ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಭಾರತ 19ರ ಕೆಳಹರೆಯದ ವಿಶ್ವ ಚಾಂಪಿಯನ್

Posted on: February 3, 2018

under 19.1

ಬೇ ಓವಲ್ : ಮನ್ಜೋತ್ ಕಲ್ರಾ ಭರ್ಜರಿ ಶತಕ ಹಾಗೂ ಬೌಲರ್ ಗಳ ಸಂಘಟಿತ ಪ್ರಯತ್ನದಿಂದ ಭಾರತ 19ರ ಕೆಳಹರೆಯದ ವಿಶ್ವಕಪ್ ನ ಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು ಬಗ್ಗುಬಡಿದು, ನಾಲ್ಕನೇ ಸಲ ಟ್ರೋಫಿ ತನ್ನದಾಗಿಸಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ, ಇರಶಾನ್ ಪೊರೆಲ್, ಶಿವ ಸಿಂಗ್, ಕಮಲೇಶ್ ನಾಗರ್ಕೊಟಿ ಮತ್ತು ಅಂಕುಲ್ ರಾಯ್ ದಾಳಿಗೆ ತತ್ತರಗೊಂಡು 47.2 ಓವರ್ ಗಳಲ್ಲಿ 216 ರನ್ ಗಳಿಗೆ ಆಲೌಟ್ ಆಯಿತು.

ಇದಕ್ಕೆ ಉತ್ತರಿಸಿದ ಭಾರತಕ್ಕೆ ಮನ್ಜೋತ್ ಕಲ್ರಾ 102 ಎಸೆತಗಳಲ್ಲಿ 101 ರನ್ ಬಾರಿಸಿ ತಂಡವನ್ನು ಗೆಲುವಿನ ಮೆಟ್ಟಿಲೇರಿಸಿದರು. ಕೇವಲ ಎರಡು ವಿಕೆಟ್ ಕಳಕೊಂಡ ಭಾರತ 11.1 ಓವರ್ ಬಾಕಿ ಇರುವಂತೆ ಗೆಲುವನ್ನು ತನ್ನದಾಗಿಸಿಕೊಂಡಿತು.

under 19

ಕಪ್ತಾನ ಪೃಥ್ವಿ ಶಾ 19ರ ಕೆಳಹರೆಯದ ವಿಶ್ವಕಪ್ ಗೆದ್ದ ಮೊಹಮ್ಮದ್ ಕೈಫ್(2002), ವಿರಾಟ್ ಕೊಹ್ಲಿ(2008), ಉನ್ಮುಕ್ತ್ ಚಾಂದ್(2012) ಸಾಲಿಗೆ ಸೇರಿದರು.

217 ರನ್ ಗಳ ಗೆಲುವಿನ ಗುರಿಯನ್ನು ಬೆನ್ನಟ್ಟುತ್ತಿದ್ದ ಭಾರತಕ್ಕೆ ಶಾ ಮತ್ತು ಕಲ್ರಾ ಭದ್ರ ಅಡಿಪಾಯ ಹಾಕಿಕೊಟ್ಟರು. ಮಳೆಯಿಂದಾಗಿ ಪಂದ್ಯಕ್ಕೆ ಸ್ವಲ್ಪ ಅಡಚಣೆಯಾದರೂ ವಿರಾಮದ ಬಳಿಕ ಬಂದ ಭಾರತದ ಬ್ಯಾಟ್ಸ್ ಮೆನ್ ಗಳು ಆಸ್ಟ್ರೇಲಿಯಾ ಬೌಲರ್ ಗಳನ್ನು ಮೈದಾನದ ಮೂಲೆಮೂಲೆಗೂ ಅಟ್ಟಿದರು.

12ನೇ ಓವರ್ ನಲ್ಲಿ ಶಾ 71 ರನ್ ಮಾಡಿ ನಿರ್ಗಮಿಸಿದರು. ಟೂರ್ನಿಯಲ್ಲಿ ಗರಿಷ್ಠ ರನ್ ಮಾಡಿರುವ ಶುಭ್ಮನ್ ಗಿಲ್ ಮತ್ತು ಕಲ್ರಾ ಜೋಡಿ ಎರಡನೇ ವಿಕೆಟಿಗೆ 60 ರನ್ ಪೇರಿಸಿದರು. ಗಿಲ್ ಕೆಲವೊಂದು ಆಕ್ರಮಣಕಾರಿ ಹೊಡೆತಗಳ ಮೂಲಕ ಗಮನಸೆಳೆದರು.

ಗಿಲ್ ನಿರ್ಗಮನದ ಬಳಿಕ ಪರಮ್ ಉಪ್ಪಲ್ 30 ಎಸೆತಗಳಲ್ಲಿ 30 ರನ್ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *