವರ್ಲ್ಡ್ ಮಾಫಿಯಾ ಆಗಿಬಿಟ್ಟೆವೆ .

ಮೊನ್ನೆ ನಡೆದಿರುವ ರಾಫ್ಟರ್ ಗಳು  ಹಾಗು ಪ್ರವಾಸಿಗರ ಮದ್ಯೆ ನಡೆದ ಹೊಡೆದಾಟದಲ್ಲಿ ಒಬ್ಬ ಪ್ರವಾಸಿಗ ಕೊಲೆಯಾಗಿರುವದು ಶಾಂತಿಪ್ರಿಯರಿರುವ ನಾಡು, ಕೊಡಗಿನ ಹಣೆಗೆ ಒಂದು ಕಪ್ಪು ಚುಕ್ಕೆ ಇಟ್ಟಂತಾಗಿದೆ . ಪೊಲೀಸರು ವಿದಿ ಇಲ್ಲದೆ ಒಂದು ಕೊಲೆ ಕೇಸನ್ನು ರಾಫ್ಟಿಂಗ್ ಉದ್ಯೋಗಿಗಳ ಮೇಲೆ ದಾಖಲಿಸುವಂತಾಯಿತು .

ಆದರೆ ನಿಜವಾಗಿ ಇಲ್ಲಿ ಕೊಲೆ ಕೇಸನ್ನು ದಾಖಲಿಸಬೇಕಾಗಿದ್ದು ರಾಫ್ಟಿಂಗ್ ಸಂಸ್ಥೆಯ ಮಾಲೀಕರ ಮೇಲೆ . ಯಾಕೆಂದರೆ ರಾಫ್ಟಿಂಗ್ ಮಾಲೀಕರು ತಿಂಗಳು ತಿಂಗಳಿಗೆ ಸರಿಯಾಗಿ ,ತಮ್ಮ ಸರಹದ್ದಿಗೆ ಬರುವ ಠಾಣೆಯ ಪೊಲೀಸರಿಗೆ ಹಾಗು ಅಧಿಕಾರಿಗಳಿಗೆ ತಮ್ಮ ಅಮೃತ ಹಸ್ತದಿಂದ ಕೊಡುವ  ಕಾಣಿಕೆಯೇ ,ಈ ರಾಫ್ಟಿಂಗ್ ಹುಡುಗರು ಕೊಲೆ ಮಾಡುವಸ್ತ್ತು ಮಟ್ಟಕೆ ಚಿಗುರುವುದಕ್ಕೆ ಸಾಧ್ಯವಾಗಿದೆ . ಎಂದು ಇಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುವ ಮಾತಾಗಿದೆ

dubare-elephant-bath-6-2

ಇತ್ತ  ದುಬಾರೆಯಲ್ಲಿ ಈ ತರ ಹೊಡೆದಾಟವಾಗುವುದು ಮೊದಲನೇ ಸಲವೇನಲ್ಲ ..ನೂರಾರು ಬರಿ ಇಂತಹ ಘಟನೆಗಳು ಸಂಭವಿಸಿ ಠಾಣೆ ಮೆಟ್ಟಲೇರಿದರು ಅದು ಪ್ರವಾಸಿಗಳು ಪೋಲೀಸರ ಮಧ್ಯಸ್ಥಿಕೆಯಲ್ಲಿ ವಿಧಿಯಿಲ್ಲದೆ ಇತ್ಯರ್ಥ ಮಾಡಿಕೊಳ್ಳಬೇಕಾಗುತ್ತದೆ .

ಈ ಜೀವನದಿ ಕಾವೇರಿಯ ದಂಡೆಯಲ್ಲಿ ನಿರ್ಮಿಸಿರುವ  ಅನಧಿಕೃತ ದಂದೆಯಾದ ರಾಫ್ಟಿಂಗ್ ,ಹೋಂ ಸ್ಟೇ ಗಳು, ಇನ್ನಿತರ ಹಣ ಗಳಿಸುವ ದಂದೆಗಳು ಕಾರ್ಯವಾಗಿ ಅದಕ್ಕೆ ಸಂಬಂಧ ಪಟ್ಟ ಇಲಾಖೆಗೆ ತಿಂಗಳಿಗೆ ಸರಿಯಾಗಿ ಬರುವ ಕಾಣಿಕೆಯ ಮೇಲೆ ಅವಲಂಬಿತವಾಗಿದೆ . ಕಾಣಿಕೆಯು ಸರಿಯಾಗಿ ತಲುಪಿದರೆ ದಂದೆಗೆ ಯಾವ ರೀತಿಯ ಪರವನಾಗಿಯೂ ಬೇಡ ಮತ್ತು ಯಾವ ರೀತಿಯ ವಿಗ್ನಗಳು ಎದುರು ಬಾರದು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಅಲ್ಲಿಯ ಸಾರ್ವಜನಿಕರ ಪ್ರಕಾರ  ಮಳೆಗಾಲದಲ್ಲಿ ಮೂರು ತಿಂಗಳು ಕಾಲ ಮಾತ್ರ ನಿಜವಾದ ಆರೋಗ್ಯಕರ ರಾಫ್ಟಿಂಗ್ ನಡೆಸಲು ಸಾಧ್ಯವೆಂದು ಅವರು ಹೇಳುತ್ತಾರೆ. ಬಾಕಿ ಸಮಯದಲ್ಲಿ ಹೊಳೆಯಲ್ಲಿ ಕಲ್ಲುಗಳು ನೀರಿನ ಮಟ್ಟ ಕುಸಿದು  ನೀರಿಗಿಂತ ಮೇಲೆ ಇರುತ್ತವೆ .ಈ ಸಂದರ್ಭಲ್ಲಿ ರಾಫ್ಟಿಂಗ್ ದೋಣಿಯು ಹೊಳೆಯಲ್ಲಿ ಸಾಗುವುದಕ್ಕೆ ಆಗುವುದಿಲ್ಲ .ಅದರಿಂದ ಅಲ್ಲಿ ಆಗುವ ಅನಾಹುತಗಳಿಗೆ ಸರಕಾರ ಅಥವಾ ಜಿಲ್ಲಾ ಆಡಳಿತವು ಮಳೆಗಾಲದ” ಮೂರು ತಿಂಗಳು” ಹೊರತುಪಡಿಸಿ ಬೇರೆ ಸಮಯಲ್ಲಿ ರಾಫ್ಟಿಂಗ್ ಅನ್ನು ತಟಸ್ಥಗೊಳಿಸುವುದು ಒಳಿತು ಎಂದು ಹೇಳುತ್ತಾರೆ .

ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ ದುಬಾರೆಗೆ ವರ್ಷಪೂರ್ತಿ ಬರುವ ಪ್ರವಾಸಿಗರಿಂದ ,ಅವರು ಹೊಳೆಯಲ್ಲಿ ಕಿರುಚಿಕೊಂಡು ಮೋಜು ಮಸ್ತಿಯಲ್ಲಿ ತೊಡಗುವುದರಿಂದ ,ಅಲ್ಲಿನ ಆನೆ ಕ್ಯಾಂಪಿನ ಒಳಗೆ ಬಂದು ತಮ್ಮ ಕರ್ತವ್ಯಕ್ಕೂ ತೊಂದರೆ ಮಾಡಿ ,ವನ್ಯ ಜೀವಿಗಳು ಅದರ, ನೀರು ಕುಡಿಯುವ ಸಮಯವಾದ ಬೆಳ್ಳಗಿನ ಹನ್ನೊಂದು ಗಂಟೆ ಹಾಗು ಸಂಜೆ ಐದೂವರೆ ಗಂಟೆಗೆ ಹೊಳೆ ದಂಡೆಗೆ ನೀರು ಕುಡಿಯುವುದಕ್ಕೆ  ಬರುವುದನ್ನೇ ಬಿಟ್ಟಿವೆ ಎನ್ನುತ್ತಾರೆ .

ಒಟ್ಟಿನಲ್ಲಿ ದುಬಾರೆಯನ್ನು ಹಾಗು ದುಬಾರೆಯಿಂದ ಗುಡ್ಡೆಹೊಸೂರಿನವರೆಗೆ ಇರುವ ರಸ್ತೆಬದಿಯ ಅನಧಿಕ್ರತ ರಾಫ್ಟಿಂಗ್ ಹಾಗು ಬೇಕಾಬಿಟ್ಟಿಯಾಗಿ ತೆರೆದಿರುವ ಹೋಟೆಲುಗಳಿಗೆ ಹಾಗು ಹೋಂ ಸ್ಟೇ ಗಳಿಗೆ ನಮ್ಮ ಜಿಲ್ಲಾಡಳಿತ ಕಡಿವಾಣ ಹಾಕಿ ಮಳೆಗಾಲದ ಮೂರು ತಿಂಗಳು ಮಾತ್ರ ನುರಿತ ತರಬೇತಿ ಹೊಂದಿದ ರಾಫ್ಟರ್ ಗಳಿಂದ ದುಬಾರೆಯಿಂದ ಇಂತಿಷ್ಟು ದೂರ ಮಾತ್ರ , ಮತ್ತು ಅದಕ್ಕೆ ತಕ್ಕುದಾದ ದರ ನಿಗದಿ ಪಡಿಸಿ, ರಾಫ್ಟಿಂಗ್ ಅನ್ನು ನಡೆಸಿದರೆ ಮಾತ್ರ ಅಲ್ಲಿನ ಜನರಿಗೆ ಕಾಡಿನ ಜೀವ ಸಂಕುಲಕ್ಕೆ ಮತ್ತು ಮುಖ್ಯವಾಗಿ ಅಲ್ಲಿ ವಾಸಿಸುವ ಆದಿವಾಸಿಗಳಿಗೆ  ,ಅರಣ್ಯ ಇಲಾಖೆಗೆ ,ಮತ್ತು ಸಾರ್ವಜನಿಕರಿಗೆ ನೆಮ್ಮದಿಯೆಂದಿರಲು ಸಾಧ್ಯ. ನಮ್ಮ ಕೊಡಗಿಗೆ ನೂತನವಾಗಿ ಆಯೋಜನೆ ಗೊಂಡಿರುವ ಜಿಲ್ಲಾದಿಕಾರಿಯೂ ಇತ್ತ ಗಮನ ಹರಿಸುವುದು ಒಳಿತು . “ದುಬಾರೆ”ಎಂಬ ದುಡ್ಡಿನ ಯಂತ್ರಕ್ಕೆ ಕಡಿವಾಣ ಹಾಕದಿದ್ದರೆ ಇನ್ನಷ್ಟು ಸಾವು ನೋವುಗಳು ಸಂಭವಿಸುವುದು ಶತಸಿದ್ಧ.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *