ಹೊಸ ತಂಡದಿಂದ ‘ಆ ಎರಡು ಸೆಕೆಂಡ್’ ಕಿರು ಚಿತ್ರ ಬಿಡುಗಡೆ

Posted on: February 14, 2018

66df15dc-5c84-4e72-aaca-86abc1232522

ಮಡಿಕೇರಿ: ಚಾನೆಲ್-24 ಕರ್ನಾಟಕ ದೃಶ್ಯವಾಹಿನಿಯ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿರುವ ‘ಆ ಎರಡು ಸೆಕೆಂಡ್’ ಕಿರು ಚಿತ್ರದ ಪೋಸ್ಟರ್ ನ್ನು ಇಂದು ಬಿಡುಗಡೆಗೊಳಿಸಲಾಯಿತು.

1240ef0d-4e02-4e02-b428-d4bf6bbc4e3bಸುದ್ದಿಗೋಷ್ಠಿಯಲ್ಲಿ ದೃಶ್ಯ ವಾಹಿನಿಯ ನಿರ್ದೇಶಕರಾದ ಶರೀನ್ ಅವರು ಪೋಸ್ಟರ್ ನ್ನು ಬಿಡುಗಡೆಗೊಳಿಸಿ ಮಾತನಾಡಿ, ಯುವ ನಿರ್ದೇಶಕ ಮತ್ತು ಯುವ ನಟರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಿರುಚಿತ್ರವೊಂದನ್ನು ನಿರ್ಮಿಸಲಾಗಿದೆ ಎಂದರು.

ಹಾದಿ ತಪ್ಪುತ್ತಿರುವ ಯುವ ಸಮೂಹಕ್ಕೆ ಉತ್ತಮ ಸಂದೇಶ ನೀಡುವ ಅಂಶಗಳು ಕಿರುಚಿತ್ರದಲ್ಲಿದ್ದು, ಸಾಕಷ್ಟು ಶ್ರಮ ವಹಿಸಿ ನಿರ್ದೇಶಿಸಿರುವ ಕಿರುಚಿತ್ರಕ್ಕೆ ಪ್ರೇಕ್ಷಕರ ಪ್ರೋತ್ಸಾಹ ಅಗತ್ಯ ಎಂದರು.

ಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ಚೆಂಡೀರ ಮನೋಜ್ ಮಾತನಾಡಿ, ಇಂದಿನ ಯುವ ಜನತೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಕೆಲವೇ ಕ್ಷಣಗಳಲ್ಲಿ ನಡೆದುಹೋಗಿ ಬಿಡಬಹುದಾದ ಅನಾಹುತಗಳ ಬಗ್ಗೆ ಆ ಎರಡು ಸೆಕೆಂಡ್ ಕಿರು ಚಿತ್ರದಲ್ಲಿ ಮನಮುಟ್ಟುವಂತೆ ತಿಳಿಸಲಾಗಿದೆ ಎಂದರು.

ವಿದ್ಯಾರ್ಥಿಯೊಬ್ಬ ಪ್ರೀತಿಯ ಬಲೆಗೆ ಬಿದ್ದು, ದುಶ್ಚಟಗಳಿಗೆ ದಾಸನಾಗಿ, ಸಂಕಷ್ಟಕ್ಕೆ ಸಿಲುಕುವ ಕಥಾ ಹಂದರ ಈ ಕಿರು ಚಿತ್ರದಲ್ಲಿದೆ. ಯೂ ಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಕಿರುಚಿತ್ರವನ್ನು ಪ್ರದರ್ಶಿಸಲಾಗುವುದು. ಚಾನೆಲ್ 24 ಕರ್ನಾಟಕ ಚಾನೆಲ್ ನಲ್ಲಿ ಕೂಡ ಕಿರುಚಿತ್ರ ಪ್ರಸಾರವಾಗಲಿದೆಯೆಂದು ಮನೋಜ್ ತಿಳಿಸಿದರು.

ನಾಯಕಿಯಾಗಿ ಸೌಮ್ಯಶ್ರೀ, ಸಹ ಕಲಾವಿದರಾಗಿ ಉಮೇಶ್ ಪಾರೆಪ್ಪಾಡಿ, ಶ್ರೀಧರ್ ಹೊಸೊಕ್ಲು, ದೀಕ್ಷಿತ್ ರೈ, ಸಾಯಿ ನಿತೇಶ್, ಭರತ್ ಮತ್ತಿತರರು ಚಿತ್ರದಲ್ಲಿ ನಟಿಸಿದ್ದಾರೆ.

Z-FILM-2ಚಾನೆಲ್ 24 ಕರ್ನಾಟಕದ ನಿರ್ದೇಶಕರಾದ ಶರೀನ್ ಹಾಗೂ ಸುರೇಶ್ ಮುತ್ತಪ್ಪ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ಜೀವನ್ ಪಾಲಕ್ಕಾಡ್ ನೇತೃತ್ವದಲ್ಲಿ ಎನ್.ವಿ.ವಿಕ್ಕಿ ಛಾಯಾಗ್ರಹಣ ಮಾಡಿದ್ದು, ಜಯಶಂಕರ್ ನೇತೃತ್ವದ ಸಿ.ಜೆ.ಕ್ರಿಯೇಷನ್ಸ್ ತಂಡ ಸಂಕಲನ ಮಾಡಿದೆ ಎಂದು ಮನೋಜ್ ಮಾಹಿತಿ ನೀಡಿದರು.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *