ಮಾರಕಾಸ್ತ್ರಗಳಿಂದ ವ್ಯಕ್ತಿಯೋರ್ವನ ಮರ್ಮಾಂಗವನ್ನು ಕತ್ತರಿಸಿ ಬರ್ಬರ ಹತ್ಯೆ

Posted on: February 9, 2018

hunsur-murderವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆಗೈದು ಪರಾರಿಯಾಗಿರುವ ಘಟನೆ ಹುಣಸೂರು ಪಟ್ಟಣದಲ್ಲಿ ನಡೆದಿದೆ.

ಹುಣಸೂರಿನ ರಂಗನಾಥ ಬಡಾವಣೆ ನಿವಾಸಿ ದಿವಂಗತ ಲಕ್ಷ್ಮಯ್ಯರ ಪುತ್ರ ಮಹೇಶ್ ಅಲಿಯಾಸ್ ಬೆಳ್ಳುಳ್ಳಿ ಮಹೇಶ್(45) ದುಷ್ಕರ್ಮಿಗಳಿಂದ ಹತ್ಯೆಗೀಡಾದ ದುರ್ದೈವಿ.

ಈತ ಗುರುವಾರ ಮಧ್ಯರಾತ್ರಿ ಮನೆಗೆ ತೆರಳುತ್ತಿದ್ದಾಗ ಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮಹೇಶ್ ಗೆ ಈ ಹಿಂದೆ ಲಕ್ಷ್ಮಿ ಎಂಬಾಕೆಯೊಂದಿಗೆ ಮದುವೆಯಾಗಿತ್ತಾದರೂ ಬಳಿಕ ವಿಚ್ಚೇದನೆಯಾಗಿತ್ತು. ಈ ವೇಳೆ ಹೆಂಡತಿಗೆ ನ್ಯಾಯಾಲಯದ ಆದೇಶದಂತೆ ಪರಿಹಾರವನ್ನು ನೀಡಬೇಕಾಗಿತ್ತು. ಆದರೆ ಅದನ್ನು ನೀಡದೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದರಿಂದ ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದರು. ಹೀಗಾಗಿ ಕಳೆದ ಐದು ತಿಂಗಳಿನಿಂದ ಜೈಲಿನಲ್ಲಿದ್ದ. ಈ ಮಧ್ಯೆ ಪ್ರೇಯಸಿ ರತ್ನ ಎಂಬಾಕೆ ಆತನನ್ನು ವಕೀಲರ ಮೂಲಕ ಜಾಮೀನಿಗೆ ಅರ್ಜಿ ಸಲ್ಲಿಸಿ ಜೈಲಿನಿಂದ ಬಿಡುಗಡೆ ಮಾಡಿಸಿಕೊಂಡು ಬಂದಿದ್ದಳು ಎನ್ನಲಾಗಿದೆ.

ಜೈಲಿನಿಂದ ಬಂದು ಇನ್ನು ಒಂದು ವಾರವಷ್ಟೆ ಕಳೆದಿದ್ದು, ತಡರಾತ್ರಿ ಮನೆಗೆ ತೆರಳುವ ವೇಳೆ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಆತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರಲ್ಲದೆ, ಮರ್ಮಾಂಗವನ್ನೇ ಕತ್ತರಿಸಿ ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹೇಶ್ ನನ್ನು ನೋಡಿದ ಜನ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ನಗರ ಠಾಣೆ ಪೊಲೀಸರು ಆಗಮಿಸಿದ್ದು, ಮಹಜರು ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *