ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಶಾಂತಿಯುತ ಮತದಾನ ನಡೆಯಲಿ ಪಿ.ಐ.ಶ್ರೀವಿದ್ಯಾ

Posted on: February 21, 2018

DSC03429
ಮಡಿಕೇರಿ  : ಯಾವುದೇ ರೀತಿ ಅಹಿತಕರ ಘಟನೆಗಳು ಸಂಭವಿಸದ ರೀತಿಯಲ್ಲಿ ಶಾಂತಿಯುತವಾಗಿ ಮತದಾನವಾಗಬೇಕು ಅದಕ್ಕೆ ಎಲ್ಲ ಪಕ್ಷದವರ ಸಹಕಾರ ಮುಖ್ಯ ಎಂದು ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಧಾನಸಭೆ ಚುನಾವಣೆಯ ಪೂರ್ವ ಸಿದ್ದತೆಗಳ ಕುರಿತ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮತಗಟ್ಟೆಯಲ್ಲಿ ಸಿಸಿಟಿವಿ ಕ್ಯಾಮರ ಮತು ಪೋಲಿಸ್ ವ್ಯೆವಸ್ಥೆ ಇರುತ್ತದೆ. ಈ ಭಾರೀ ಗುಜರಾತಿನ ಮತಯಂತ್ರ್ರವನ್ನು ಬಳಸುತ್ತಿದ್ದು ಹಾಗಾಗಿ ಎಲ್ಲಾ ಯಂತ್ರಗಳು ಪರೀಕ್ಷೆಯಾಗಿರುತ್ತವೆ. ಪಕ್ಷದ ಪ್ರತಿನಿಧಿಗಳನ್ನು ಕಳಿಸುವ ಮುನ್ನ ಅವರ ಹೆಸರು ಮತ್ತು ದಾಖಲಾತಿಗಳನ್ನು ಕಳುಹಿಸಿ ಕೊಡಿ ಹಾಗೆಯೇ ಮೂರು ಪಕ್ಷ ದಿಂದ ಪ್ರತಿನಿಧಿಗಳನ್ನು ಕಳಿಹಿಸಿಕೊಡಬಹುದು ಅದರೆ ಒಂದು ದಿನಕ್ಕೆ ಒಬ್ಬ ಪಕ್ಷದ ಪ್ರತಿನಿಧಿ ಮಾತ್ರ ವಿಕ್ಷಣೆ ಮಾಡಬಹುದು ಎಂದು ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದರು.

ಮತ ಗಟ್ಟೆಯಲ್ಲಿ ವಿದ್ಯುನ್‍ಮಾನ ಮತಯಂತ್ರವನ್ನು ಯಾವ ರೀತಿ ಬಳಕೆ ಮಾಡಬೇಕು ಎಂಬುದರ ಬಗ್ಗೆ ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಡಿಯೋ ಸಮೇತ ಪ್ರದರ್ಶನ ಮಾಡುತ್ತೇವೆ. ಚುನಾವಣೆಗೆ ನಿಖರವಾದ ದಿನಾಂಕದ ಮಾಹಿತಿ ಇನ್ನು ಬಂದಿಲ್ಲ ಬಂದ ತಕ್ಷಣ ತಿಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ನಂಜುಂಡೇಗೌಡ ಅವರು ಮಾತನಾಡಿ ಪಕ್ಷದವರು ಪ್ರತಿನಿಧಿಗಳನ್ನು ಕಳಿಸುವ ಮುನ್ನ ಪ್ರತಿನಿಧಿಗಳ ಐ.ಡಿ ಅಥವಾ ಅವರ ದಾಖಲಾತಿಗಳನ್ನು ನೀಡಬೇಕು. ಎಂದು ಪಕ್ಷದ ಮುಖಾಂಡರಿಗೆ ಸೂಚಿಸಿದರು.

DSC03431

ವಿರಾಜಪೇಟೆಯ ಬ್ಲಾಕ್ ಕಾಂಗ್ರೇಸ್ ಉಪಾಧ್ಯರಾದ ಫಿ.ಎ.ಹನೀಪ್, ಮೈನಾರಿಟಿಯ ಉಪಾಧ್ಯಕ್ಷರಾದ ಕೆ.ಎಸ್.ರಜಾಕ್, ಭಾರತೀಯ ಜನತ ಪಕ್ಷದ ಭಾರತೇಶ್ ಜನತಾದಳ ಪಕ್ಷದ ಭರತ್ ಕುಮಾರ್, ಇನ್ಸ್‍ಪೆಕ್ಟರ್ ಮೇದಪ್ಪ, ಅನಿಲ್‍ಕುಮಾರ್ ಇತರರು ಇದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *