ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ವೇತನ ಆಯೋಗದ ಶಿಫಾರಸ್ಸು ನೌಕರರಲ್ಲಿ ನಿರಾಶೆ ಉಂಟು ಮಾಡಿದೆ ಎಂ.ರಮೇಶ್

Posted on: February 3, 2018

DSC_0122
ಶಿವಮೊಗ್ಗ : ಕೇಂದ್ರ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ನಿರೀಕ್ಷಿಸಿದ್ದ ನೌಕರರಿಗೆ ವೇತನ ಆಯೋಗದ ವರದಿ ತೀವ್ರ ನಿರಾಶೆಯನ್ನು ಉಂಟು ಮಾಡಿದೆ. ಅದ್ದರಿಂದ ಈಗ ಆಯೋಗ ಶಿಫಾರಸ್ಸು ಮಾಡಿರುವ ಶೇ 30 ರ ಬದಲು ವೇತನವನ್ನು ಶೇ 45ಕ್ಕೆ ಹೆಚ್ಚಿಸಬೇಕೆಂದು ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಂ.ರಮೇಶ್ ಸರ್ಕಾರವನ್ನು ಅಗ್ರಹಿಸಿದ್ದಾರೆ.
ಅವರು ಇಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ರಾಜ್ಯ ಸರ್ಕಾರ 6ನೇ ವೇತನ ಆಯೋಗವನ್ನು ರಚಿಸಿದಾಗ ನೌಕರರು ಅಪಾರ ನಿರೀಕ್ಷೆ ಹೊಂದಿದ್ದರು, ಅಲ್ಲದೆ ಸರ್ಕಾರದ ತೀರ್ಮಾನವನ್ನು ನೌಕರರ ಎಲ್ಲಾ ಸಂಘಟನೆಗಳು ಸ್ವಾಗತಿಸಿದ್ದವು. ಆದರೆ ಪ್ರಸ್ತುತ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯು ವಾಸ್ತವಿಕತೆಯಿಂದ ಬಹಳ ದೂರದಲ್ಲಿದ್ದು, ನೌಕರರ ಸಂಕಷ್ಟಗಳನ್ನು ಬಗೆಹರಿಸುವ ಬದಲು ಅವರ ಜೀವನಕ್ಕೆ ಮಾರಕವಾಗಿದೆ. ತಕ್ಷಣ ಇದನ್ನು ಸರಿಪಡಿಸಬೇಕು ಎಂದಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ನಡುವಿನ ವೇತನದ ವ್ಯತ್ಯಾಸ ಶೇ 67ರಷ್ಟಿದ್ದು, ಪ್ರಸ್ತುತ ಆಯೋಗವು ಮಾಡಿರುವ ಕನಿಷ್ಟ ಶಿಫಾರಸ್ಸಿನಿಂದ ಈ ವೇತನದ ಅಂತರ ಇನ್ನಷ್ಟು ದೊಡ್ಡದಾಗುತ್ತಾ ಹೋಗುತ್ತದೆ. ಮನೆ ಬಾಡಿಗೆ ಭತ್ಯೆಯಲ್ಲಿ ಶೇ.6ರಷ್ಟು ಕಡಿತಗೊಳಿಸಿರುವುದರಿಂದ ವಾಸ್ತವ ಏರಿಕೆಯ 30% ಬದಲಿಗೆ ಕೇವಲ 24% ಮಾತ್ರ ಆಗಿದೆ. ಅಲ್ಲದೇ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನ ರೂ. 18,000 ಇದ್ದರೆ, ಗರಿಷ್ಠ ವೇತನ ರೂ. 2,50,000 ಆಗಿದೆ. ಇದರೊಂದಿಗೆ ಕನಿಷ್ಠ 10%ರಷ್ಟು ತುಟ್ಟಿಭತ್ಯೆಯನ್ನು ನೀಡಲಾಗುತ್ತಿದೆ. ಆದರೆ ಈ ವರದಿಯ ಪ್ರಕಾರ ರಾಜ್ಯ ನೌಕರರ ಕನಿಷ್ಟ ವೇತನ 17,000 ಮತ್ತು ಗರಿಷ್ಠ ವೇತನ 1,50,600 ಅಗಿದೆ. ಈ ಹಿನ್ನಲೆಯಲ್ಲಿ ಕನಿಷ್ಟ ವೇತನವನ್ನು ರೂ. 21,000 ಕ್ಕೆ ಹೆಚ್ಚಿಸಬೇಕೆಂದು ಎಂ.ರಮೇಶ್ ರವರು ಆಗ್ರಹಿಸಿದ್ದಾರೆ.
ಆರ್ ಬಿ ಐ ಅಂಕಿ ಅಂಶದ ಪ್ರಕಾರ ಒಟ್ಟಾರೆ ಆಯವ್ಯಯದಲ್ಲಿ ವೇತನದ ಪಾಲು ಕರ್ನಾಟಕದಲ್ಲಿ ಶೇ.18.18 ಇದ್ದರೆ, ಆಂಧ್ರ ಶೇ.31.94 ಕೇರಳ ಶೇ 33.2 ಮಹಾರಾಷ್ಟ್ರ ಶೇ. 35.51 ಮತ್ತು ತಮಿಳುನಾಡು ಶೇ 30.73 ಇದೆ. ಈ ಎಲ್ಲಾ ತಾರತಮ್ಯವನ್ನು ಸರಿಪಡಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನೀತಿಯಡಿ ಕೇಂದ್ರ ಸರ್ಕಾರಿ ನೌಕರರಿಗೆ ನೀಡುತ್ತಿರುವ ವೇತನಕ್ಕೆ ಸರಿಸಮಾನವಾಗಿ ರಾಜ್ಯ ಸರ್ಕಾರಿ ನೌಕರರಿಗೂ ಸೌಲಭ್ಯವನ್ನು ವಿತರಿಸಬೇಕು ಎಂದು ಅಗ್ರಹಿಸಿದ್ದಾರೆ. ಅಲ್ಲದೇ ತಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಸರ್ಕಾರಿ ನೌಕರರು ಮುಂದಿನ ದಿನಗಳಲ್ಲಿ ನಡೆಸುವ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿರುವುದಾಗಿ ತಿಳಿಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *