ಬೇಟೆಗೆಂದು ತೆರಳಿದ್ದ ಇಬ್ಬರು ವ್ಯಕ್ತಿಗಳು ಶವವಾಗಿ ಪತ್ತೆ

Posted on: March 22, 2018

WhatsApp Image 2018-03-22 at 8.22.49 AM
ಮಂಗಳೂರು : ಬೇಟೆಗೆಂದು ತೆರಳಿದ್ದ ಇಬ್ಬರು ವ್ಯಕ್ತಿಗಳು ಹೆಣವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಮೂಡಬಿದ್ರೆಯಲ್ಲಿ ನಡೆದಿದೆ.

ಸ್ಥಳೀಯ ನಿವಾಸಿಗಳಾದ ಪ್ರವೀಣ್ ತೌರೋ(33) ಮತ್ತು ಗ್ರೇಷನ್ ಡಿಸೋಜಾ(32) ಮೃತ ದುರ್ದೈವಿಗಳು. ಮೂಡಬಿದ್ರೆಯಿಂದ 10 ಕಿ.ಮೀ. ದೂರದ ಕರಿಂಜೆ ಕಾಡಿಗೆ ಸೋಮವಾರ ರಾತ್ರಿ ಬೇಟೆಗೆ ಇಬ್ಬರು ತೆರಳಿದ್ದರು. ಆದರೆ ಮತ್ತೆ ಅವರು ಹಿಂದಿರುಗಿಲ್ಲ.MNG-MISSING

ಇಬ್ಬರ ಮೊಬೈಲ್ ಫೋನ್ ಗಳು ಸ್ವಿಚ್ ಆಫ್ ಆಗಿದ್ದು, ಎಲ್ಲೋ ಹೋಗಿರಬಹುದು ಎಂದು ಮನೆಯವರು ಸುಮ್ಮನಿದ್ದರು. ಆದ್ರೆ ಬೇಟೆಗೆ ತೆರಳಿದ್ದ ಜೀಪ್ ಇಂದು ಕಾಡಿನಲ್ಲಿ ಪತ್ತೆಯಾಗಿದೆ. ಆದ್ದರಿಂದ ಗಾಬರಿಗೊಂಡ ಮನೆಯವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.MNG-2

ವಿಷಯ ತಿಳಿದ ಮೂಡಬಿದ್ರೆ ಪೊಲೀಸರು ಮತ್ತು ಸ್ಥಳೀಯರು ಹುಡುಕಾಟ ಆರಂಭಿಸಿದ್ದಾರೆ. ಈ ಸಂದರ್ಭ ಇಬ್ಬರ ಮೃತ ದೇಹಗಳು ಕಾಡಿನಂಚಿನಲ್ಲಿ ಪತ್ತೆಯಾಗಿವೆ. ಖಾಸಗಿ ಟೆಂಪೋ ಚಾಲಕರಾಗಿರುವ ಪ್ರವೀಣ್ ತೌರೋ ಅವಿವಾಹಿತರಾಗಿದ್ದು, ಮೂಡಬಿದ್ರೆಯಲ್ಲಿ ಸರ್ವಿಸ್ ಸ್ಟೇಷನ್ ಮಾಲೀಕನಾಗಿರುವ ಗ್ರೇಷನ್ ವಿವಾಹಿತರಾಗಿದ್ದಾರೆ.ಇಬ್ಬರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರಬಹುದು ಎಂಬ ಮಾತು ಸಾರ್ವಜನಿಕರಲ್ಲಿ ಹರಿದಾಡುತ್ತಿದ್ದು. ಇವರ ಸಾವು ನಿಗೂಢವಾಗಿದೆ ಈ ಕುರಿತು ಮೂಡಬಿದ್ರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.WhatsApp Image 2018-03-22 at 8.22.50 AM

WhatsApp Image 2018-03-22 at 8.22.46 AM

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *