ಸಂಸದ ಪ್ರಹ್ಲಾದ್ ಜೋಶಿಗೆ ಬೆದರಿಕೆ ಪತ್ರ

Posted on: February 3, 2018

prahladjoshi

ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಬೆದರಿಕೆ ಪತ್ರ ಬಂದಿರುವ ಕುರಿತಂತೆ ತನಿಖೆ ನಡೆಸಲು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎಂ. ನಾಗರಾಜ್ ಸೂಚಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಲಷ್ಕರ್ ತೋಯಿಬಾ ಸಂಘಟನೆಯಿಂದ ಬೆದರಿಕೆ ಎದುರಾಗಿತ್ತು ಆ ವೇಳೆಯೇ ಅವರಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ. ಈಗಲೂ ಅವರಿಗೆ ಭದ್ರತೆಯನ್ನು ಮುಂದುವರೆಸಲಾಗುವುದು ಎಂದರು.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *