ಬ್ರೇಕಿಂಗ್ ನ್ಯೂಸ್

ಕಾಮನ್ ವೆಲ್ತ್ ಗೇಮ್’ಗೆ ಆಯ್ಕೆಯಾದ ಜಿಲ್ಲೆಯ ಬಾಸ್ಕೆಟ್ ಬಾಲ್ ಪಟು ನವನೀತಾ

Posted on: March 12, 2018

17a ಸುಂಠಿಕೊಪ್ಪ : ಈಗಾಗಲೇ ಹಾಕಿ, ಕ್ರಿಕೆಟ್, ಅಥ್ಲೆಟಿಕ್ಸ್’ಗಳಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ನೀಡಿರುವ ಜಿಲ್ಲೆ ಇದೀಗ ಬಾಸ್ಕೆಟ್ ಬಾಲ್’ಗೆ ಹೊಸ ಪ್ರತಿಭೆಯನ್ನು ಪರಿಚಯಿಸುತ್ತಿದೆ.

ಏಪ್ರಿಲ್ 4 ರಿಂದ ಆಸ್ಟ್ರೇಲಿಯದಲ್ಲಿ ಆರಂಭ ವಾಗುವುದು ಕಾಮನ್‌ವೆಲ್ತ್  ಗೇಮ್ಸ್ ನಲ್ಲಿ ಭಾಗವಹಿಸಲು ಭಾರತ ತಂಡದವನ್ನು ಪ್ರತಿನಿಧಿಸಲು ಕೊಡಗಿನ ಕುವರಿ ಸುಂಠಿಕೂಪ್ಪದ ಗದ್ದೆಹಳ್ಳ ಗ್ರಾಮದ ಪಟ್ಟೆಮನೆ ನವನೀತಾ ಆಯ್ಕೆಯಾಗಿದ್ದಾರೆ.17-9

ಉದಯಕುಮಾರ್  ಮತ್ತು ಗಿರಿಜಾ ದಂಪತಿಯ ಪುತ್ರಿಯಾಗಿರುವ ನವನೀತಾ ರಾಜ್ಯದಿಂದ ಪ್ರತಿನಿಧಿಸುವ ಮತ್ತೊಬ್ಬ ಆಟಗಾರ್ತಿ ಮಂಡ್ಯ ಮೂಲದ ಭಾಂದವ್ಯ ಜೊತೆಗೂಡಿ ಆಸ್ಟ್ರೇಲಿಯದ ಗೋಲ್ಡ್ ಕೋಸ್ಟ್ ನಲ್ಲಿ ಭಾರತ ತಂಡಕ್ಕೆ ಆಡಿಲಿದ್ದಾರೆ.

ಸೀನಿಯರ್ ನ್ಯಾಶನಲ್ ನಲ್ಲಿ ಕಂಚಿನ ಪದಕ, ಕರ್ನಾಟಕ ಒಲಂಪಿಕ್ಸ್ ಅಸೋಸಿಯೇಷನ್ ಪ್ರಶಸ್ತಿ, 15ನೇ ದಕ್ಷಿಣ ವಲಯ ಮಟ್ಟದಲ್ಲಿ ಬೆಸ್ಟ್ ಆಲ್ ರೌಂಡರ್, ಏಷ್ಯಾ ಮಹಿಳಾ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದಾರೆ. ಕಾಮನ್ ವೆಲ್ತ್ ಗೇಮ್’ನಲ್ಲಿಯೂ ಪ್ರಶಸ್ತಿ ದೋಚುವ ದೇಶ ಹಾಗೂ ಜಿಲ್ಲೆಗೆ ಹೆಸರು ತರಲಿ ಎಂಬುದು ಜಿಲ್ಲೆಯ  ಜನರ ಆಶಯವಾಗಿದೆ.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *