ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಮೋದಿ ವಿರುದ್ಧ ಪಕೋಡ ತಯಾರಿಸಿ ಪ್ರತಿಭಟನೆ

Posted on: February 19, 2018

Sdpr18 Pakoda (1)
ಸಿದ್ದಾಪುರ : ನಿರುದ್ಯೋಗಕ್ಕೆ ಸಂಬಂಧಿಸಿದಂತೆ ಪ್ರದಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಯನ್ನು ಖಂಡಿಸಿ ಯುವ ಕಾಂಗ್ರೆಸ್ ಹಾಗೂ ಸಿದ್ದಾಪುರ ವಲಯ ಕಾಂಗ್ರೆಸ್ ವತಿಯಿಂದ ಸಿದ್ದಾಪುರ ಬಸ್ ನಿಲ್ದಾಣದ ಸಮೀಪ ಪಕೋಡ ತಯಾರಿಸಿ ಮಾರಾಟ ಮಾಡುವುದರ ಮೂಲಕ ಪ್ರತಿಭಟಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ ಸಲಾಂ ಮಾತನಾಡಿ, ದೇಶದ ಯುವ ಜನತೆಗೆ ಉದ್ಯೋಗ ಸಷ್ಟಿ ಮಾಡುತ್ತೇವೆ ಎಂದು ಮೋದಿ ಸುಳ್ಳು ಭರವಸೆ ನೀಡಿ, ಇದೀಗ ಪಕೋಡ ಮಾರಾಟ ಮಾಡಲು ಸೂಚಿಸಿರುವ ಹೇಳಿಕೆಯನ್ನು ಖಂಡಿಸಿದರು. ದೇಶದ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಠಿ ಮಾಡ ಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ಪಿ.ಸಿ ಹಸೈನಾರ್ ಹಾಜಿ ಮಾತನಾಡಿ, ಕೇವಲ ಮಾತಿನಿಂದ ಅರಮನೆಯನ್ನು ಕಟ್ಟುತ್ತಿರುವ ಮೋದಿ ಸುಳ್ಳು ಹೇಳುವುದು ಮತ್ತು ಮೋಸ ಮಾಡುವುದನ್ನೇ ಕಾಯಕವಾಗಿಸಿ ಕೊಂಡಿದ್ದಾರೆ ಎಂದು ದೂರಿದರು.

Sdpr18 Pakoda (2)ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ ಮಾತನಾಡಿ, ದೇಶದಲ್ಲಿ ಅಪಾರ ಪ್ರಮಾಣದ ವಿದ್ಯಾವಂತರಿಗೆ ಉದ್ಯೋಗವಿಲ್ಲದೆ, ಸಂಕಷ್ಟದಲ್ಲಿದ್ದಾರೆ. ಪಕೋಡ ಮಾರಾಟ ಮಾಡಲು ಮೋದಿಯವರ ಸಲಹೆಯ ಅಗತ್ಯವಿಲ್ಲ. ಮೇಕ್ ಇನ್ ಇಂಡಿಯಾ ಯೋಜನೆಯ ಮೂಲಕ ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಚುನಾವಣೆಯ ಸಂದರ್ಭ ಭರವಸೆ ನೀಡಿದ್ದು, ಇದೀಗ ಸುಳ್ಳು ಭರವಸೆ ಬಯಲಾಗಿದೆ ಎಂದರು.

ಯುವ ಕಾಂಗ್ರೆಸ್ ವಿರಾಜಪೇಟೆ ವಿಧಾನಸಭಾ ಅಧ್ಯಕ್ಷ ಜಮ್ಮಡ ಸೋಮಣ್ಣ ಮಾತನಾಡಿ, ಬಿಜೆಪಿ ಪಕ್ಷದಲ್ಲಿ ಮೋದಿ ಭಕ್ತರಿದ್ದು, ಮಗು ತಂದೆಯ ಹೊಟ್ಟೆಯಿಂದ ಜನ್ಮ ತಾಳಿದೆ ಎಂದು ಮೋದಿ ಹೇಳಿದರೆ ಅದನ್ನು ಸತ್ಯವೆಂದು ನಂಬುವ ಅಂಧ ಭಕ್ತ ಸಮೂಹವಾಗಿದೆ ಎಂದರು.

ಗ್ರಾ.ಪಂ ಅಧ್ಯಕ್ಷ ಮಣಿ ಮಾತನಾಡಿ, ನರೇಂದ್ರ ಮೋದಿ ವಿಧ್ವದ ಅತೀ ದೊಡ್ಡ ಸುಳ್ಳುಗಾರ. ನಿರುದ್ಯೋಗಿ ಯುವಕರಿಗೆ ಪಕೋಡ ಮಾರಲು ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ. ಈಗಾಗಲೇ ಲಕ್ಷಾಂತರ ಮಂದಿ ಪಕೋಡ, ಪಾನಿಪೂರಿ ಸೇರಿದಂತೆ ಸ್ವ ಉದೋಗ ಮಾಡುತ್ತಿದ್ದು, ಮೋದಿಯವರ ಸಲಹೆಯ ಅಗತ್ಯವಿಲ್ಲ. ಆದರೇ ನಿರುದ್ಯೋಗಿ ಯುವ ಜನತೆಗೆ ಉದ್ಯೋಗ ನೀಡಲು ಒತ್ತಾಯಿಸಿದರು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉಸ್ಮಾನ್ ಹಾಜಿ, ಸಿದ್ದಾಪುರ ವಲಯ ಕಾಂಗ್ರೆಸ್ ಅಧ್ಯಕ್ಷ ಎಂ.ಎಚ್ ಮೂಸ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಹನೀಫ, ಕಾರ್ಯದರ್ಶಿ ಜಾನ್ಸನ್, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸರ್ಪುದ್ದೀನ್, ಲಾಲು, ಮುನೀರ್, ಮುಖಂಡರಾದ ಬಷೀರ್, ಯೂಸುಫ್, ಮಹಮ್ಮದ್ ಆಲಿ, ಗ್ರಾ.ಪಂ ಸದಸ್ಯರಾದ ಶುಕೂರ್, ಜಾಫರ್, ಮಂಜುನಾಥ್, ಪೂವಮ್ಮ, ದೇವಜಾನು, ಪ್ರೇಮ, ಕರ್ಪಯ್ಯ, ಸುಶೀಲ, ಸರೋಜ ಸೇರಿದಂತೆ ಮುಖಂಡರು. ಕಾರ್ಯಕರ್ತರು ಭಾಗವಹಿಸಿದ್ದರು.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *