ಬ್ರೇಕಿಂಗ್ ನ್ಯೂಸ್
ಕ್ಷಯರೋಗದ ಬಗ್ಗೆ ಪ್ರತಿಯೊಬ್ಬರಿಗೂ ಮಾಹಿತಿ ಇರಲಿ ಕಾವೇರಮ್ಮ ಸೋಮಣ್ಣ , ಜನರಲ್ ತಿಮ್ಮಯ್ಯ ಹುಟ್ಟುಹಬ್ಬ ಅಚ್ಚುಕಟ್ಟಾಗಿ ಆಯೋಜಿಸಲು ಜಿಲ್ಲಾಧಿಕಾರಿ ಸೂಚನೆ , ಬೇಲೂರು ಶಾಸಕ ರುದ್ರೇಶಗೌಡ ನಿಧನ , ಮರೀಚಿಕೆಯಾದ ಕೊಟ್ಟಿಗೆ ಹಣ ಗ್ರಾ.ಪಂ ವಿರುದ್ಧ ಜಿ.ಪಂ ಸಿಇಒ ಗೆ ದಸಂಸ ದೂರು , 1 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ , ಕೊಡಗಿನ ಶಾಸಕರು ಜಿಲ್ಲೆಯನ್ನು ಅಭಿವೃದ್ಧಿಪಡಿಸಿದ್ದಲ್ಲಿ ಶಾಸಕರಿಗೆ ಟಿಕೆಟ್ ನೀಡಲು ಬಿಜೆಪಿಯ ವಿಳಂಭ ಯಾಕೆ ಸಂಕೇತ್ ಪೂವಯ್ಯ , ಮುದ್ರಕರು ಹಾಗೂ ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ಸಭೆ , ತಮಿಳು ಅತಿ ಹಿರಿಯ ಭಾಷೆ ದ್ರಾವಿಡ ಭಾಷಾ ಕುಟುಂಬಕ್ಕಿದೆ 4500 ವರ್ಷಗಳ ಇತಿಹಾಸ , ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಧಿಕಾರಿ ಸೂಚನೆ , ಅಪರಿಚಿತ ಯುವತಿಯ ಮೃತದೇಹ ಪತ್ತೆ ಕೊಲೆ ಶಂಕೆ ,

ಮಾ. 18 ರಂದು “ದಿವಾನ್ ಚೆಪ್ಪುಡಿರ ಪೊನ್ನಪ್ಪ” ಕೃತಿ ಬಿಡುಗಡೆ

Posted on: March 14, 2018

divan ponnappa
ಮಡಿಕೇರಿ : ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ರಚಿಸಿರುವ “ದಿವಾನ್ ಚೆಪ್ಪುಡಿರ ಪೊನ್ನಪ್ಪ’’ ಕೃತಿ ಬಿಡುಗಡೆ ಕಾರ್ಯಕ್ರಮ ಮಾ. 18 ರಂದು ನಡೆಯಲಿದೆ.

ಕೊಡವ ಮಕ್ಕಡ ಕೂಟ ಹಾಗೂ ಚೆಪ್ಪುಡಿರ ಕುಟುಂಬದ ಸಂಯುಕ್ತ ಆಶ್ರಯದಲ್ಲಿ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಅಂದು “ದಿವಾನ್ ಚೆಪ್ಪುಡಿರ ಪೊನ್ನಪ್ಪ’’ ಕೃತಿ ಲೋಕಾರ್ಪಣೆಗೊಳ್ಳಲಿದೆ. ಅಂದು ಬೆಳಗ್ಗೆ 10 ಗಂಟೆಗೆ ನಡೆಯುವ ಸಮಾರಂಭದ ಅಧ್ಯಕ್ಷತೆಯನ್ನು ಚೆಪ್ಪುಡಿರ ಕುಟುಂಬದ ಪಟ್ಟೆದಾರ ಚೆಪ್ಪುಡಿರ ಕೆ. ಅಯ್ಯಪ್ಪ ವಹಿಸಲಿದ್ದು, ಅವರೇ ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಹಾಗೂ ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಅತಿಥಿಗಳಾಗಿ ಭಾಗವಹಿಲಿದ್ದಾರೆ.

“ದಿವಾನ್ ಚೆಪ್ಪುಡಿರ ಪೊನ್ನಪ್ಪ” ಕೃತಿಯಲ್ಲಿ ಪೊನ್ನಪ್ಪ ದಿವಾನರಾಗಿ ನೇಮಕಗೊಂಡಿರುವುದು, ರಾಜರ ಕಾಲದಲ್ಲಿ ಅವರ ಪಾತ್ರ, ಬ್ರಿಟೀಷರು ಅವರನ್ನೇ ದಿವಾನರಾಗಿ ನೇಮಿಸಿರುವುದು, ರಾಜ ಚೆಪ್ಪುಡಿರ ಕುಟುಂಬವನ್ನು ನಾಶ ಮಾಡಲು ಮುಂದಾಗಿದ್ದು, ಚೆಪ್ಪುಡಿರ ಭವ್ಯ ಐನ್‍ಮನೆ, ಆ ಕುಟುಂಬದ ಸಮಾಜ ಸೇವೆ, ಜಾಗ ದಾನ, ಶಾಲೆ ಕಟ್ಟಿಸಿರುವುದು, ಮಡಿಕೇರಿಯಲ್ಲಿ ಮೊದಲ ಬಾರಿಗೆ ಕುಡಿಯುವ ನೀರಿಗೆ ಪಂಪ್ ಹಾಗೂ ಮೋಟರ್ ಅಳವಡಿಸಿರುವುದು ಮಂತಾದ ವಿಷಯಗಳ ಅಧ್ಯಯನ ನಡೆಸಿ ಈ ಕೃತಿಯನ್ನು ಐತಿಚಂಡ ರಮೇಶ್ ಉತ್ತಪ್ಪ ರಚಿಸಿದ್ದಾರೆ.

ಖ್ಯಾತ ಸಾಹಿತಿ ಡಾ. ತೀತಿರ ರೇಖಾ ವಸಂತ್ ಅವರ ಮುನ್ನುಡಿ ಬರೆದಿದ್ದಾರೆ ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಚೆಪ್ಪುಡಿರ ಕುಟುಂಬದ ಉತ್ತಮ ಜೀವನ ಸಹಕಾರ ಸಂಘದ ಉಪಾಧ್ಯಕ್ಷ ಚೆಪ್ಪುಡಿರ ಕಾರ್ಯಪ್ಪ, ಕಾರ್ಯಕ್ರಮದ ಸಂಚಾಲಕ ಚೆಪ್ಪುಡಿರ ರಾಕೇಶ್ ದೇವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *