ಬ್ರೇಕಿಂಗ್ ನ್ಯೂಸ್

Posted on: February 27, 2018

IMG-20180227-WA0014ಸಿದ್ದಾಪುರ : ಜಿಲ್ಲ ತುಳುವೆರೆ ಜನಪದ ಸಂಘದ ವತಿಯಿಂದ ಏ 17 ರಂದು ಮಡಿಕೇರಿಯಲ್ಲಿ ವಿಶು ಹಬ್ಬವನ್ನು ಆಚರಿಸಲಾಗುವುದೆಂದು ತುಳವೆರೆ ಒಕ್ಕೂಟದ ಜಿಲ್ಲಾ ಕಾರ್ಯಾಧ್ಯಕ್ಷ ವೆಂಕಪ್ಪ ರೈರವರು ತಿಳಿಸಿದರು.

ಸಿದ್ದಾಪುರ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಸಿದ್ದಾಪುರ ಹೋಬಳಿಯ ತುಳುವೆರೆ ಸಂಘದ ಪದಾಧಿಕಾರಿಗಳ ಆಯ್ಕೆಯ ಸಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ತುಳು ಭಾಷಿಕ ಜನಾಂಗದವರಿದ್ದು ಈ ಹಿನ್ನೆಲೆಯಲ್ಲಿ ತುಳು ಜನಾಂಗದ ಆಚಾರ,ವಿಚಾರ, ಸಂಸ್ಕತಿಯನ್ನು ಜನಾಂಗದವರಿಗೆ ತಿಳಿಸಲು ಏಪ್ರಿಲ್ 17 ರಂದು ಮಡಿಕೇರಿಯಲ್ಲಿ ವಿಶು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವುದೆಂದರು.

ಮಡಿಕೇರಿ ಕಾವೇರಿ ಹಾಲ್‍ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡದಿಂದಲು ಕಲಾವಿದರು ಆಗಮಿಸಲಿದ್ದು, ಆ ದಿನ ಜಿಲ್ಲೆಯ ತುಳು ಬಾಂದವರಿಗೆ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆಂದರು.

ತುಳುವೆರೆ ಒಕ್ಕೂಟದ ಕಾರ್ಯದರ್ಶಿ ರವಿ ಮಾತನಾಡಿ ಜಿಲ್ಲೆಯಲ್ಲಿ ತುಳು ಭಾಷೆ ಮಾತನಾಡುವ 13 ಜನಾಂಗದವರನ್ನು ಒಂದೇ ವೇಧಿಕೆಯಲ್ಲಿ ಸೇರ್ಪಡೆಗೊಳಿಸಲು ತುಳುವೆರೆ ಸಂಘ ರಚಿಸಲಾಗಿದೆ. ತುಳು ಜನಾಂಗದವರಲ್ಲಿ ಸಾಕಷ್ಟು ಮಂದಿ ಮೂಲ ನಿವಾಸಿಗಳಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಂಘಟನೆಯನ್ನು ಬಲಪಡಿಸುವ ಮೂಲಕ ಆಚಾರ ವಿಚಾರವನ್ನು ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು. ರಾಜಕೀಯ ಪಕ್ಷಗಳು ತುಳು ಭಾಷಿಕರನ್ನು ಕೀಳಾಗಿ ಕಾಣುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ತುಳುವೆರ ಸಂಗದ ಜಿಲ್ಲಾ ಉಪಾಧ್ಯಕ್ಷ ಬಿ.ವೈ ರಘು ಆನಂದ ಮಾತನಾಡಿ ನಾರಾಯಣ ಗುರುಗಳ ಸಂದೇಶದಂತೆ ಸಂಘಟನೆಯಿಂದ ಶಕ್ತನಾಗು ಎಂಬಂತೆ,ತುಳು ಜನಾಂಗದವರು ತಾವು ಒಂದೇ ತಾಯಿಯ ಮಕ್ಕಳು ಎಂಬ ಭಾವನೆಯಿಂದ ಸಂಘಟಿತರಾಗಬೇಕೆಂದರು. ಯುವಕರು ಜನಾಂಗದ ಆಚಾರ,ವಿಚಾರವನ್ನು ಮೈಗೂಡಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಕರೆನೀಡಿದರು.

ಅಲ್ಲದೆ ಎಲ್ಲಾ ಕ್ಷೇತ್ರದಲ್ಲೂ ಅವಕಾಶಗಳಿದ್ದು ,ಅವಕಾಶಗಳನ್ನು ಬಳಸಿಕೊಂಡು ಮುಂದೆಬರಬೇಕೆಂದರು. ಸರ್ಕಾರದ ಹಲವಾರು ಸೌಲಭ್ಯಗಳ ಮಾಹಿತಿಯನ್ನು ಜನಾಂಗದವರಿಗೆ ತಿಳಿಸುವ ಮೂಲಕ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ತುಳುವೆರೆ ಒಕ್ಕೂಟದ ಅಧ್ಯಕ್ಷ ಶೇಖರ್ ಬಂಡಾರಿ,ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಎ.ಎಸ್.ದಾಮೋದರ್ ಆಚಾರ್ಯ, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಪ್ರಭು ಮಾತನಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಲಹೆಗಾರರಾದ ವೆಂಕಪ್ಪ ರೈ, ಖಜಾಂಚಿ ಮಂಜು,ಬಾಬು ನಾಯಕ್, ರೇಖಾ,ನಿತೀನ್ ಹಾಜರಿದ್ದರು.
ಇದೇ ಸಂಧರ್ಭದಲ್ಲಿ ಸಿದ್ದಾಪುರ ಹೋಬಳಿಯ ತುಳುವೆರೆ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ಬಿ.ಜೆ.ಸುರೇಶ್, ಉಪಾಧ್ಯಕ್ಷ ಪಿ.ಸಿ.ರಾಜು, ದೇವಕಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಹರೀಶ್ ರೈ, ಸಹಕಾರ್ಯದರ್ಶಿ ವಿನೋದ್ ಪೂಜಾರಿ, ಖಜಾಂಚಿ ರೇಖಾ ಕಣ್ಣಂಗಾಲ ಹಾಗು ಹತ್ತು ಮಂದಿ ಸಂಘಟನಾ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಯಿತು.
ಕಾಂರ್ಯಕ್ರಮದಲ್ಲಿ ವಿನೋದ್ ಪೂಜಾರಿ ಸ್ವಾಗತಿಸಿ ವಂದಿಸಿದರು

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *