ಬ್ರೇಕಿಂಗ್ ನ್ಯೂಸ್
ಕ್ಷಯರೋಗದ ಬಗ್ಗೆ ಪ್ರತಿಯೊಬ್ಬರಿಗೂ ಮಾಹಿತಿ ಇರಲಿ ಕಾವೇರಮ್ಮ ಸೋಮಣ್ಣ , ಜನರಲ್ ತಿಮ್ಮಯ್ಯ ಹುಟ್ಟುಹಬ್ಬ ಅಚ್ಚುಕಟ್ಟಾಗಿ ಆಯೋಜಿಸಲು ಜಿಲ್ಲಾಧಿಕಾರಿ ಸೂಚನೆ , ಬೇಲೂರು ಶಾಸಕ ರುದ್ರೇಶಗೌಡ ನಿಧನ , ಮರೀಚಿಕೆಯಾದ ಕೊಟ್ಟಿಗೆ ಹಣ ಗ್ರಾ.ಪಂ ವಿರುದ್ಧ ಜಿ.ಪಂ ಸಿಇಒ ಗೆ ದಸಂಸ ದೂರು , 1 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ , ಕೊಡಗಿನ ಶಾಸಕರು ಜಿಲ್ಲೆಯನ್ನು ಅಭಿವೃದ್ಧಿಪಡಿಸಿದ್ದಲ್ಲಿ ಶಾಸಕರಿಗೆ ಟಿಕೆಟ್ ನೀಡಲು ಬಿಜೆಪಿಯ ವಿಳಂಭ ಯಾಕೆ ಸಂಕೇತ್ ಪೂವಯ್ಯ , ಮುದ್ರಕರು ಹಾಗೂ ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ಸಭೆ , ತಮಿಳು ಅತಿ ಹಿರಿಯ ಭಾಷೆ ದ್ರಾವಿಡ ಭಾಷಾ ಕುಟುಂಬಕ್ಕಿದೆ 4500 ವರ್ಷಗಳ ಇತಿಹಾಸ , ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಧಿಕಾರಿ ಸೂಚನೆ , ಅಪರಿಚಿತ ಯುವತಿಯ ಮೃತದೇಹ ಪತ್ತೆ ಕೊಲೆ ಶಂಕೆ ,

ಫೆ. 23 ರಿಂದ ತಕ್ಷಣ ಪಡಿತರ ಚೀಟಿ ವಿತರಣಾ ಕಾರ್ಯಕ್ರಮ

Posted on: February 23, 2018

R card
ಮಡಿಕೇರಿ : ಪಡಿತರ ಚೀಟಿಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ್ದು ಪಡಿತರ ಚೀಟಿ ಪಡೆಯಲು ವಿಳಂಬವಾಗುತ್ತಿರುವುದನ್ನು ಗಮನಿಸಿ ತ್ವರಿತವಾಗಿ ಮತ್ತು ಸ್ಥಳದಲ್ಲಿಯೇ ಪಡಿತರ ಚೀಟಿ ನೀಡುವ ಉದ್ದೇಶದಿಂದ ತಕ್ಷಣ ಪಡಿತರ ಚೀಟಿ ವಿತರಣಾ ಕಾರ್ಯಕ್ರಮವನ್ನು ಫೆಬ್ರವರಿ 23 ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರಾದ ಪುಟ್ಟಸ್ವಾಮಿ ಅವರು ತಿಳಿಸಿದ್ದಾರೆ.

ಹೊಸ ಪಡಿತರ ಚೀಟಿ ಸ್ವೀಕೃತಿ, ಕುಟುಂಬ ಆದಾಯ ಪ್ರಮಾಣ ಪತ್ರ ಮತ್ತು ಕುಟುಂಬದ ಎಲ್ಲಾ ಸದಸ್ಯರ ಆಧಾರ್ ದಾಖಲೆಗಳೊಂದಿಗೆ ಗ್ರಾಮ ಪಂಚಾಯಿತಿಗೆ ತೆರಳಿ ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ ಪಡಿತರ ಚೀಟಿ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.

ಗ್ರಾ.ಪಂ.ಗೆ ಅರ್ಜಿದಾರರ ಕುಟುಂಬದ ಯಾರಾದರೊಬ್ಬ ವಯಸ್ಕ ಸದಸ್ಯರು ಹಾಜರಾಗಿ ಬೆರಳಚ್ಚು ನೀಡಿ ಹೊಸ ಪಡಿತರ ಚೀಟಿ ಪಡೆಯಲು ಅವಕಾಶವಿರುತ್ತದೆ.
ತಕ್ಷಣ ಹೊಸ ಪಡಿತರ ಚೀಟಿ ನೀಡುವ ಕಾರ್ಯಕ್ರಮದಲ್ಲಿ ಈಗಾಗಲೇ ಹೊಸ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿರುವವರಿಗೆ ಮಾತ್ರ ಸ್ಥಳದಲ್ಲಿ ಹೊಸ ಪಡಿತರ ಚೀಟಿ ನೀಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಹೊಸ ಅರ್ಜಿ ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಆದರೆ ಇದುವರೆಗೆ ಅರ್ಜಿ ಸಲ್ಲಿಸದಿರುವವರು ಗ್ರಾ. ಪಂ., ಅಟಲ್‍ಜಿ ಜನ ಸ್ನೇಹಿ ಕೇಂದ್ರ ಅಥವಾ ಫೋಟೀ ಸೇವಾ ಕೇಂದ್ರಗಳಲ್ಲಿ ಆನ್‍ಲೈನ್ ಅರ್ಜಿ ಸಲ್ಲಿಸಿ ಸ್ವೀಕೃತಿ ಕುಟುಂಬ ಆದಾಯ ಪ್ರಮಾಣ ಪತ್ರ ಮತ್ತು ಕುಟುಂಬದ ಎಲ್ಲಾ ಸದಸ್ಯರ ಆದಾರ್ ದಾಖಲೆಗಳೊಂದಿಗೆ ಆಹಾರ ನಿರೀಕ್ಷಕರನ್ನು ಭೇಟಿ ಮಾಡಿ ಪಡಿತರ ಚೀಟಿ ಪಡೆಯಬಹುದು.

ತಕ್ಷಣ ಪಡಿತರ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ವಿತರಿಸುವ ಬಹುವರ್ಣದ ಪಡಿತರ ಚೀಟಿಗೆ ಅರ್ಜಿದಾರರು ಯಾವುದೇ ಹಣ, ಶುಲ್ಕ ನೀಡಬೇಕಾಗಿಲ್ಲ. ಶಾಶ್ವತ ಪಡಿತರ ಚೀಟಿಗಳನ್ನು ಸ್ಪೀಡ್ ಪೋಸ್ಟ್ ಅಂಚೆ ಮೂಲಕ ಅರ್ಜಿದಾರರ ಮನೆಗೆ ರವಾನಿಸಲಾಗುತ್ತದೆ.

ಸಾರ್ವಜನಿಕರು ತಕ್ಷಣ ಪಡಿತರ ಚೀಟಿ ವಿತರಣಾ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಲು ಮಡಿಕೇರಿ ತಾಲ್ಲೂಕಿನ ಗ್ರಾಮಾಂತರ ಆಹಾರನಿರೀಕ್ಷಕರಾದ ಎಸ್.ಸದಾನಂದ 9902756512, ನಗರ ಪ್ರದೇಶದ ಆಹಾರ ನಿರೀಕ್ಷಕರಾದ ಎಚ್.ವಿ.ಪದ್ಮ 9480238580, ಸೋಮವಾರಪೇಟೆ ತಾಲ್ಲೂಕಿನ ಆಹಾರ ನಿರೀಕ್ಷಕರಾದ ಡಿ.ರಾಜಣ್ಣ 7026364325 ಹಾಗೂ ವಿರಾಜಪೇಟೆ ತಾಲೂಕಿನ ಆಹಾರನಿರೀಕ್ಷಕರಾದ ಚಂದ್ರ ನಾಯಕ 7349615953 ಸಂಪರ್ಕಿಸಬುದು.

ಸಾರ್ವಜನಿಕರು ಆಹಾರ ನಿರೀಕ್ಷಕರು ನಿಗಧಿ ಪಡಿಸಿರುವ ದಿನಾಂಕದಂದು ಗ್ರಾಮ ಪಂಚಾಯಿತಿಗೆ ತೆರಳಿ ಆಹಾರ ನಿರೀಕ್ಷಕರ ಮೂಲಕ ಹೊಸ ಪಡಿತರ ಚೀಟಿ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *