ಶಿಕ್ಷಕಿಗೆ ಅತ್ಯಾಚಾರ ಎಸಗುವುದಾಗಿ ಬೆದರಿಕೆ ಹಾಕಿದ 7ನೇ ತರಗತಿ ವಿದ್ಯಾರ್ಥಿ

Posted on: February 21, 2018

rap

ಗುರುಗ್ರಾಮ : ಇಲ್ಲಿನ ಖ್ಯಾತ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ 7ನೇ ತರಗತಿಯ ವಿದ್ಯಾರ್ಥಿಯೋರ್ವ ತನ್ನ ಶಿಕ್ಷಕಿ ಮತ್ತು ಅವರ ಮಗಳಿಗೆ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಮೇಲ್​ ಕಳುಹಿಸಿದ್ದಾನೆ.

ವಿದ್ಯಾರ್ಥಿಯ ನಡವಳಿಕೆಯಿಂದ ಶಿಕ್ಷಿಕಿ ಮತ್ತು ಅವರ ಪುತ್ರಿ ಆಘಾತಕ್ಕೊಳಗಾಗಿದ್ದಾರೆ. ಆಘಾತದಿಂದ ಹೊರಬಂದಿರುವ ಶಿಕ್ಷಕಿ ಶಾಲೆಗೆ ಮರಳಿದ್ದಾರೆ. ಆದರೆ, ಅವರ ಪುತ್ರಿ ಇನ್ನೂ ಆಘಾತದಿಂದ ಹೊರಬಂದಿಲ್ಲ.

ಮತ್ತೊಂದು ಪ್ರಕರಣದಲ್ಲಿ ಇದೇ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೋರ್ವ ಶಿಕ್ಷಕಿಗೆ ಇ-ಮೇಲ್​ ಕಳುಹಿಸಿ ತನ್ನ ಜತೆ ಕ್ಯಾಂಡಲ್​ ಲೈಟ್​ ಡೇಟ್​ಗೆ ಬರುವಂತೆ ಮತ್ತು ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಆಹ್ವಾನಿಸಿದ್ದ ಎಂದೂ ತಿಳಿದು ಬಂದಿದೆ. ಎರಡೂ ಘಟನೆಗಳು ಕಳೆದ ವಾರ ನಡೆದಿವೆ.

ವಿದ್ಯಾರ್ಥಿಗಳ ದುರ್ವರ್ತನೆ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಯನ್ನು ಈಗಾಗಲೇ ಅಮಾನತುಗೊಳಿಸಲಾಗಿದ್ದು, ಕೌನ್ಸೆಲಿಂಗ್​ ಮಾಡಲಾಗುತ್ತಿದೆ ಎಂದು ಶಾಲೆ ಹೇಳಿಕೆಯಲ್ಲಿ ತಿಳಿಸಿದೆ.

ದೆಹಲಿಯ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಶಕುಂತಲಾ ಧುಲ್ ಅವರು ಪ್ರಕರಣವನ್ನು ಗಂಭೀರವಾಗಿದ್ದ ಪರಿಗಣಿಸಿದ್ದು, ಶಾಲೆ ಮತ್ತು ಆರೋಪಿ ಬಾಲಕನಿಗೆ ನೋಟಿಸ್​ ನೀಡಲಾಗುವುದು. ಆ ನಂತರ ಅವರೊಂದಿಗೆ ಸಭೆ ನಡೆಸಿ, ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್​ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಇಂತಹ ಪ್ರಕರಣಗಳು ಯಾವುದೋ ಒಂದು ಶಾಲೆಗೆ ಸಂಬಂಧಿಸಿದ್ದಲ್ಲ. ಎಲ್ಲ ಕಡೆ ನಡೆಯುತ್ತಿವೆ. ಮಕ್ಕಳು ಸ್ಮಾರ್ಟ್ ಫೋನ್​ಗಳಿಗೆ ಹೆಚ್ಚು ಬಳಸುತ್ತಿದ್ದು, ಪ್ರಚೋದನೆಗೊಳಗಾಗುತ್ತಿದ್ದಾರೆ. ಅವರು ಏನನ್ನೂ ನೋಡುತ್ತಿದ್ದಾರೆ ಎಂಬುದರ ಬಗ್ಗೆ ಪಾಲಕರು ನಿಗಾ ಇಡಬೇಕು ಎಂದು ಬಹುತೇಕ ಪ್ರಾಂಶುಪಾಲರು ಅಭಿಪ್ರಾಯಪಟ್ಟಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *