ದುಬಾರೆ ಪ್ರವಸಿಗನ ಕೊಲೆ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಎಸ್‍ಡಿಪಿಐ ಆಗ್ರಹ

Posted on: February 19, 2018

sdpi k

ಮಡಿಕೇರಿ : ಹೈದರಾಬಾದಿನಿಂದ ಪ್ರವಾಸಕ್ಕೆ ಬಂದ ಪ್ರವಾಸಿಗರ ಮೇಲೆ ದುಬಾರೆಯ ರ್ಯಾಫ್ಟಿಂಗ್ ಗ್ಯಾಂಗ್ ದೌರ್ಜನ್ಯ ನಡೆಸಿದ ಪರಿಣಾಮ ಪ್ರವಾಸಿಗನೋರ್ವ ಸಾವನ್ನಪ್ಪಿದ್ದು, ಕೊಲೆಗೆ ಕಾರಣವಾಗಿರುವ ಎಲ್ಲರನ್ನೂ ಬಂಧಿಸುವಂತೆ ಎಸ್‍ಡಿಪಿಐ ಜಿಲ್ಲಾ ಸಮಿತಿ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.

dubare death

ಕಳೆದ ಹಲವು ವರ್ಷಗಳಿಂದ ಇಲ್ಲಿನ ರ್ಯಾಫ್ಟಿಂಗ್ ಗ್ಯಾಂಗ್ ಪ್ರವಾಸಿಗರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತಾ ಬಂದಿದ್ದು, ಇದರ ಬಗ್ಗೆ ದೂರು ನೀಡಲು ಮುಂದಾದರೆ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ರಾಜಿ ಮಾಡುತಾ ಬಂದಿರುವುದರಿಂದ ಇದೀಗ ಪ್ರವಾಸಿಗನ ಕೊಲೆಯಾಗಿದೆ ಎಂದು ಆರೋಪಿಸಿರುವ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಮೃತನ ಕುಟುಂಬಕ್ಕೆ ಸರಕಾರ ರೂ 25 ಲಕ್ಷ ಪರಿಹಾರ ನೀಡಬೇಕು.

ಬಹಳ ದೊಡ್ಡ ಶಕ್ತಿ ರ್ಯಾಫ್ಟಿಂಗ್ ಗ್ಯಾಂಗಿಗೆ ಬೆಂಬಲ ನೀಡುತ್ತಿರುವುದರಿಂದ ಇಂತಹ ಘಟನೆಗಳು ಸಂಭವಿಸುತ್ತಿದ್ದು, ದುಬಾರೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ರ್ಯಾಫ್ಟಿಂಗ್ ದಂದೆ ನಡೆಯುತ್ತಿದೆ. ಪ್ರವಾಸಿಗರ ಸೂಕ್ತ ರಕ್ಷಣೆ ಒದಗಿಸುವ ಸಲುವಾಗಿ ದುಬಾರೆಯಲ್ಲಿ ಪೊಲೀಸರನ್ನು ನೇಮಿಸುವುದರ ಜೊತೆಗೆ ರ್ಯಾಪ್ಟಿಂಗ್ ಲೈಸನಸ್ಸನ್ನು ರದ್ದುಪಡಿಸಿ, ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಟೆಂಡರ್ ಕರೆಯಲು ಜಿಲ್ಲಾಡಳಿತ ಮುಂದಾಗಬೇಕೆಂದ ಅವರು, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳದಿದ್ದಲ್ಲಿ ತೀವೃ ಸ್ವರೂಪದ ಹೋರಾಟ ರೂಪಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *