ತಮಿಳುನಾಡು ಬೃಹತ್ ಕಾಡ್ಗಿಚ್ಚಿಗೆ 9 ಚಾರಣಿಗರು ಬಲಿ

Posted on: March 12, 2018

TheniForestFireಥೇಣಿ: ಭಾನುವಾರ ರಾತ್ರಿ ತಮಿಳುನಾಡಿನ ಕುರಾಂಗಣಿ ಬೆಟ್ಟದ ತಪ್ಪಲಿನಲ್ಲಿ ಉಂಟಾಗಿರುವ ಬೃಹತ್ ಕಾಡ್ಗಿಚ್ಚಿಗೆ 9 ಚಾರಣಿಗರು ಬಲಿಯಾಗಿದ್ದು, 36 ಚಾರಾಣಿಗರು ನಾಪತ್ತೆಯಾಗಿದ್ದಾರೆ.

ಈ ದುರ್ಘಟನೆಯಿಂದ 27 ಮಂದಿಯನ್ನು ರಕ್ಷಿಸಲಾಗಿದ್ದು, 17 ಚಾರಣಿಗರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 10 ಮಂದಿ ಅಪಾಯದಿಂದ ಪಾರಾಗಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೃತ ದುರ್ದೈವಿಗಳಲ್ಲಿ ಆರು ಮಂದಿ ಚೆನ್ನೈನವರು ಹಾಗೂ ಮೂವರು ಎರೋಡ್‌ನವರು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *