ನಿಯಂತ್ರಣ ತಪ್ಪಿದ ಕಾರು ಪಲ್ಟಿ ಓರ್ವ ಸಾವು ಮತ್ತೋರ್ವ ಗಂಭೀರ

Posted on: March 11, 2018

Z-ACCIDENT-1
ಮಡಿಕೇರಿ : ನಿಯಂತ್ರಣ ತಪ್ಪಿದ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಸುಂಟಿಕೊಪ್ಪ ಸಮೀಪದ ಶಾಂತಿ ಗಿರಿ ತೋಟದ ಬಳಿ ನಡೆದಿದೆ.

ಸುಂಟಿಕೊಪ್ಪದ ಪಂಪ್ಹೌಸ್ ಬಡಾವಣೆಯ ನಿವಾಸಿ ಸೋಮಯ್ಯ ಎಂಬುವವರ ಪುತ್ರ ಕೌಶಿಕ್(29) ಮೃತಪಟ್ಟಿರುವ ದುರ್ದೈವಿ.

ಅಜ್ಜಿಯ ತಿಥಿ ಕಾರ್ಯವನ್ನು ಮುಗಿಸಿಕೊಂಡು ಸಂಬಂಧಿ ರಿತೇಶ್ (34) ಅವರೊಂದಿಗೆ ಕುಶಾಲನಗರಕ್ಕೆ ತೆರಳುತ್ತಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ.

ಸುಂಟಿಕೊಪ್ಪದಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಕಾರು( ಕೆಎ 12 ಜೆಡ್ 9247) ಕೌಶಿಕ್ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿಯಾಗಿ ಪಲ್ಟಿ ಹೊಡೆದಿದೆ. ಕೌಶಿಕ್ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸುವ ಸಂದರ್ಭ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಸಂಬಂಧಿ ರಿತೇಶ್ ಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *