ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಸಂಚಾರಿ ಡಿಜಿಟಲ್ ತಾರಾಲಯಕ್ಕೆ ಎಂ.ಆರ್.ಸೀತಾರಾಂ ಚಾಲನೆ

Posted on: February 19, 2018

DSC03352
ಮಡಿಕೇರಿ : ಸಂಚಾರಿ ಡಿಜಿಟಲ್ ತಾರಾಲಯ, ಶಾಲೆಯ ಅಂಗಳದಲ್ಲಿ ತಾರಾಲಯ ವೀಕ್ಷಣೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎಂ.ಆರ್.ಸೀತಾರಾಂ ಅವರು ನಗರದ ಜೂನಿಯರ್ ಕಾಲೇಜಿನಲ್ಲಿ ಭಾನುವಾರ ಚಾಲನೆ ನೀಡಿದರು.

DSC03343

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಸಂಚಾರಿ ತಾರಾಲಯಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಮಕ್ಕಳಲ್ಲಿ ವಿಜ್ಞಾನ ವಿಷಯ ಮಹತ್ವದ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಸಂಚಾರಿ ತಾರಾಲಯ ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು.

DSC03345ವಿದ್ಯಾರ್ಥಿಗಳಿಗೆ ಖಗೋಳಶಾಸ್ತ್ರದ ಬಗ್ಗೆ ಮಾಹಿತಿ ನೀಡುವುದು ಪ್ರಮುಖವಾಗಿದ್ದು, ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ವಿಜ್ಞಾನ ವಿಷಯವನ್ನು ಪಠ್ಯದಲ್ಲಿ ಓದುತ್ತಾರೆ. ಆ ದಿಸೆಯಲ್ಲಿ ತಾರಾಯಲದ ಮೂಲಕ ವೀಕ್ಷಣೆ ಮಾಡಿ ಖಗೋಳ ಮಂಡಲದ ಬಗ್ಗೆ ಮಾಹಿತಿ ತಿಳಿದುಕೊಳ್ಳುವಲ್ಲಿ ಸಂಚಾರಿ ತಾರಾಲಯ ಸಹಕಾರಿಯಾಗಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎಂ.ಆರ್.ಸೀತಾರಾಂ ಅವರು ತಿಳಿಸಿದರು.

ರಾಜ್ಯದ 5 ಕಡೆ ಸಂಚಾರಿ ತಾರಾಲಯ ಆರಂಭಿಸಲಾಗಿದ್ದು, ಸರ್ಕಾರಿ ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ವೀಕ್ಷಣೆಗೆ ಅವಕಾಶ ಮಾಡಲಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ 1.50 ಲಕ್ಷ ವಿದ್ಯಾರ್ಥಿಗಳು ಸಂಚಾರಿ ತಾರಾಲಯದ ಮೂಲಕ ಖಗೋಳ ವೀಕ್ಷಣೆ ಮಾಡಿದ್ದಾರೆ ಎಂದು ಸಚಿವರು ನುಡಿದರು.
ಸಂಚಾರಿ ತಾರಾಲಯದ ಮೂಲಕ ಮುಂದಿನ ದಿನಗಳಲ್ಲಿ 5 ಲಕ್ಷ ವಿದ್ಯಾರ್ಥಿಗಳು ಖಗೋಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಎಂ.ಆರ್.ಸೀತಾರಾಂ ಅವರು ತಿಳಿಸಿದರು.

ಸಂಚಾರಿ ತಾರಾಲಯದಲ್ಲಿ ಸೂರ್ಯನ ನಿಗೂಢ ರಹಸ್ಯ, ಸೂರ್ಯ, ಚಂದ್ರ, ಭೂಮಿ ಹಾಗೂ ನಕ್ಷತ್ರಗಳ ಚಲನವಲನ. ಜೊತೆಗೆ ಹೈಡ್ರೋಜನ್ ಬಾಂಬ್ ಬಳಸುವುದರಿಂದ ಭೂಮಿಯ ಮೇಲೆ ಉಂಟಾಗುವ ದುಷ್ಪರಿಣಾಮ ಮತ್ತಿತರ ಬಗ್ಗೆ ತಾರಾಲಯದಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ನಿರ್ದೇಶಕರಾದ ಕೆ.ಎ.ಯಾಕುಬ್, ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಜಿ.ಪಂ.ಯೋಜನಾ ನಿರ್ದೇಶಕರಾದ ಸಿದ್ದಲಿಂಗಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಆರ್.ಕರೀಗೌಡ, ತಹಶೀಲ್ದಾರರಾದ ಕುಸುಮ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗುರುರಾಜ್, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾದ ಶಿವರಾಮ್, ಸಂಚಾರಿ ತಾರಾಲಯದ ವರ್ನಾಜ್ ಸಂಸ್ಥೆಯ ನಿರ್ದೇಶಕರಾದ ಅನಂತ ಕುಲಕರ್ಣಿ, ಚರಂತಯ್ಯ ಇತರರು ಇದ್ದರು.

ಇನ್ನಷ್ಟು ಮಾಹಿತಿ:- ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಆವಿಸ್ಕಾರಗಳ ಮೂಲಕ ಮಾನವ ನಭೋಮಂಡಲದ ವಿಸ್ಮಯ ಮತ್ತು ನಿಗೂಢತೆಯನ್ನು ಭೇದಿಸುವಲ್ಲಿ ನಿರಂತರವಾಗಿ ಯಶಸ್ವಿಯಾಗುತ್ತಿದ್ದಾರೆ. ಇಂತಹ ವಿಜ್ಞಾನ ಅಚ್ಚರಿಗಳು ಹಾಗೂ ತಾರಾಮಂಡಲದ ಕೌತುಕಗಳನ್ನು ತಾರಾಲಯಗಳಲ್ಲಿ ನೋಡಿ ತಿಳಿದುಕೊಳ್ಳಬಹುದಾಗಿದೆ.
ತಾರಾಲಯಗಳು ಗೋಳಾಕಾರದ ವಿಶೇಷ ಗೊಮ್ಮಟವನ್ನು ಹೊಂದಿದ್ದು, ಇದರಲ್ಲಿ ಗ್ರಹ, ನಕ್ಷತ್ರ ಹಾಗೂ ಇತರೆ ಆಕಾಶಕಯಗಳನ್ನು ಹೊಂದಿರುವ ಕಾಲ್ಪನಿಕ ಆಕಾಸವನ್ನು ಸೃಷ್ಟಿಸಬಹುದಾಗಿದೆ. ಇಂತಹ ನೈಜ ರೂಪದಲ್ಲಿರುವ ಆಕಾಶದ ಮುಖಾಂತರ ಖಗೋಳ ವಿಜ್ಞಾನದ ಕುತೂಹಲಕಾರಿ ವಿಚಾರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದೆ.
ಸಂಚಾರಿ ತಾರಾಲಯದ ವೈಶಿಷ್ಟ್ಯಗಳು: ಗಾಳಿ ತುಂಬುವುದರ ಮೂಲಕ ರಚಿತವಾಗಿರುವ ಪ್ರೊಜೆಕ್ಟರ್‍ವುಳ ಗೋಳಾಕಾರದ ಗುಮ್ಮಟ-ಆಸನ ಸಾಮಥ್ರ್ಯ 30 ರಿಂದ 40 ವಿದ್ಯಾರ್ಥಿಗಳು ಕುಳಿತು ವೀಕ್ಷಣೆ ಮಾಡಬಹುದಾಗಿದೆ.

ಫಿಶ್-ಐ-ಲೆನ್ಸ್ ಜೋಡಿಸಿರುವ ಡಿಜಿಟಲ್ ಪ್ರೊಜೆಕ್ಟರ್-ಖಗೋಳ ಹಾಗೂ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರ ವೀಡಿಯೋಗಳನ್ನು 360 ಡಿಗ್ರಿಯಲ್ಲಿ ಪ್ರೊಜೆಕ್ಟ್ ಮಾಡಿ 180 ಡಿಗ್ರಿಯಲ್ಲಿ ವೀಕ್ಷಿಸಬಹುದು. ಜೊತೆಗೆ ಗುಣಮಟ್ಟದ ಶಬ್ಧ ವ್ಯವಸ್ಥೆ ಹೊಂದಿದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *