ಹಳೆದ್ವೇಷದ ಹಿನ್ನೆಲೆ ವ್ಯಕಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ

Posted on: February 10, 2018

somvar

ಸೋಮವಾರಪೇಟೆ : ಹಳೆ ವೈಷಮ್ಯದಿಂದ ವ್ಯಕಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸೋಮವಾರಪೇಟೆ, ಮಡಿಕೇರಿ ರಾಜ್ಯ ಹೆದ್ದಾರಿಯ ಕುಸುಬೂರು ಜಂಕ್ಷನ್ ನ ರಸ್ತೆಯಲ್ಲಿ ನಡೆದಿದೆ.

ಜನತಾ ಕಾಲನಿ ನಿವಾಸಿ ಹರ್ಷಿತ್ ಗಾಯಗೊಂಡವರು. ಕುಶಾಲನಗರದಿಂದ ಸ್ಕೂಟರ್ ನಲ್ಲಿ ಸೋಮವಾರಪೇಟೆಗೆ ಬರುತ್ತಿದ್ದ ಸಂದರ್ಭ, ಕಾರಿನಿಂದ ಸ್ಕೂಟರ್ ಗೆ ಡಿಕ್ಕಿ ಹೊಡೆದ ಆರೋಪಿಗಳು, ಸ್ಕೂಟರ್ ನಿಂದ ಬಿದ್ದ ಹರ್ಷಿತ್ ಮೇಲೆ ಮುಗಿಬಿದ್ದು ಕಬ್ಬಿಣದ ರಾಡ್ ಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪಕ್ಕದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸ್ಥಳಕ್ಕೆ ಬಂದು ಬೊಬ್ಬೆ ಹೊಡೆದ ಸಂದರ್ಭ ಆರೋಪಿಗಳು ಕಾರು ಹತ್ತಿ ಪರಾರಿಯಾಗಿದ್ದಾರೆ.

Gang-attackಹರ್ಷಿತ್ ತಲೆ ಭಾಗ, ಕಾಲು, ಕೈಗೆ ತೀವ್ರ ಗಾಯವಾಗಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಐಗೂರು ಗ್ರಾಮದ ಭರತ್, ಹೇರೂರು ಅಭಿ, ಹೊಸತೋಟ ರಾಜೇಶ್ ಮತ್ತು ಅವರ ತಂಡ, ಕತ್ತಿ ಮತ್ತು ರಾಡ್ ಗಳಿಂದ ಹಲ್ಲೆ ಮಾಡಿ ನನ್ನನ್ನು ಕೊಲ್ಲುವ ಪ್ರಯತ್ನ ಮಾಡಿದ್ದಾರೆ ಎಂದು ಗಾಯಾಳು ಹರ್ಷಿತ್ ಪಟ್ಟಣದ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಘಟನಾ ಸ್ಥಳದಲ್ಲಿ ಮಹಜರು ನಡೆಸಿದ ಠಾಣಾಧಿಕಾರಿ ಶಿವಣ್ಣ ಮೊಕದ್ದಮೆ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *