ಪ್ರೇಮಿಗಳಿಗಾಗಿ ಇರುವ 8 ವಿಶೇಷ ದಿನಗಳು ಯಾವುದು ಗೊತ್ತಾ

Posted on: February 14, 2018

VALENTAINS DAY

ಫೆಬ್ರುವರಿ ತಿಂಗಳು ಎಲ್ಲ ಪ್ರೇಮಪಕ್ಷಿಗಳಿಗೂ ನೆಚ್ಚಿನ ತಿಂಗಳಾಗಿದೆ. ಅಲ್ಲದೆ ಫೆಬ್ರುವರಿ  ಪೇಮಿಗಳ ತಿಂಗಳಾಗಿದೆ. ಪ್ರೇಮಿಗಳು ಈ ತಿಂಗಳನ್ನು ಪರಮ ಪವಿತ್ರ ಮಾಸವೆಂದು ಭಾವಿಸುತ್ತಾರೆ. ಯಾಕೆ ಅಂತ ಬಿಡಿಸಿ ಹೇಳುವ ಅವಶ್ಯಕತೆಯಿಲ್ಲ. ಫೆಬ್ರುವರಿ ತಿಂಗಳಲ್ಲಿ ಪ್ರೇಮಿಗಳಿಗಾಗಿ ವ್ಯಾಲೇಂಟೆನ್ಸ ದಿನ ಅಥವಾ ಪ್ರೇಮಿಗಳ ದಿನ ಎಂಬ ಹಬ್ಬಾನೇ ಇದೆ. ಪ್ರೇಮಿಗಳ ದಿನದ ಜೊತೆ ಪ್ರೇಮಿಗಳ ವಾರವೂ ಇದೆ. ಪ್ರೇಮಿಗಳಿಗಾಗಿ ಫೆಬ್ರುವರಿ ತಿಂಗಳಿನ ಒಂದು ವಾರ ಅಂದರೆ 7 ದಿನಗಳು ಮೀಸಲಾಗಿವೆ. ಪ್ರೇಮಿಗಳು ಪ್ರೇಮಿಗಳ ವಾರ ಮತ್ತು ಪ್ರೇಮಿಗಳ ದಿನಕ್ಕಾಗಿ ವರ್ಷವೆಲ್ಲಾ ಕಾತುರದಿಂದ ಕಾಯುತ್ತಾರೆ.

ಎಲ್ಲ ಪ್ರೇಮಿಗಳಿಗೂ ವ್ಯಾಲೇಂಟೆನ್ಸ ಡೇ ತುಂಬಾ ವಿಶೇಷವಾಗಿರುತ್ತೆ. ಈ ದಿನವನ್ನು ಅವರು ತಮಗಿಷ್ಟ ಬಂದಂತೆ ಬೇರೆ ಬೇರೆ ರೀತಿಯಲ್ಲಿ ವಿಭಿನ್ನವಾಗಿ ಆಚರಿಸುತ್ತಾರೆ. ಪ್ರೇಮಿಗಳ ದಿನವನ್ನು ಆಚರಿಸಲು ಎಲ್ಲರೂ ವಿರೋಧಿಸಿದರೂ, ಪ್ರೇಮಿಗಳು ಅದನ್ನು ತಪ್ಪದೆ ಆಚರಿಸುತ್ತಾರೆ. ಪ್ರೇಮಿಗಳ ದಿನಕ್ಕೆ ಯಾವುದೇ ರೀತಿ ರಿವಾಜು ನಿಯಮಗಳೇನು ಇಲ್ಲ. ಆದರೆ ನನ್ನ ಪ್ರಕಾರ ಯಾರೂ ಸಹ ಪ್ರೇಮಿಗಳ ವಾರವನ್ನು ಶಿಸ್ತಿನಿಂದ ಸರಿಯಾಗಿ ಆಚರಿಸುವುದಿಲ್ಲ.

ಪ್ರೇಮಿಗಳಿಗಾಗಿ ಇರುವ 8 ವಿಶೇಷ ದಿನಗಳು ಇಂತಿವೆ :

Rose-Day

೧) ಗುಲಾಬಿ ದಿನ  (7th Feb – Rose Day) :  ಪ್ರೇಮಿಗಳ ವಾರದ ಮೊದಲ ದಿನವೇ ಗುಲಾಬಿ ದಿನ. ಈ ದಿನ ಹೊಸ ಪ್ರೇಮಿಗಳು ಮೊದಲ ಸಲ ತಮ್ಮ ಪ್ರೀತಿಪಾತ್ರರಿಗೆ ಪ್ರೀತಿಯಿಂದ ಗುಲಾಬಿ ಹೂವನ್ನು ಅರ್ಪಿಸುತ್ತಾರೆ. ಆದರೆ ವಾಸ್ತವವಾಗಿ ಯಾವೊಬ್ಬ ಪ್ರೇಮಿಯೂ ತನ್ನ ಪ್ರೇಯಸಿಗೆ ಗುಲಾಬಿ ಹೂವನ್ನು ಕೊಡಲು ಫೆಬ್ರುವರಿ 7ರ ತನಕ ಕಾಯುವುದಿಲ್ಲ.

 Propose-Day

೨) ಪ್ರೇಮ ನಿವೇದನೆ ದಿನ (8th Feb -Propose Day) : ಪ್ರೇಮಿಗಳ ವಾರದ ಎರಡನೆಯ ದಿನವೇ ಪ್ರೇಮ ನಿವೇದನೆಯ ದಿನ. ಈ ದಿನ ಪ್ರೇಮಿಗಳು ತಮ್ಮ ಪ್ರೀತಿಪಾತ್ರರ ಮುಂದೆ ತಮ್ಮ ಪವಿತ್ರವಾದ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ತಮ್ಮನ್ನು ಪ್ರೀತಿಸಲು ನೇರ ಆಮಂತ್ರಣವನ್ನು ನೀಡುತ್ತಾರೆ.

 chocolate-day

೩) ಚಾಕಲೇಟ ದಿನ (9th Feb – Chocolate Day) : ಪ್ರೇಮಿಗಳ ವಾರದ ಮೂರನೇ ದಿನವೇ ಚಾಕಲೇಟ ದಿನ. ಈ ದಿನ ಪ್ರೇಮಿಗಳು ತಮ್ಮ ಪ್ರೀತಿಪಾತ್ರರಿಗೆ ಚಾಕಲೇಟನ್ನು ತಿನ್ನಿಸಿ ಹಳೆಯ ಮುನಿಸುಗಳನ್ನೆಲ್ಲ ಮರೆತು ತಮ್ಮ ಜೀವನದಲ್ಲಿ ಮತ್ತೊಂದು ಹೊಸ ಹೆಜ್ಜೆಯನ್ನು ಇಡುತ್ತಾರೆ.

Happy-Teddy-Day

೪) ಟೆಡ್ಡಿಬೇರ್ ದಿನ (10th Feb – Teddy Day) : ಪ್ರೇಮಿಗಳ ವಾರದ ನಾಲ್ಕನೆಯ ವಿಶೇಷ ದಿನವೇ ಟೆಡ್ಡಿಬೇರ್ ದಿನ. ಈ ದಿನ ಪ್ರೇಮಿಗಳು ತಮ್ಮ ಪ್ರೀತಿಪಾತ್ರರಿಗೆ ಒಂದು ಮುದ್ದಾದ ಗೊಂಬೆಯನ್ನು ಉಡುಗೊರೆಯಾಗಿ ಕೊಡುತ್ತಾರೆ. ಈ ಗೊಂಬೆಯಲ್ಲಿ ಪ್ರೇಮಿಗಳ ಉಸಿರಿರುತ್ತದೆ. ಪ್ರೇಮಿಗಳು ದೂರವಿದ್ದಾಗ ಅವರ ನೆನಪು ಕಾಡದಿರಲಿ ಎಂಬ ಕಾರಣಕ್ಕೆ ಮತ್ತು ತಬ್ಬಿಕೊಂಡು ಒಂಟಿತನವನ್ನು ಕಳೆದುಕೊಳ್ಳುವುದಕ್ಕಾಗಿ ಒಂದು ಗೊಂಬೆಯನ್ನು ಗಿಫ್ಟಾಗಿ ಕೊಡುತ್ತಾರೆ.

promise-day

೫) ಪ್ರೇಮ ಪ್ರಮಾಣ ದಿನ (11th Feb – Promise Day) : ಪ್ರೇಮಿಗಳ ವಾರದ ಐದನೆಯ ವಿಶೇಷ ದಿನವೇ ಪ್ರೇಮಪ್ರಮಾಣ ದಿನ. ಈ ದಿನ ಪ್ರೇಮಿಗಳು ತಮ್ಮ ಪ್ರೀತಿಪಾತ್ರರಿಗೆ ” ನಾನಿನ್ನ ನಿಜವಾಗಿಯೂ ಪ್ರೀತಿಸುತ್ತೇನೆ, ಯಾವುದೇ ಕಾರಣಕ್ಕೂ ಮೋಸ ಮಾಡುವುದಿಲ್ಲ, ಪ್ರತಿ ನೋವು ನಲಿವಿನಲ್ಲಿ ಸದಾ ನಿನ್ನ ಜೊತೆಗಿರುತ್ತೇನೆ ” ಎಂಬಿತ್ಯಾದಿ ಆಣೆ ಪ್ರಮಾಣಗಳನ್ನು ಮಾಡುತ್ತಾರೆ. ಆದರೆ ಮುಂದಿನ ವ್ಯಾಲೇಂಟನ್ಸ ಡೇ ಬರುವ ಮುಂಚೆಯೇ ಎಲ್ಲ ಭಾಷೆಗಳನ್ನು ಮರೆತು ಬಿಡುತ್ತಾರೆ.

hug day೬) ಅಪ್ಪುಗೆಯ ದಿನ (12th Feb – Hug Day) : ಪ್ರೇಮಿಗಳ ವಾರದ ಆರನೆಯ ವಿಶೇಷ ದಿನವೇ ಅಪ್ಪುಗೆಯ ದಿನ. ಈ ದಿನ ಪ್ರೇಮಿಗಳು ತಮ್ಮ ಪ್ರೀತಿಪಾತ್ರರನ್ನು ಅಕ್ಕರೆಯಿಂದ  ಅಪ್ಪಿಕೊಂಡು, ನೋವುಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಅಲ್ಲದೆ ಆ ನೋವುಗಳಿಗೆ ಪರಿಹಾರ ಹುಡುಕುವ ಪ್ರಯತ್ನವನ್ನು ಮಾಡುತ್ತಾರೆ. ಶೋಕಿಗಾಗಿ ಪ್ರೀತಿಸುವವರು ಕೆಟ್ಟ ಉದ್ದೇಶದಿಂದ ಅಪ್ಪಿಕೊಂಡು ಮಾಡಬಾರದನ್ನು ಮಾಡಿ ಪವಿತ್ರ ಪ್ರೀತಿಗೆ ಕಳಂಕ ತರುತ್ತಾರೆ.

KISS DAY

೭) ಚುಂಬನ ದಿನ (13th Feb – Kiss Day): ಪ್ರೇಮಿಗಳ ವಾರದ ಏಳನೆಯ ದಿನವೇ ಚುಂಬನದ ದಿನ. ಈ ದಿನ ಪ್ರೇಮಿಗಳು ತಮ್ಮ ಪ್ರೀತಿಪಾತ್ರರಿಗೆ ಪ್ರೀತಿಯಿಂದ ಚುಂಬಿಸುತ್ತಾರೆ. ಈ ಪ್ರೀತಿಯ ಚುಂಬನದಿಂದ ತಮ್ಮನ್ನು ತಾವು ಪರಸ್ಪರ ಅರ್ಥಮಾಡಿಕೊಂಡು ಮತ್ತಷ್ಟು  ಹತ್ತಿರವಾಗುತ್ತಾರೆ. ಆದರೆ ಪ್ರೇಮಿಗಳೆಂದು ಹೇಳಿಕೊಂಡು ಪಾರ್ಕ ಸುತ್ತುವ ಪೋಲಿಗಳು ಈ ಪವಿತ್ರ ದಿನಕ್ಕಾಗಿ ವರ್ಷಪೂರ್ತಿ ಕಾಯುವುದಿಲ್ಲ. ಸಮಯ ಮತ್ತು ಅವಕಾಶ ಸಿಕ್ಕಾಗಲೆಲ್ಲ ಸಿಕ್ಕಸಿಕ್ಕ ಸ್ಥಳದಲ್ಲಿ ಚುಂಬಿಸಿ ಎಲ್ಲರ ಕೋಪಕ್ಕೆ ಗುರಿಯಾಗುತ್ತಾರೆ. ಪ್ರೇಮದ ಸಂಕೇತವಾದ ಮುತ್ತು ಇಂಥವರಿಂದ ಕಾಮದ ಸೂತ್ರವಾಗುತ್ತದೆ.

couple-valentines೮) ಪ್ರೇಮಿಗಳ ದಿನ (14th Feb – Valentine’s day or Lovers Day) : ಪ್ರೇಮಿಗಳ ವಾರದ ಕೊನೆಯ ದಿನವೇ ಪ್ರೇಮಿಗಳ ದಿನ. ಈ ದಿನ ಎಲ್ಲ ಪ್ರೇಮಿಗಳಿಗೆ ಅತೀ ಮುಖ್ಯವಾಗಿರುತ್ತದೆ. ಪ್ರೇಮಿಗಳು ಈ ದಿನವನ್ನು ಹಬ್ಬದಂತೆ ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ಕೆಲವು ಹುಚ್ಚು ಪ್ರೇಮಿಗಳು ಹದ್ದುಮೀರಿ ವರ್ತಿಸುವುದಲ್ಲದೆ ಮಾಡಬಾರದ ಅನಾಚಾರಗಳನ್ನು ಮಾಡಿ ಪವಿತ್ರವಾದ ಪ್ರೇಮಕ್ಕೆ ಹಾಗೂ ಪ್ರೇಮಿಗಳ ದಿನಕ್ಕೆ ಅಪಮಾನ ಮಾಡುತ್ತಾರೆ.

lovers-day-fun1
ಬಯಸಿದವರನ್ನು ಬಾಳಸಂಗಾತಿಯಾಗಿ ಪಡೆಯಲಾಗದೆ ಸೋತವರು, ಅನುಕೂಲಕ್ಕೆ ತಕ್ಕಂತೆ ಮಾಡುವ ಮೋಸದ ಪ್ರೀತಿಯಲ್ಲಿ ಬಿದ್ದು ನೊಂದವರು, ಪ್ರೀತಿಯ ಪ್ರಾಮುಖ್ಯತೆಯನ್ನು ಅರಿಯದವರು ಮಾತ್ರ ಚಿಲ್ಲರೆ ಕಾರಣಗಳನ್ನು ಮುಂದಿಟ್ಟುಕೊಂಡು  ಪ್ರೇಮಿಗಳನ್ನು ಮತ್ತು ಪ್ರೇಮಿಗಳ ದಿನವನ್ನು ದ್ವೇಷಿಸುತ್ತಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *