ವಿದ್ಯುತ್ ಸ್ಪರ್ಷದಿಂದ ಕಾರ್ಮಿಕ ಸಾವು

Posted on: February 13, 2018

shock
ಸಿದ್ದಾಪುರ : ಸಮೀಪದ ಹಚ್ಚಿನಾಡು ಗ್ರಾಮದ ವ್ಯಾಪ್ತಿಗೆ ಒಳಪಡುವ ತೋಟವೊಂದರಲ್ಲಿ ಕರಿಮೆಣಸು ಕೊಯ್ಯುವಾಗ ವಿದ್ಯುತ್ ಸ್ಪರ್ಷಗೊಂಡು ಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ.

ಮೂಲತಃ ನಂಜನಗೂಡು ತಾಲೂಕಿನ ಕುಡ್ಲಾಪುರದ ಸ್ವಾಮಿ (22) ಎಂಬುವವರೆ ಮೃತ ಕಾರ್ಮಿಕ. ಕಾಳು ಮೆಣಸು ಕೊಯ್ಯುವಾಗ ಅಲ್ಯೂಮಿನಿಯಂ ಏಣಿ ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಈ ಘಟನೆ ನಡೆದಿದ್ದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *